Tel: 7676775624 | Mail: info@yellowandred.in

Language: EN KAN

    Follow us :


ಪತ್ರಕರ್ತರು ಏಕಮುಖಿಯಾಗಿರದೆ, ಯಾರದೇ ಒತ್ತಡಕ್ಕೆ ಮಣಿಯದೆ ಕ್ರಿಯಾಶೀಲರಾಗಿರಬೇಕು. ಸಿ ಪಿ ಯೋಗೇಶ್ವರ್

Posted date: 01 Sep, 2021

Powered by:     Yellow and Red

ಪತ್ರಕರ್ತರು ಏಕಮುಖಿಯಾಗಿರದೆ, ಯಾರದೇ ಒತ್ತಡಕ್ಕೆ ಮಣಿಯದೆ ಕ್ರಿಯಾಶೀಲರಾಗಿರಬೇಕು. ಸಿ ಪಿ ಯೋಗೇಶ್ವರ್

ಚನ್ನಪಟ್ಟಣ: ಪತ್ರಕರ್ತರು ಎಂದರೆ ಇಡೀ ಸಮಾಜದಲ್ಲಿ ಒಂದೊಳ್ಳೆಯ ಗೌರವವಿದೆ. ಆ ಗೌರವವನ್ನು ಅವರು ಆಸೆ ಆಮಿಷಕ್ಕೊಳಗಾಗಿ ಹಾಳುಮಾಡಿಕೊಳ್ಳದೆ, ಬದ್ದತೆ ಮೆರೆಯುವ ಕೆಲಸ ಮಾಡಬೇಕು. ಕ್ರಿಯಾಶೀಲರಾಗಿ ಕೆಲಸ ಮಾಡಲು ಪತ್ರಕರ್ತರ ಮನಸ್ಥಿತಿ ಹಾಗೂ ವ್ಯವಸ್ಥೆಗಳು ಚನ್ನಾಗಿರಬೇಕು. ನಾವುಗಳು ಸಹ ಅವರ ಒಳ್ಳೆಯ ಮನಸ್ಥಿತಿಯನ್ನು ಅರ್ಥೈಸಿಕೊಂಡು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು ಎಂದು ಮಾಜಿ ಸಚಿವರು ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್‌ ಅವರು ಅಭಿಪ್ರಾಯಿಸಿದರು.

ಅವರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪಟ್ಟಣದ ಮಹೇಶ್ವರ ಕನ್ವೆನ್ಷನ್ ಹಾಲ್‌ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.


ಪತ್ರಕರ್ತರು ಕ್ರಿಯಾಶೀಲರಾಗಿ ಕೆಲಸ ಮಾಡಲು ಅವರ ಜೀವನಕ್ಕೆ ಭದ್ರತೆಯ ಅವಶ್ಯಕತೆ ಇರುತ್ತದೆ. ಸಮಾಜದಲ್ಲಿನ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗವನ್ನು ನಿಯಂತ್ರಣ  ಮಾಡುವಲ್ಲಿ ಜವಾಬ್ದಾರಿಯುತ ಕೆಲಸ ಮಾಡುತ್ತಿರುವ ಪತ್ರಿಕೋದ್ಯಮದಲ್ಲಿ ಪತ್ರಕರ್ತರ ಮನಸ್ಥಿತಿ ಮತ್ತು ವ್ಯವಸ್ಥೆಗಳು ಸರಿಯಾಗಬೇಕಿದೆ. ಪತ್ರಕರ್ತರು ಯಾರದೋ ಒತ್ತಡಕ್ಕೋ ಯಾರದೋ ಪ್ರಭಾವಕ್ಕೋ ಕೆಲಸ ಮಾಡಬೇಕು ಎಂಬ ಸನ್ನಿವೇಶ ಬಂದಾಗ ಪತ್ರಿಕೋದ್ಯಮ ಕ್ರಿಯಾಶೀಲ ಕೆಲಸ ಮಾಡಲುನ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಸಮಾಜಮುಖಿಯಾಗಿ ಪತ್ರಕರ್ತರ ಜೊತೆಗೆ ನಿಲ್ಲಬೇಕು ಎಂದು ಹೇಳಿದರು.


*ಪತ್ರಕರ್ತರ ನಿವೇಶನಕ್ಕೆ 10 ಲಕ್ಷ ರೂ. ಸಹಕಾರ:*

ಆಕಸ್ಮಿಕವಾಗಿ ಕೋವಿಡ್‌ನಂತ ಸಾಂಕ್ರಾಮಿಕ ರೋಗಕ್ಕೆ ತುತ್ತಾದಂತ ಸಂದರ್ಭ ಪತ್ರಕರ್ತರನ್ನು ಒಂದು ವ್ಯಾಪ್ತಿಗೆ ಸೇರಿಸಿ ಅವರಿಗೆ ಭದ್ರತೆಯನ್ನು ಕಲ್ಪಿಸುವುದು ಸರ್ಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ನಾನು ಸರ್ಕಾರದಲ್ಲಿ ಪತ್ರಕರ್ತರ ಬಗ್ಗೆ ಗಮನ ಸೆಳೆಯುತ್ತೇನೆ ಎಂದು ಹೇಳಿದ ಯೋಗೇಶ್ವರ್ ಪತ್ರಕರ್ತರ ಭದ್ರತೆಗಾಗಿ ನಿವೇಶನ ಪಡೆಯಲು 10 ಲಕ್ಷ ರೂ. ಸಹಾಯಧನ ನೀಡುತ್ತಿದ್ದು ಇದು ವೇದಿಕೆಯಲ್ಲಿ ಕುಳಿತಿರುವ ಗಣ್ಯರಿಗೂ ಇದು ಪ್ರೇರಣೆಯಾಗಲಿ ಎಂದು ಹೇಳಿ ಸ್ಥಳದಲ್ಲೇ 10 ಲಕ್ಷ ರೂ. ನಗದನ್ನು ಸಂಘದ ಸದಸ್ಯರಿಗೆ ವಿತರಣೆ ಮಾಡಿದರು. ವೇದಿಕೆಯ ಮೇಲಿನ ಅನೇಕ ಗಣ್ಯರು ನನಗಿಂತಲೂ ಬಲಿಷ್ಠರಾಗಿದ್ದಾರೆ. ಆರ್ಥಿಕವಾಗಿ ಸದೃಢರಾಗಿದ್ದಾರೆ. ಅವರನ್ನು ನೀವು ಬೆಳೆಸಿದ್ದೀರಿ ! ಅವರು ಸಹ ತಮಗೆ ನನಗಿಂತ ಹೆಚ್ಚಿನ ರೀತಿಯಲ್ಲಿ ಆರ್ಥಿಕವಾಗಿ ಸಹಾಯ ಹಸ್ತ ಚಾಚುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.


ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು ಅವರು ತಾಲ್ಲೂಕಿನ ಪತ್ರಕರ್ತರ ಸಂಘದ ಸದಸ್ಯರಿಗೆ ಗುರುತಿನ ಕಾರ್ಡ್ ವಿತರಿಸಿ ಮಾತನಾಡಿ, ಸಮಾಜಕ್ಕೆ ಇಂದು ಬೇಕಾಗಿರುವುದು ವಿಸಿಟಿಂಗ್ ಕಾರ್ಡ್ ಪತ್ರಕರ್ತರಲ್ಲ. ವೃತ್ತಿ ಬದ್ದತೆಯನ್ನು ಹೊಂದಿರುವ ಪತ್ರಕರ್ತರು ಬೇಕಿದೆ. ನೀವು ನಡೆದು ಹೋದರೆ ನಿಮ್ಮ ಹಿಂದೆ ಒಬ್ಬರು ನಿಮ್ಮನ್ನು ಒಳ್ಳೆಯ ಪತ್ರಕರ್ತ ಎಂದು ಪ್ರಶಂಸೆ ಮಾಡುವಂತಾಗಬೇಕು. ಕೆಲವೆಡೆ ಶೋಕಿಗಾಗಿ ಪತ್ರಕರ್ತರಾಗಿ ಬ್ಲಾಕ್‌ಮೇಲ್ ಪದ್ದತಿಯ ವಿಚಾರದಲ್ಲಿ ಪತ್ರಕರ್ತರಿಗೆ ಕಳಂಕ ತರುವ ಘಟನೆಗಳು ನಡೆಯುತ್ತಿವೆ. ಪತ್ರಿಕೆಯಲ್ಲಿ ನಾಳಿನ ಸಂಚಿಕೆ ನೋಡಿ ಎಂದು ಬರೆಯುವುದು ಪತ್ರಿಕಾ ಧರ್ಮವಲ್ಲ. ಮಾಹಿತಿ ಹಕ್ಕನ್ನು ಬ್ಲಾಕ್ ಮೇಲ್ ತಂತ್ರವಾಗಿ ಅನುಸರಿಸುವುದು ಸಹ ಪತ್ರಕರ್ತರಿಗೆ ಶೋಭೆಯಲ್ಲ. ಇವೆಲ್ಲವೂ ನಮ್ಮನ್ನು ಸಮಾಜದಿಂದ ದೂರ ಕೊಂಡೊಯ್ಯುತ್ತವೆ. ಇವೆಲ್ಲವನ್ನು ನಾವೇ ಸ್ವಚ್ಚತೆ ಮಾಡಲು ನಮ್ಮಲ್ಲೇ ಪರಿವರ್ತನೆಯಾಗಬೇಕು.


ಕೆಲವರು ತಮ್ಮ ಸ್ವಂತಿಕೆಯ ವಿಚಾರಕ್ಕಾಗಿ ಬ್ಲಾಕ್‌ಮೇಲ್ ಮಾಡುವ ಮೂಲಕ ಲಾಭಕ್ಕಾಗಿ ಹೆಜ್ಜೆ ಇಡುತ್ತಿರುವ ಆತಂಕಕಾರಿ ಬೆಳವಣಿಕೆಯಲ್ಲಿ ನಾವು ನಿಂತಿದ್ದೇವೆ. ಇಂತಹ ಪರಿಸ್ಥಿಯಲ್ಲಿ ನಾವು ಮುಂದುವರೆದರೆ ಪತ್ರಕರ್ತರನ್ನು ಬೀದಿಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡುವ ಕಾಲ ಬರುತ್ತದೆ. ನಮ್ಮ ವೃತ್ತಿಯ ಬಗ್ಗೆ ನಮಗೆ ಬದ್ದತೆ ಇರಬೇಕು ಆಡಳಿತದಲ್ಲಿರಲಿ ಸಮಾಜದಲ್ಲಿರಲಿ, ಲೋಪದೋಷಗಳು ಬಂದಾಗ ಅದಕ್ಕೆ ಕನ್ನಡಿ ಹಿಡಿಯುವಂತ, ಅದರ ಬಗ್ಗೆ ಬೆಳಕನ್ನು ಚೆಲ್ಲುವಂತ ನಿಟ್ಟಿನಲ್ಲಿ ನಮ್ಮ ಧ್ಯೇಯ ಇರಬೇಕು. ನಾವು ಯಾರನ್ನೋ ಹೊಗಳಿ ಉನ್ನತ ಮಟ್ಟಕ್ಕೆ ಏರಿಸುವಂತದ್ದು ಪತ್ರಿಕೋದ್ಯಮದ ಧ್ಯೇಯ ಅಲ್ಲ. ಅಂತಹ ಪತ್ರಕರ್ತರನ್ನು ನಮ್ಮ ಸುದ್ದಿ ಮನೆಯಿಂದ ದೂರ ಇಡಬೇಕು ಎಂದು ಹೇಳಿದರು.


ಮಾಜಿ ಶಾಸಕ ಎಂ.ಸಿ.ಅಶ್ವಥ್, ಬಮೂಲ್ ನಿರ್ದೇಶಕ ಹೆಚ್.ಸಿ.ಜಯಮುತ್ತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪತ್ರಕರ್ತರ ಮಕ್ಕಳಿಗೆ ಮಾಜಿ ಉಪಸಭಾಪತಿ ಪುಟ್ಟಣ್ಣ ರವರ ಪುತ್ರ ಶಿಶಿರ್‌ಪುಟ್ಟಣ್ಣ ಪತ್ರಿಭಾ ಪುರಸ್ಕಾರ ವಿತರಿಸಿ ಪತ್ರಕರ್ತರಿಗೆ ಶುಭಕೋರಿದರು.


ಕಾರ್ಯಕ್ರಮದಲ್ಲಿ ಬಿ.ವಿ.ಹಳ್ಳಿ ಗ್ರಾಮದ ಬಿ.ಟಿ.ಮುದ್ದೇಶ್ ಮತ್ತು ರಾಜ್ಯ ಪತ್ರಿಕಾ ಮಾನ್ಯತಾ ಸಮಿತಿಯ ಸದಸ್ಯರಾದ ಪಟ್ಟಣದ  ಆಸಿಫ್ ಮಲ್ಲಿಕ್‌ ಅವರನ್ನು ಮಾಜಿ ಶಾಸಕ ಎಂ.ಸಿ.ಅಶ್ವಥ್ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಎಲ್ಲಾ ಗಣ್ಯರನ್ನು ಸನ್ಮಾನಿಸಲಾಯಿತು.    

ವೇದಿಕೆಯಲ್ಲಿ ಸಮಾಜ ಸೇವಕರು ಪಂಚಮಿ ಟ್ರಸ್ಟ್ ಸಂಸ್ಥಾಪಕರಾದ ಪಿ.ಪ್ರಸನ್ನ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಂಪುರ ಆರ್. ಎಂ. ಮಲವೇಗೌಡ, ಕುಕ್ಕುಟ ಮಹಾಮಂಡಳಿ ರಾಜ್ಯಾಧ್ಯಕ್ಷ ಡಿ.ಕೆ.ಕಾಂತರಾಜು, ಸಮಾಜ ಸೇವಕ ಹಾಪ್‌ಕಾಮ್ಸ್ ದೇವರಾಜು, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಕ್ಕೂರುದೊಡ್ಡಿ ಜಯರಾಂ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಕಸ್ತೂರಿ ಕೊಕನೆಟ್ ಪ್ರೊಸಸಿಂಗ್ ಮಾಲೀಕ ಗೌತಮ್‌ಚಂದ್ ಕೊಠಾರಿ, ಸಮಾಜ ಸೇವಕ ಎಲೇಕೇರಿ ರವೀಶ್, ಪುಣ್ಯ ಆಸ್ಪತ್ರೆಯ ವೈದ್ಯರಾದ ಡಾ. ಹೆಚ್.ಎಲ್. ಪದ್ಮಾವತಿ ಡಾ. ಹೆಚ್.ಶಿವಪ್ಪ, ಮಹೇಶ್ವರ ಕನ್ವೆನ್ಷನ್ ಹಾಲ್ ಮಾಲೀಕ ಮಹೇಶ್ವರ, ಕೆಯುಡಬ್ಲ್ಯೂಜೆ ರಾಜ್ಯ ಉಪಾಧ್ಯಕ್ಷ ಮತ್ತೀಕೆರೆ ಜಯರಾಮು, ಕೆಯುಡಬ್ಲ್ಯೂಜೆ ಜಿಲ್ಲಾಧ್ಯಕ್ಷ ಸೂರ್ಯಪ್ರಕಾಶ್, ಬಯಲುಸೀಮೆ ಪತ್ರಿಕೆ ಸಂಪಾದಕ ಸು.ತ.ರಾಮೇಗೌಡ, ರೇಷ್ಮೆಸೀಮೆ ಪತ್ರಿಕೆ ಸಂಪಾದಕ ರಮೇಶ್‌ಗೌಡ, ಉಪತಹಸೀಲ್ದಾರ್ ಸೋಮೇಶ್, ತಾ.ಪಂ. ಇಓ ಚಂದ್ರ, ನಗರಸಭಾ ಪೌರಾಯುಕ್ತ ಶಿವನಾಂರಿಗೌಡ ಉಪಸ್ಥಿತರಿದ್ದರು.

ಪತ್ರಕರ್ತ ಬಿ. ಟಿ. ನಾಗೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಪತಿ ಮಂಗಳವಾರಪೇಟೆ ಸ್ವಾಗತಿಸಿದರು. ನಂದಕುಮಾರ್ ನಿರೂಪಿಸಿದರು. ಅಭಿಲಾಷ್ ವಂದಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑