Tel: 7676775624 | Mail: info@yellowandred.in

Language: EN KAN

    Follow us :


ದಾನದಾನಕ್ಕೂ ಜೀವದಾನ ಮುಖ್ಯ, ಜೀವದಾನಕ್ಕೆ ರಕ್ತದಾನ ಮುಖ್ಯ. ಸಿ ಪಿ ಯೋಗೇಶ್ವರ್

Posted date: 28 Aug, 2021

Powered by:     Yellow and Red

ದಾನದಾನಕ್ಕೂ ಜೀವದಾನ ಮುಖ್ಯ, ಜೀವದಾನಕ್ಕೆ ರಕ್ತದಾನ ಮುಖ್ಯ. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ, ಆ. ೨೭: ರಕ್ತದಾನ ಮಹಾದಾನವಾಗಿದ್ದು, ಸಕಾಲಕ್ಕೆ ರಕ್ತ ಸಿಗದೆ ಭೂಮಿಯ ಮೇಲೆ ಪ್ರತಿನಿತ್ಯ ನೂರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ನಿಟ್ಟಿನಲ್ಲಿ ನನ್ನ ಹುಟ್ಟುಹಬ್ಬದ ಪ್ರಯುಕ್ತ ಸ್ವಯಂಪ್ರೇರಿತ ರಕ್ತದಾನ ಮಾಡಲು ಮುಂದಾಗಿರುವುದು ನನಗೆ ಸಂತೋಷ ಉಂಟು ಮಾಡಿದ್ದು, ನನ್ನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ಎಲ್ಲರಿಗೂ ನಾನು ಚಿರಋಣಿಯಾಗಿರುತ್ತೇನೆ ಎಂದು ಕ್ಷೇತ್ರದ ಮಾಜಿ ಶಾಸಕರು, ಮಾಜಿ ಸಚಿವರು, ಹಾಲಿ ವಿಧಾನಪರಿಷತ್ ಸದ್ಯರಾದ ಸಿ.ಪಿ.ಯೋಗೇಶ್ವರ್‌ಅವರು ಅಭಿಪ್ರಾಯಿಸಿದರು.


ಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಹುತಾತ್ಮ ಯೋಧರ ಸವಿನೆನಪಿಗಾಗಿ, ಮಹಾನ್ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ್ ಆಜಾದ್ ಅವರ ಸವಿನೆನಪು ಮತ್ತು ವಿಧಾನಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರ  58 ನೇ ಜನ್ಮದಿನದ ಪ್ರಯುಕ್ತ ಗ್ರಾಮಾಂತರ ಯುವ ಮೋರ್ಚಾ ಬಿಜೆಪಿ ಘಟಕ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಇವರ ಸಹಯೋಗದೊಂದಿಗೆ ಶುಕ್ರವಾರ ಪಟ್ಟಣದ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ರಾಜ್ಯದಲ್ಲಿ ಸದ್ಯಕ್ಕೆ ಕೊರೋನಾ ಕಡಿಮೆ ಆಗಿರಬಹುದು. ಆದರೆ ತಜ್ಞರ ವರದಿಯಂತೆ ಕೊರೋನಾ ಮತ್ತಷ್ಟು ಅಲೆಗಳು ಬರುವ ಮುನ್ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೊರೋನಾದಂತಹ ಸಂಧಿಗ್ದ ಪರಿಸ್ಥಿತಿಯಲ್ಲಿ ನನ್ನ ಜನ್ಮ ದಿನವನ್ನು ನಿರಾಕರಿಸಿದರೂ ಅಭಿಮಾನಿಗಳು ಹಾಗೂ ಯುವ ಮೋರ್ಚಾ ಕಾರ್ಯಕರ್ತರು ಜನ್ಮದಿನಾಚರಣೆ ಪ್ರಯುಕ್ತ ರಕ್ತದಾನ ಶಿಬಿರದಂತ ಮಹತ್ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.


ಇಂದು ಎಲ್ಲೆಡೆ ಕೊರೋನಾ ಸೋಂಕು ಮಹಾಮಾರಿ ಹರಡಿರುವುದರಿಂದ ಕಳೆದ ಒಂದೂವರೆ ವರ್ಷದಿಂದ ರಾಜ್ಯದಲ್ಲಿ ನಡೆಯುತ್ತಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳು ನಿಂತು ಹೋಗಿವೆ. ರಾಜ್ಯದಲ್ಲಿ ಕೊರೋನಾ ಕಾಲಿಡುವ ಮುನ್ನ ರಾಜ್ಯದಲ್ಲಿನ ಸಂಘಸಂಸ್ಥೆಗಳು ಐದಾರು ತಿಂಗಳಿಗೊಮ್ಮೆ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರಕ್ತ ಸಂಗ್ರಹಣೆ ಮಾಡಿ ರಕ್ತಕೇಂದ್ರಗಳಿಗೆ ನೀಡುತ್ತಿದ್ದರು. ಇದರಿಂದ ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ ಅಗತ್ಯ ರಕ್ತ ದೊರೆತು ತಾಯಿ ಮಗುವಿನ ಪ್ರಾಣ ಉಳಿಯುತ್ತಿತ್ತು. ಅಪಘಾತಕ್ಕೆ ಒಳಗಾದವರಿಗೆ ಸಕಾಲಕ್ಕೆ ರಕ್ತ ಸಿಗುತ್ತಿತ್ತು. ಜೊತೆಗೆ ಶಸ್ತ್ರ ಚಿಕಿತ್ಸೆ ವೇಳೆ ಸಹ ರಕ್ತದ ಪೂರೈಕೆಯಾಗಿ ಜೀವ ಉಳಿಯುತ್ತಿತ್ತು. ಆದರೆ ಕಳೆದ ಒಂದೂವರೆ ವರ್ಷದಿಂದ ಪ್ರಪಂಚವನ್ನೇ ಕೊರೋನಾ ಮಹಾಮಾರಿಗೆ ಸಿಲುಕಿದ್ದು, ಇದರಿಂದ ಯಾರೂ ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಜೊತೆಗೆ ಸಂಘ ಸಂಸ್ಥೆಗಳು ರಕ್ತದಾನಶಿಬಿರಕ್ಕೆ ಮುಂದಾಗುತ್ತಿಲ್ಲ. ಇದರಿಂದ ಸಕಾಲಕ್ಕೆ ರಕ್ತ ಸಿಗದೆ ಪ್ರತಿನಿತ್ಯ ನೂರಾರು ಮಂದಿ ಸಾವನ್ನಪ್ಪುತ್ತಿದ್ದು, ಇಂತಹ ಸಂದರ್ಭದಲ್ಲಿ ರಾಜಕಾರಣಿಗಳ ಹುಟ್ಟುಹಬ್ಬಗಳಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಆರೋಗ್ಯವಂತರ ರಕ್ತವನ್ನು ಪಡೆದು ಅವಶ್ಯಕತೆ ಇರುವವರಿಗೆ ನೀಡಿ ಅವರ ಪ್ರಾಣ ಉಳಿಸುವುದು ಪುಣ್ಯದ ಕೆಲಸವಾಗಿದೆ. ಇಂತಹ ಪುಣ್ಯದ ಕೆಲಸವನ್ನು ನನ್ನ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವ ತಾಲೂಕಿನ ಯುವಶಕ್ತಿಗೆ ನನ್ನ ಅಭಿನಂದನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದೃಷ್ಟಿ ಐ ಕ್ಲಿನಿಕ್ ಸಹಯೋಗದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸಿ 50 ಕ್ಕೂ ಹೆಚ್ಚು ಮಂದಿ ತಪಾಸಣೆಗೆ ಒಳಗಾದರು.  


 ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಸದಸ್ಯರಾದ ಸಿ.ಪಿ.ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ಡಾ.ದೇವರಾಜು, ಬಿಜೆಪಿ ಮುಖಂಡರಾದ ಎಂ.ಎನ್.ಆನಂದಸ್ವಾಮಿ, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಮಲವೇಗೌಡ, ಸದಸ್ಯರಾದ ಕೇಬಲ್ ಮಂಜುನಾಥ್, ಚಕ್ಕಲೂರು ಚೌಡಯ್ಯ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ತಾ.ಪಂ. ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್(ಶಿವು), ಬಿ.ಯೋಗೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಎಲೇಕೇರಿ ರವೀಶ್, ಬಿಜೆಪಿ ಮುಖಂಡರು ಮತ್ತು ಯೋಗೇಶ್ವರ್ ಅಭಿಮಾನಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

[8/28, 07:26] Go.  Ra.  Srinivas: *ನಗರದ ಪ್ರಥಮ ದರ್ಜೆ ಕಾಲೇಜಿಗೆ ಉತ್ತಮ ಹೆಸರಿದೆ. ನ್ಯಾಕ್ ಸಮಿತಿ ಉತ್ತಮ ವರದಿ ನೀಡುವ ವಿಶ್ವಾಸವಿದೆ. ಹೆಚ್ಡಿಕೆ*


ಚನ್ನಪಟ್ಟಣ, ಆ. 27:  ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ ನೀಡಿದ್ದು ಕಾಲೇಜಿನ ಪರವಾಗಿ ಉತ್ತಮ ವರದಿ ನೀಡುವ ವಿಶ್ವಾಸ ಇದೆ ಎಂದು ಮಾಜಿ ಮುಖ್ಯಮಂತ್ರಿಗಳು ಕ್ಷೇತ್ರದ ಶಾಸಕರು ಹಾಗೂ ಕಾಲೇಜಿಗೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನಲ್ಲಿ ಅಭಿವೃದ್ಧಿ ಮಾಡಲಾಗಿರುವ ಧನ್ವಂತರಿ ಉದ್ಯಾನವನವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಕಾಲೇಜಿಗೆ ನ್ಯಾಕ್ ಸಮಿತಿ ಭೇಟಿ ಮಾಡಿದ್ದು ಈಗಾಗಲೆ ಕಾಲೇಜಿನ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಕಾಲೇಜಿನ ಉಪನ್ಯಾಸಕರಿಂದ ಕಾಲೇಜಿನ ಫಲಿತಾಂಶದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪೋಷಕರಿಂದ ಕಾಲೇಜಿನ ಶಿಕ್ಷಣದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಇಂದು ಸಹ ಮಧ್ಯಾಹ್ನದ ಬಳಿಕ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ನ್ಯಾಕ್ ಸಮಿತಿಯಿಂದ ಕಾಲೇಜಿನ ಬಗ್ಗೆ ಸರ್ಕಾರಕ್ಕೆ ಉತ್ತಮ ವರದಿ ನೀಡುವ ವಿಶ್ವಾಸ ಇದೆ ಎಂದು ಹೇಳಿದರು.


ಕಾಲೇಜಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹೆಚ್ಚು ಶಿಕ್ಷಣ ಪಡೆಯುತ್ತಿದ್ದಾರೆ. ಕಾಲೇಜಿನಲ್ಲಿ 3,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ಈ ನಿಟ್ಟಿನಲ್ಲಿ ಕಾಲೇಜಿಗೆ ಅಗತ್ಯ ಇರುವ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಈ ನಿಟ್ಟಿನಲ್ಲಿ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯಗಳ ಸಂಪೂರ್ಣವಾಗಿದೆ. ಕಾಲೇಜಿಗೆ ಹೆಚ್ಚಿನ ಸೌಲಭ್ಯ ಅಗತ್ಯವಿದ್ದಲ್ಲಿ ಒದಗಿಸುವುದಾಗಿ ಕುಮಾರಸ್ವಾಮಿ ಅವರು ತಿಳಿಸಿದರು.


ಮೈಸೂರಿನಲ್ಲಿ ಯುವತಿ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಗೃಹಸಚಿವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ ತಾಲೂಕು ಸೇರಿದಂತೆ ರಾಜ್ಯದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆ. ಮೈಸೂರು ಪ್ರಕರಣದಂತೆ ತುಮಕೂರಿನಲ್ಲೂ ಅತ್ಯಾಚಾರ ಪ್ರಕರಣ ನಡೆದಿದೆ. ಇಂದು ಸಾರ್ವಜನಿಕವಾಗಿ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟು ಕಣ್ಮುಚ್ಚಿ ಕುಳಿತಿದ್ದರೆ. ಇದು ಅತ್ಯಾಚಾರ ಪ್ರಕರಣಗಳಿಗೆ ದಾರಿಯಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಅಂಗಡಿಗಳಲ್ಲಿ ಮಟ್ಕಾ, ಮದ್ಯಮಾರಾಟ ನಡೆಯುತ್ತಿದೆ. ಆದರೂ ಪೊಲೀಸ್ ಇಲಾಖೆ ಮೌನವಾಗಿದೆ. ಸರ್ಕಾರವು ಪೊಲೀಸರಿಂದ ಹಣ ಪಡೆದು ವರ್ಗಾವಣೆ ಮಾಡುವುದನ್ನು ನಿಲ್ಲಿಸುವವರೆಗೆ ಪೊಲೀಸರು ನಿಷ್ಟರಾಗಿ ಕೆಲಸ ಮಾಡುವುದಿಲ್ಲ ಎಂದು ಆರೋಪ ಮಾಡಿದರು.


ಬಳಿಕ ಪ್ರಾಂಶುಪಾಲರ ಜೊತೆ ಚರ್ಚೆ ಮಾಡಿದರು. ಸಂದರ್ಭದಲ್ಲಿ ತಹಸೀಲ್ದಾರ್ ಎಲ್. ನಾಗೇಶ್, ಬಿಇಓ ನಾಗರಾಜು, ಇಓ ಚಂದ್ರು, ನಗರಸಭಾ ಪೌರಾಯುಕ್ತ ಶಿವನಂಕಾರಿಗೌಡ,  

ಕಾಲೇಜಿನ ಹಾಲಿ ಹಾಗೂ ಹಳೆ ವಿದ್ಯಾರ್ಥಿಗಳ ಸಂಘದಿಂದ ಕುಮಾರಸ್ವಾಮಿ ಅವರನ್ನು ಸನ್ಮಾನಿಸಲಾಯಿತು. ಸಂದರ್ಭದಲ್ಲಿ ಪ್ರಾಂಶುಪಾಲ ಡಾ. ವಿ. ವೆಂಕಟೇಶ್, ಸಮಾಜ ಸೇವಕ ಪಂಚಮಿ ಟ್ರಸ್ಟ್‌ನ ಪ್ರಸನ್ನ, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಉಜ್ಜನಹಳ್ಳಿ ರವೀಶ್, ಕೂರಣಗೆರೆ ರವಿ, ಹೆಚ್.ಸಿ.ಜಯಮುತ್ತು, ಬೋರ್‌ವೆಲ್ ರಾಮಚಂದ್ರು, ರಾಂಪುರ ರಾಜಣ್ಣ, ಸತೀಶ್‌ಬಾಬು ಸೇರಿದಂತೆ ಕಾಲೇಜುನ ಉಪನ್ಯಾಸಕರು ಇದ್ದರು.


ಶ್ಲಾಘನೆ: ಕಾಲೇಜು ಅಭಿವೃದ್ಧಿ ಬಗ್ಗೆ ಪರಿಶೀಲನೆ ಮಾಡಲು ನ್ಯಾಕ್ ಸಮಿತಿ ಬಂದಿದ್ದ ವೇಳೆ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕುಮಾರಸ್ವಾಮಿ ಅವರು ಭಾಗವಹಿಸಬೇಕಿತ್ತು. ಆದರೆ ನಿನ್ನೆ ಅವರು ಕೆಲ ಕಾರಣದಿಂದ ಕಾಲೇಜಿಗೆ ಬಂದಿರಲಿಲ್ಲ. ಆದರೆ ಶುಕ್ರವಾರ ಅವರು ಹಾಜರಾಗಿ ಕಾಲೇಜಿನಲ್ಲಿನ ಅಭಿವೃದ್ಧಿಗಳ ಬಗ್ಗೆ ಮತ್ತಷ್ಟು ಮಾಹಿತಿ ಪಡೆದು ಏನೇ ಸಹಕಾರ ಬೇಕಾದರೂ ಕೇಳಿ ಎಂದು ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಪ್ರೋತ್ಸಾಹ ನೀಡಿದ್ದು ಶ್ಲಾಘನೀಯವಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑