Tel: 7676775624 | Mail: info@yellowandred.in

Language: EN KAN

    Follow us :


ನಿವೃತ್ತಿಗೊಂಡ ಅಂಚೆ ಅಧೀಕ್ಷಕ ನಾಗರಾಜರಾವ್ ಗೆ ಬೀಳ್ಕೊಡುಗೆ

Posted date: 03 Sep, 2021

Powered by:     Yellow and Red

ನಿವೃತ್ತಿಗೊಂಡ ಅಂಚೆ ಅಧೀಕ್ಷಕ ನಾಗರಾಜರಾವ್ ಗೆ ಬೀಳ್ಕೊಡುಗೆ

ಚನ್ನಪಟ್ಟಣ ಅಂಚೆ ವಿಭಾಗದ ಅಧೀಕ್ಷಕರಾದ ಶ್ರೀ ಸಿ ಆರ್ ನಾಗರಾಜರಾವ್ ರವರು ಆಗಸ್ಟ್ ತಿಂಗಳ ಕೊನೆಯಲ್ಲಿ ವಯೋನಿವೃತ್ತಿ ಹೊಂದಿದ್ದು ಇಲಾಖೆಯ ಮನೋರಂಜನಾ ಕೂಟದ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು.


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚನ್ನಪಟ್ಟಣ ಪ್ರಧಾನ ಅಂಚೆ ಕಚೇರಿಯ ಅಂಚೆ ಪಾಲಕರಾದ  ವೈ ಪಿ ಭೋವಿ ರವರು ವಹಿಸಿದ್ದರು.  ಚನ್ನಪಟ್ಟಣದವರೇ ಆದ  ಶ್ರೀ ಯುತ ನಾಗರಾಜರಾವ್ ರವರು  ಚನ್ನಪಟ್ಟಣ ವಿಭಾಗದಲ್ಲಿಯೇ ಅಂಚೆ ಸಹಾಯಕರಾಗಿ ಪಾದಾರ್ಪಣೆ ಮಾಡಿ ಸುಮಾರು 13 ವಿಭಾಗಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಚನ್ನಪಟ್ಟಣ ಅಂಚೆ ವಿಭಾಗದ  ಅತ್ಯುನ್ನತ ಹುದ್ದೆಯಾದ ಅಂಚೆ ಅಧೀಕ್ಷಕರಾಗಿ ನಿವೃತ್ತಿ ಹೊಂದಿದ್ದು ಒಂದು ವಿಶೇಷ ಎಂದು ವೈ ಪಿ ಭೋವಿ ರವರು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ನಾಗರಾಜರಾವ್ ರವರ ಕುಟುಂಬವರ್ಗದವರು, ಅವರ ಸ್ನೇಹಿತರು, ಚನ್ನಪಟ್ಟಣ ಅಂಚೆ ವಿಭಾಗದ ನೌಕರರು, ಕಛೇರಿಯ ಸಿಬ್ಬಂದಿಗಳು, ಅಂಚೆ ಮನರಂಜನಾ ಕೂಟದ ಕಾರ್ಯದರ್ಶಿ ಶ್ರೀ ಗುರು ಮಲ್ಲೇಶ ಮತ್ತು ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑