Tel: 7676775624 | Mail: info@yellowandred.in

Language: EN KAN

    Follow us :


ಪ್ರಾದೇಶಿಕ ಆಯುಕ್ತರಿಂದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ

Posted date: 13 Aug, 2021

Powered by:     Yellow and Red

ಪ್ರಾದೇಶಿಕ ಆಯುಕ್ತರಿಂದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು ವಿಭಾಗೀಯ ಪ್ರಾದೇಶಿಕ ಆಯುಕ್ತರಾದ ನವೀನ್‌ರಾಜ್ ಸಿಂಗ್ ರವರು ಗುರುವಾರ ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಕಂದಾಯ ಇಲಾಖೆ, ಸರ್ವೆ ಇಲಾಖೆ, ಉಪನೋಂದಣಾಧಿಕಾರಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖಾ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿದರು.


ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿಯಾಗುವಂತಹ ಕ್ರಯದ ವಹಿವಾಟುಗಳಿಗೆ ಯಾವುದೇ ತಕರಾರುಗಳು ಸ್ವೀಕೃತಗೊಂಡಲ್ಲಿ ಕೂಡಲೇ ವಿಳಂಭಕ್ಕೆ ಆಸ್ಪದ ನೀಡದೆ ಪರಿಶೀಲಿಸಿ ತಕರಾರುದಾರರಿಗೆ ಸೂಕ್ತ ಹಿಂಬರಹವನ್ನು ನೀಡಿ ಕೂಡಲೇ ಖಾತೆ ಮಾಡಿ ಸಾರ್ವಜನಿಕರು ವಿನಾಕಾರಣ ಕಛೇರಿಗಳಿಗೆ ಓಡಾಡುವುದನ್ನು ತಪ್ಪಿಸುವಂತೆ ಸೂಚಿಸಿದರು. 


ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ವಹಿವಾಟು ನಡೆಸುವ ಸಂದರ್ಭದಲ್ಲಿ 11-ಇ ನಕ್ಷೆ ಮಾನ್ಯತಾ ಅವಧಿಯನ್ನು ಜಮೀನು ಭೂಪರಿವರ್ತನೆ ಆಗಿದೆಯೇ ಅಥವಾ ಇಲ್ಲವೇ ಎಂಬುವುದನ್ನು ಪರಿಶೀಲಿಸಿಕೊಂಡು ಕ್ರಯ ಮಾಡಬೇಕು ಎಂದು ಸೂಚಿಸಿದರು.


 ಕ್ರಯದ ಸಂದರ್ಭದಲ್ಲಿ ಕ್ರಯದಾರರ ಹೆಸರು ಮತ್ತು ವಿಳಾಸಗಳನ್ನು ತಪ್ಪಾಗಿ ನಮೂದಿಸಿರುತ್ತಿರುವುದು ಕಂಡುಬಂದಿದ್ದು, ಅಧಿಕಾರಿಗಳು ಹಾಗೂ ದತ್ತಾಂಶ ನಮೂದಕರು ಮಾಡುವಂತಹ ಸಣ್ಣಪುಟ್ಟ ತಪ್ಪುಗಳಿಂದ ವಿನಾಕಾರಣ ಸಾರ್ವಜನಿಕರು ತೊಂದರೆಯನ್ನು ಅನುಭವಿಸುತ್ತಿರುವುದು ಕಂಡು ಬಂದಿರುತ್ತದೆ. ಇಂತಹ ತಪ್ಪುಗಳಿಗೆ ಅವಕಾಶ ನೀಡದೇ ಹೆಸರು ಮತ್ತು ವಿವರಗಳನ್ನು  ಸರಿಯಾಗಿ ನಮೂದಿಸಿ ನೋಂದಣಿ ಮಾಡಬೇಕಾಗಿ ಜಿಲ್ಲೆಯ ಎಲ್ಲಾ ಉಪನೋಂದಣಾಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. 


ಜಿಲ್ಲೆಯಲ್ಲಿ ಈಗಾಗಲೇ ದರಖಾಸ್ತು ಮೂಲಕ ಸಾಗುವಳಿ ಚೀಟಿಗಳನ್ನು ವಿತರಿಸಿದ್ದು ದುರಸ್ಥಿ ಕಾರ್ಯ ಕೈಗೊಂಡಿರುವುದಿಲ್ಲ. ಇದರಿಂದಾಗಿ ಪ್ರಸ್ತುತ ರೈತರು ತಮ್ಮ ಜಮೀನಿನ ಗಡಿಗಳನ್ನು ಸರಿಯಾಗಿ ಗುರುತಿಸಿಕೊಳ್ಳಲಾಗದೆ ಹದ್ದುಬಸ್ತು ಕಾರ್ಯಗಳನ್ನು ಕೈಗೊಳ್ಳಲಾಗದೆ, ಕುಟುಂಬದಲ್ಲಿ  ವಿಭಾಗ ಹಾಗೂ ಇತರೆ ವಹಿವಾಟು ಕಾರ್ಯಗಳನ್ನು  ಮಾಡಿಕೊಳ್ಳಲು ಆಗದೆ ಹಲವು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದು ಇಂತಹ ತಪ್ಪುಗಳನ್ನು ತಡೆಯಲು ಕ್ರಿಯಾ ಯೋಜನೆಯನ್ನು  ಸಿದ್ದಪಡಿಸಿಕೊಂಡು ಶೀಘ್ರವಾಗಿ ದುರಸ್ಥಿ ಕಾರ್ಯಗಳನ್ನು ಕೈಗೊಳ್ಳಲು ಸಭೆಯಲ್ಲಿ ಹಾಜರಿದ್ದ ತಹಶೀಲ್ದಾರ್‌ಗಳಿಗೆ ಮತ್ತು ಭೂದಾಖಲೆಗಳ ಉಪನಿರ್ದೇಶಕರಿಗೆ ಹಾಗೂ  ಸಹಾಯಕ ನಿರ್ದೇಶಕರಿಗೆ ಸೂಚಿಸಿದರು.


ಸಭೆಯಲ್ಲಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ್, .ಜಿಲ್ಲಾಧಿಕಾರಿ ಡಾ:ರಾಕೇಶ್ ಕುಮಾರ್ ಕೆ,  ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪವಿಭಾಗಧಿಕಾರಿ ಮಂಜುನಾಥ್, ಡಿಡಿಎಲ್‌ಆರ್ ಸಂತೋಷ್, ತಹಶೀಲ್ದಾರ್‌ಗಳಾದ ವಿಜಯ್ ಕುಮಾರ್, ವಿಶ್ವನಾಥ್, ನಾಗೇಶ್, ಶ್ರೀನಿವಾಸ್ ಪ್ರಸಾದ್ ಇನ್ನಿತರ ಅಧಿಕಾರಿಗಳು ಉಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑