Tel: 7676775624 | Mail: info@yellowandred.in

Language: EN KAN

    Follow us :


ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು

Posted date: 01 Aug, 2021

Powered by:     Yellow and Red

ದಶವಾರ ಗ್ರಾಮದ ಪ್ರೌಢಶಾಲೆಯಲ್ಲಿ ಕಳವು. ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ದೂರು

ನಗರವೂ ಸೇರಿದಂತೆ ತಾಲ್ಲೂಕಿನಾದ್ಯಂತ ಇತ್ತೀಚೆಗೆ ಕಳ್ಳತನಗಳು ಹೆಚ್ಚಾಗುತ್ತಿದ್ದು, ಮನೆಗಳ್ಳತನಗಳ ಜೊತೆಗೆ ಶಾಲೆಗಳನ್ನು ದೋಚುತ್ತಿದ್ದು, ಈಗ ದಶವಾರ ಗ್ರಾಮದ ಪ್ರೌಢಶಾಲೆ ಕಳ್ಳತನವಾಗಿದೆ.


ದಶವಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶುಕ್ರವಾರ ರಾತ್ರಿ ಸಮಯ ಕಳ್ಳತನವಾಗಿದ್ದು, ಶನಿವಾರ ಸಂಜೆ ಎಂ ಕೆ ದೊಡ್ಡಿ ಪೋಲಿಸ್ ಠಾಣೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ದೂರು ದಾಖಲಿಸಿದ್ದಾರೆ.


ಶಾಲೆಯ ಅಡುಗೆ ಮನೆಯ ದ್ವಾರವನ್ನು ಕಬ್ಬಿಣದ ಸಲಾಕೆಯಿಂದ ಮೀಟಿ, ಒಳ ನುಗ್ಗಿರುವ ದುಷ್ಕರ್ಮಿಗಳು, ಒಂದು ಗ್ಯಾಸ್ ಸಿಲಿಂಡರ್, ಅಡುಗೆ ಪಾತ್ರೆಗಳು, ಒಂದು ಒನ್ ಹೆಚ್ ಪಿ ನೀರಿನ ಪಂಪ್ ಸೆಟ್ ಕದ್ದಿದ್ದಾರೆ. ಇವುಗಳ ಜೊತೆಗೆ ಹಳೆಯ ಡೆಸ್ಕ್ ಗಳಿಂದ ಬೇರ್ಪಡಿಸಿಟ್ಟಿದ್ದ ಕಬ್ಬಿಣದ ಕಾಲುಗಳನ್ನು ಕದ್ದೊಯ್ದಿದ್ದಾರೆ.


ನಗರದ ಆರನೇ ತಿರುವಿನ ಮನೆಯೊಂದರಲ್ಲಿ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಹತ್ತಿರತ್ತಿರ ಒಂದು ಕೋಟಿ ರೂಪಾಯಿಗಳಷ್ಟು ನಗನಗದನ್ನು ಕದ್ದೊಯ್ದಿದ್ದು, ಈ ವಾರ ಸುಣ್ಣಘಟ್ಟ ಗ್ರಾಮದ ತೋಟದ ಮನೆಯೊಂದರಲ್ಲು ಒಂದೂವರೆ ಲಕ್ಷ ರೂಪಾಯಿಗಳಷ್ಟು ಚಿನ್ನ, ಬೆಳ್ಳಿ, ನಗದಿನ ಜೊತೆಗೆ ಸಿಲಿಂಡರ್ ಸಹ ಕದ್ದೊಯ್ದಿದ್ದಾರೆ. ಇವುಗಳನ್ನು ಗಮನಿಸಿದಾಗ ತಾಲ್ಲೂಕಿನಲ್ಲಿ ಕಳ್ಳರ ತಂಡವೊಂದು ಸಕ್ರಿಯವಾಗಿರುವುದು ಕಂಡುಬರುತ್ತದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑