Tel: 7676775624 | Mail: info@yellowandred.in

Language: EN KAN

    Follow us :


ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ

Posted date: 01 Aug, 2021

Powered by:     Yellow and Red

ಜನಸಾಮಾನ್ಯರಿಗಾಗಿ ರೋಟರಿ ಕ್ಲಬ್ ಕಾರ್ಯ ನಿರ್ವಹಿಸುತ್ತದೆ. ಎಂ ಕೆ ನಿಂಗಪ್ಪ

ರೋಟರಿ ಕ್ಲಬ್ ಎಂದಾಕ್ಷಣ ಅದು ಕೇವಲ ಪದಾಧಿಕಾರಿಗಳ ಆಸ್ತಿ ಎಂಬುದು ಜನರ ಭಾವನೆಯಾಗಿದೆ. ಕ್ಲಬ್ ಇರುವುದು ಜನಸಾಮಾನ್ಯರ ನೆರವಿಗಾಗಿ ಎಂಬುದನ್ನು ಮುಂದಿನ ದಿನಗಳಲ್ಲಿ ನಿರೂಪಿಸುತ್ತೇವೆ ಎಂದು ಚನ್ನಪಟ್ಟಣ ತಾಲ್ಲೂಕಿನ ರೋಟರಿ ಕ್ಲಬ್ ನೂತನ ಅಧ್ಯಕ್ಷ ವಕೀಲ ಎಂ ಕೆ ನಿಂಗಪ್ಪ ತಿಳಿಸಿದರು.

ಅವರು ಶನಿವಾರ ಇಳಿಹೊತ್ತಿನಲ್ಲಿ ನಗರದ ರೋಟರಿ ಕ್ಲಬ್ ನ ಸಭಾಂಗಣದಲ್ಲಿ ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದರು.


ಕೋವಿಡ್-19 ಎಂಬ ಸಾಂಕ್ರಾಮಿಕ ಮಹಾಮಾರಿ ಜಗತ್ತನ್ನೇ ತಲ್ಲಣಗೊಳಿಸುತ್ತಿದೆ. ಇಂತಹ ದುಸ್ತರ ಸಮಯದಲ್ಲಿ ನಮ್ಮ ರೋಟರಿ ಸಂಸ್ಥೆಯು ಜನರ ಜೊತೆ ಇರುತ್ತದೆ. ಕೊರೊನಾ ಬಗ್ಗೆ ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ, ಅರಿವು ಮೂಡಿಸಲು ನಮ್ಮ ತಂಡ ಸಜ್ಜಾಗುತ್ತಿದೆ. ಈಗಾಗಲೇ ಎರಡು ಹಂತಗಳನ್ನು ಮುಗಿಸಿ, ಮೂರನೇ ಹಂತ ಅದರಲ್ಲೂ ಮಕ್ಕಳಿಗೆ ಹರಡುತ್ತದೆ ಎಂಬ ಭೀತಿಯನ್ನು ತಜ್ಞರು ತಿಳಿಸಿದ್ದು, ನಾವು ಸಹ ಸರ್ಕಾರದ ನೀತಿನಿಯಮಗಳನ್ನು ಪಾಲಿಸಿ, ಜನರ ನೆರವಿಗೆ ಸದಾ ಸಿದ್ದರಿರುತ್ತೇವೆ ಎಂದರು.


ಮುಂದಿನ ದಿನಗಳಲ್ಲಿ ಪರಿಸರದಿಂದ ನಾವು, ಪರಿಸರಕ್ಕಾಗಿ ನಾವು ಎಂಬ ಧ್ಯೇಯವನ್ನಿಟ್ಟುಕೊಂಡು, ಗಿಡಗಳನ್ನು ನೆಟ್ಟು ಪೋಷಿಸುವುದು. ಪರಿಸರ ಮತ್ತು ಓಝೋನ್ ಪದರ ಹಾಗೂ ಸವಕಳಿ ಬಗ್ಗೆ ಮಾಹಿತಿ ನೀಡುವುದು ವಿದ್ಯಾರ್ಥಿಗಳನ್ನು ಪರಿಸರ ಕಾಳಜಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕ್ವಿಜ್ ನಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದು ಭರವಸೆಯ ಮಾತನ್ಬಾಡಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೋಲಿಸ್ ಉಪವಿಭಾಗಾಧಿಕಾರಿ ಕೆ ಎನ್ ರಮೇಶ್ ಅವರು ಮಾತಾನಾಡಿ, ಪರಿಸರದ ಅಸಮತೋಲನಕ್ಕೆ ಮನುಜರ ಅತಿಯಾಸೆಯೇ ಕಾರಣವಾಗಿದೆ. ಮುಂದಿನ ದಿನಗಳಲ್ಲಾದರೂ ನಾವೆಲ್ಲರೂ ಒಗ್ಗೂಡಿ ಪರಿಸರವನ್ನು ಉಳಿಸಿಬೆಳೆಸಬೇಕಾಗಿದೆ. ಮುಂದಿನ ದಿನಗಳಲ್ಲಿ ನಾವು ನಮ್ಮ ಪೀಳಿಗೆಗೆ ಕೊಡುವ ಸೌಭಾಗ್ಯ ಗವೇ ಪರಿಸರವಾಗಿದೆ ಎಂದರು.

ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ನ ಜವಾಬ್ದಾರಿ ಹೆಚ್ಚಿದೆ ಎಂದರು.


ಇಡೀ ದೇಶದಲ್ಲಿ ರೋಟರಿ ಸಂಸ್ಥೆಯು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ರೋಟರಿ ಸಂಸ್ಥೆಯು ಕೇವಲ ನಗರಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದ ಜನ ಸಾಮಾನ್ಯರಿಗೂ ತಮ್ಮ ಸೇವೆಯನ್ನು ನೀಡಬೇಕು. ಅಶಕ್ತರು, ಬಡವರನ್ನು ಗುರುತಿಸಿ ಆರ್ಥಿಕವಾಗಿ ಸಬಲರನ್ನಾಗಿಸಲು ಶ್ರಮಿಸಬೇಕು. ಎಲ್ಲರೂ ಒಗ್ಗೂಡಿ ಚನ್ನಪಟ್ಟಣ ನಗರವನ್ನು ಚಂದದ ನಗರವನ್ನಾಗಿ ರೂಪಿಸಲು ಪಣ ತೊಡಬೇಕು ಎಂದು ತಿಳಿಸಿದರು.


ರೋಟರಿ ಸಂಸ್ಥೆ ವಲಯದ ರಾಜ್ಯಪಾಲ ಹೊನ್ನೇಗೌಡ ಮಾತನಾಡಿ, ಅಧ್ಯಕ್ಷರು ಸೇರಿದಂತೆ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ಅರುಹಿದರು.

ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷ ಹೇಮುಕುಮಾರ್ ರವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ರೋಟರಿ ಸಹ ರಾಜ್ಯಪಾಲ ಪ್ರಶಾಂತ್, ಕಾರ್ಯದರ್ಶಿ ಗಣೇಶ್ ಎನ್, ವಿನುತಾ ನಿಂಗಪ್ಪ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑