Tel: 7676775624 | Mail: info@yellowandred.in

Language: EN KAN

    Follow us :


ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

Posted date: 15 Sep, 2021

Powered by:     Yellow and Red

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ನ್ಯೂ ಎಕ್ಸ್ಪರ್ಟ್ ಸಮೂಹ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ  ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯಲ್ಲಿ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ರಾಮನಗರದ ನಿರ್ದೇಶಕರಾದ ಡೊಮಿನಿಕ್.ಡಿ ಅವರು ಮಾತನಾಡಿ  ನಗರೀಕರಣ ಮತ್ತು ಆಧುನಿಕತೆಯ ಪರಿಣಾಮವಾಗಿ ಮಾನಸಿಕ ಖಿನ್ನತೆಗೆ ಒಳಗಾಗುವವರ ಸಂಖ್ಯೆ ಹೆಚ್ಚುತ್ತಿದ್ದು, ಗೌತಮ ಬುದ್ದನ ಧನಾತ್ಮಕ ಚಿಂತನೆಗಳು ಮನೋಛಲವನ್ನು ಹೆಚ್ಚಿಸಿಕೊಳ್ಳಲು ಮತ್ತು ಆತ್ಮಹತ್ಯೆಯಂತಹ ಆಲೋಚನೆಗಳಿಂದ ದೂರವಿರಲು ಸಹಕಾರಿಯಾಗಿರುತ್ತವೆ ಎಂದರು.


ನಂತರ ಮಾತನಾಡಿದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಮನೋವೈದ್ಯರಾದ ಡಾ. ಆದರ್ಶ ರವರು ರಾಷ್ಟೀಯ ಅಪರಾದಗಳ ವರದಿಯಲ್ಲಿ 2019 ರಲ್ಲಿ 1,39,000 ಕಿಂತಲೂ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ದೇಶದಲ್ಲಿ ಸಂಭವಿಸಿದ್ದು 2018 ರಲ್ಲಿ 5 ಸಾವಿರ ಪ್ರಕರಣಗಳು ಹೆಚ್ಚಾಗಿವೆ. ಕರ್ನಾಟಕ ರಾಜ್ಯ ಆತ್ಮಹತ್ಯೆ ಪ್ರಕಣಗಳಲ್ಲಿ 5 ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ತಮಿಳುನಾಡು, ಪಶ್ಚಿಮಬಂಗಾಳ ಮತ್ತು ಮಧ್ಯಪ್ರದೇಶ ರಾಜ್ಯಗಳು ಕ್ರಮವಾಗಿ ನಂತರದ ಸ್ಥಾನದಲ್ಲಿವೆ. ಶೇಕಡಾ 100 ಆತ್ಮಹತ್ಯೆ ಪ್ರಕರಣದಲ್ಲಿ ಕೌಟುಂಬಿಕ ಸಮಸ್ಯೆಯಿಂದ ಶೇ.32% ಇದ್ದು, ಮದುವೆ ಇತ್ಯಾದಿಗಳಲ್ಲಿ ಶೇ.05% ಹಾಗೂ ಮಾನಸಿಕ ಕಾಯಿಲೆ ಮತ್ತು ವ್ಯಸನದಿಂದ ಶೇ.13% ರಷ್ಟು ಜನರಲ್ಲಿ ಆತ್ಮಹತ್ಯೆ ಸಂಭವಿಸುತ್ತಿವೆ. 80 ರ ದಶಕದಲ್ಲಿ ಮಧ್ಯವ್ಯಸನಕ್ಕೆ ಪ್ರಯತ್ನಿಸುತ್ತಿದ್ದವರು 26ನೇ ವರ್ಷದವರಾಗಿದ್ದರು. ೨೦೨೦ ರಿಂದ ಇಚೇಗೆ 16 ನೇ ವರ್ಷದಿಂದಲೆ ಮಧ್ಯ ವ್ಯಸನಕ್ಕೆ ಗುರಿಯಾಗುತ್ತಿದ್ದಾರೆ. ಯುವಜನರು ಮದ್ಯಪಾನದ ವ್ಯಸನದಿಂದ ದೂರ ಇರುವುದು ಒಳ್ಳೆಯದು ಎಂದು ತಿಳಿಸಿದ ಅವರು ಉತ್ತಮ ಹವ್ಯಾಸಗಳು ಮತ್ತು ಸೂಕ್ತ ವಾತಾವರಣ ಉತ್ತಮ ಮಾನವ ಸಂಬಂಧಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆ ಮಾಡಬಹುದಾಗಿದೆ ಎಂದರು.


ರೋಟರಿ ಕಾರ್ಯದರ್ಶಿ ಚಂದ್ರಪ್ಪ ಅವರು ಮಾತನಾಡಿ ಮೊಬೈಲ್ ಬಳಕೆ ಅನಿವಾರ್ಯವಾಗಿ ಹೆಚ್ಚುತ್ತಿದ್ದು ಉತ್ತಮ ಮಾಹಿತಿಯನ್ನು ಮತ್ತು ಬದುಕಿಗೆ ಪ್ರೇರಣೆ ನೀಡುವ ಅಂಶಗಳನ್ನು ಗಮನಿಸಿ ಅಳವಡಿಸಿಕೊಳ್ಳಲು ವಿದ್ಯಾರ್ಥಿ ಯುವ ಸಮೂಹ ಮುಂದಾಗಬೇಕು ಎಂದರು.

ನ್ಯೂ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಬಿ.ಆರ್.ರವಿಕುಮಾರ್ ಅವರು ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿ ಸಮೂಹದಲ್ಲಿ ಭರವಸೆಯನ್ನು ಮತ್ತು ಉತ್ತಮ ಬದುಕಿಗೆ ಪ್ರೇರಣೆಯಾಗುತ್ತದೆ ಎಂದು ಅವರು ಸಂಸ್ಥೆಯ ಬೆಳವಣಿಗೆ ಮತ್ತು ಭವಿಷ್ಯದ ಯೋಜನೆಗಳ ಕುರಿತು ತಿಳಿಸಿದರು.


ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಆತ್ಮಹತ್ಯೆ ತಡೆ ಕುರಿತು ಕಿರು ನಾಟಕ ಎಲ್ಲರ ಗಮನ ಸೆಳೆಯಿತು. 


ಈ ಸಂದರ್ಭದಲ್ಲಿ ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷರಾದ ಸೋಮಶೇಖರ್, ಸ್ನಾತಕೋತ್ತರ ಕೇಂದ್ರ ಸಮಾಜ ಕಾರ್ಯ ವಿಭಾಗದ ಡಾ.ರಾಜಶೇಖರ್, ವಿಭಾಗದ ಉಪನ್ಯಾಸಕರಾದ ಆನಂದ್, ಆರೋಗ್ಯ ಇಲಾಖೆಯ ಯೋಜನಾ ಸಂಯೋಜಕರಾದ ಪದ್ಮರೇಖಾ, ಇನ್ನಿತತರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑