Tel: 7676775624 | Mail: info@yellowandred.in

Language: EN KAN

    Follow us :


ಶಿಕ್ಷಕರ ದಿನಾಚರಣೆ: ಸಾಧನೆ ಮಾಡಿದ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ

Posted date: 05 Sep, 2021

Powered by:     Yellow and Red

ಶಿಕ್ಷಕರ ದಿನಾಚರಣೆ: ಸಾಧನೆ ಮಾಡಿದ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ

ರಾಮನಗರ, ಸೆ:04; ರಾಮನಗರ ಜಿಲ್ಲಾ ಪಂಚಾಯತ್ ಹಾಗೂ  ಸಾರ್ವನಿಜಕ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ರಾಮನಗರದ ಗುರುಭವನದಲ್ಲಿ ಆಯೋಜಿಸಿದ್ದ  ಕಾರ್ಯಕ್ರಮವನ್ನು ರಾಮನಗರ ಜಿಲ್ಲೆಯ ಉಪ ನಿರ್ದೇಶರು (ಅಭಿವೃದ್ಧಿ) ಡಯಟ್ ಪ್ರಸನ್ನಕುಮಾರ ಅವರು  ಉದ್ಘಾಟಿಸಿ ಮಾತನಾಡಿದರು.


ರಾಜ್ಯ ಮತ್ತು ರಾಷ್ಟ್ರ  ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಶಿಕ್ಷಕರನ್ನು ಗುರುತಿಸಿ ಅವರಿಗೆ  ಗೌರವ ಮತ್ತು ಪ್ರಶಸ್ತಿಯನ್ನು ನೀಡುತ್ತಿರುವುದು ಉತ್ತಮ ಕಾರ್ಯವಾಗಿದೆ. ಡಾ: ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಿಶ್ವಕಂಡ ಮಹಾನ್ ಮೇಧಾವಿ ಅವರ ತತ್ವ ಆದರ್ಶಗಳನ್ನು ಜೀವನದಲ್ಲಿ ಪ್ರತಿಯೊಬ್ಬರು ಪಾಲನೆ ಮಾಡಬೇಕು, ಶಿಕ್ಷಣವನ್ನು ನೀಡಿದ ಗುರುಗಳನ್ನು ನೆನಪಿಸಿಕೊಳ್ಳಬೇಕು ಸಮಾಜ ಹಾಗೂ ದೇಶವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು ಎಂದರು.


ಸರ್ಕಾರಿ ನೌಕರರ  ಸಂಘದ ಜಿಲ್ಲಾಧ್ಯಕ್ಷರಾದ  ಭೈರಲಿಂಗಯ್ಯ ಅವರು ಮಾತನಾಡಿ ಸಮಾಜದಲ್ಲಿ ಪವಿತ್ರವಾದ ವೃತ್ತಿ ಎಂದರೆ ಅದು  ಶಿಕ್ಷಕರ ವೃತ್ತಿಯಾಗಿದೆ, ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ ಇರಬೇಕು.  ಒಳ್ಳೆಯ ವಿದ್ಯಾರ್ಥಿಗಳನ್ನು ಮತ್ತು ಸಮಾಜವನ್ನು ನಿರ್ಮಾಣ ಮಾಡುವ ಕೆಲಸ  ಶಿಕ್ಷಕರದು, ಶಿಕ್ಷಕರ ವರ್ಗಾವಣೆ ಒಂದು ಸಮಸ್ಯೆಯಾಗಿದೆ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ತಿದ್ದುಪಡಿ ಪೂರ್ಣಪ್ರಮಾಣದಲ್ಲಿ ಆಗಬೇಕಿದೆ ಎಂದರು.


 ಜಿಲ್ಲಾ ಮಟ್ಟದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.


 ಕಾರ್ಯಕ್ರಮದಲ್ಲಿ ರಾಮನಗರ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಬಿ.ಎನ್ ಮರೀಗೌಡ, ರಾಮನಗರ ಸಾ.ಶಿ.ಇಲಾಖೆ ಉಪ ನಿರ್ದೇಶಕರಾದ ಸೋಮಶೇಖರಯ್ಯ, ಶಿಕ್ಷಣಾಧಿಕಾರಿಗಳು ಪಿ.ಸೋಮಲಿಂಗಯ್ಯ, ಪ್ರೌಢ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷರಾದ  ಸಿ.ರಾಜಶೇಖರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ರಮೇಶ್ ಹಾಗೂ ಶಿಕ್ಷಕರು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಹಾಜರಿದ್ದರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑