Tel: 7676775624 | Mail: info@yellowandred.in

Language: EN KAN

    Follow us :


ಸೆಪ್ಟೆಂಬರ್ 8 ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

Posted date: 07 Sep, 2021

Powered by:     Yellow and Red

ಸೆಪ್ಟೆಂಬರ್ 8  ರಂದು ಜಿಲ್ಲಾದ್ಯಂತ ಕೋವಿಡ್ ಲಸಿಕಾ ಮೇಳ

ರಾಮನಗರ ,ಸೆ.7; ಕೋವಿಡ್-19 ಲಸಿಕಾಕರಣದ ಪ್ರಗತಿ ವೃದ್ದಿಯ ಉಪಕ್ರಮವಾಗಿ ಸೆಪ್ಟೆಂಬರ್ 8 ರಂದು  ಜಿಲ್ಲೆಯಾದ್ಯಂತ  ಕೋವಿಡ್-19 ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಡಾ:ರಾಕೇಶ್ ಕುಮಾರ್ ಕೆ ಅವರು ತಿಳಿಸಿದ್ದಾರೆ.


ಜಿಲ್ಲೆಯಲ್ಲಿ 12,000 ಜನರಿಗೆ ಲಸಿಕೆ‌ ನೀಡಲು ವಿವಿಧ ಕಡೆ ಮೇಳವನ್ನು  ಆಯೋಜಿಸಿ ಸಿದ್ಧತೆ ಮಾಡಿಕೊಳ್ಳಲಾಗಿದೆ.  ಸಾರ್ವಜನಿಕರು ಇದರ

ಸದುಪಯೋಗಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


ಈ ಮೇಳದಲ್ಲಿ ಇದುವರೆಗೆ ಮೊದಲನೇ ಡೋಸ್ ಲಸಿಕೆ ಪಡೆಯದ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ , ಎರಡನೇ ಡೋಸ್‍ಗೆ ಬಾಕಿ ಇರುವ ಆರೋಗ್ಯ ಕಾರ್ಯಕರ್ತರ ಮತ್ತು ಮುಂಚೂಣಿ ಕಾರ್ಯಕರ್ತರಿಗೆ, 18 ವರ್ಷ ಮೇಲ್ಪಟ್ಟವರಿಗೆ 1 ನೇ ಡೋಸ್ ಹಾಗೂ  2 ನೇ ಡೋಸ್,  ಕೋವಿಡ್-19 ಲಸಿಕೆ ಬಾಕಿ ಇರುವವರು, ಇತರೆ  ಅರ್ಹ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ  ಕೋವಿಡ್-19 ಲಸಿಕೆಯನ್ನು ನೀಡಲಾಗುವುದು.


ಲಸಿಕಾ ಮೇಳವನ್ನು ರಾಮನಗರದ ಅಂಬೇಡ್ಕರ್ ಭವನ, ಚನ್ನಪಟ್ಟಣದ ಷೇರು ಹೋಟೆಲ್‌ ಸರ್ಕಲ್ ಮತ್ತು ಟಿಪ್ಪು ನಗರ, ಮಾಗಡಿಯ  ತಿರುಮಲೆ ದೇವಸ್ಥಾನ, ಕಲ್ಯಾಗೇಟ್ ಮತ್ತು ಸರ್ಕಾರಿ ಬಸ್ ನಿಲ್ದಾಣ ,ಕನಕಪುರ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ   ಆಯೋಜಿಸಲಾಗಿದೆ.


ಹಾರೋಹಳ್ಳಿಯ ಪಾರ್ ಸನ್ಸ್ ನ್ಯೂಟ್ರಿಷನ್,ಡೈರಿ ಡೇ ಐಸ್ ಕ್ರೀಂ, ಮತ್ತು ಬಿಡದಿಯ ಕೊರುನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಲ್ಲಿ ಮೇಳ ಆಯೋಜಿಸಲಾಗಿದೆ. 


ಇದಲ್ಲದೇ  ರಾಮನಗರ ಜಿಲ್ಲಾ ಆಸ್ಪತ್ರೆ, ಕನಕಪುರ, ಮಾಗಡಿ ಹಾಗೂ ಚನ್ನಪಟ್ಟಣ ‌ಸಾರ್ವಜನಿಕ ಆಸ್ಪತ್ರೆ, ಸಾತನೂರು, ಹಾರೋಹಳ್ಳಿ, ಸೋಲೂರು ಹಾಗೂ ಬಿಡದಿ ಯ ಸಮುದಾಯ ಆರೋಗ್ಯ ಕೇಂದ್ರ, ಮೆಹಬೂಬ್ ನಗರ, ರಾಯರದೊಡ್ಡಿ, ಇಸ್ಲಾಂಪುರ ಹಾಗೂ ಕನಕಪುರ ನಗರ ಆರೋಗ್ಯ ಕೇಂದ್ರದಲ್ಲಿ ಹಾಗೂ ಜಿಲ್ಲೆಯ  61 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ  ಲಸಿಕೆ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑