Tel: 7676775624 | Mail: info@yellowandred.in

Language: EN KAN

    Follow us :


ಪ್ರಾಥಮಿಕ ಶಾಲಾ ಪದವೀಧರ ಸಮಸ್ಯೆ ಬಗೆಹರಿಸುವಂತೆ ಮನವಿ

Posted date: 07 Oct, 2021

Powered by:     Yellow and Red

ಪ್ರಾಥಮಿಕ ಶಾಲಾ ಪದವೀಧರ  ಸಮಸ್ಯೆ ಬಗೆಹರಿಸುವಂತೆ ಮನವಿ

ರಾಮನಗರ: ಸೇವಾ ನಿರತ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಡಿಡಿಪಿಐ ಹಾಗೂ ಡಯಟ್ ಪ್ರಾಂಶುಪಾಲರಿಗೆ ರಾಮನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.


ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು. ಇಲ್ಲದಿದ್ದರೆ ಕನಿಷ್ಠ ಮೂರು ತರಬೇತಿಗಳನ್ನು ಬಹಿಷ್ಕರಿಸಲಾಗುವುದು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಎಚ್ಚರಿಸಿದರು.


2017 ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಪದವೀಧರ ಶಿಕ್ಷಕರಿಗೆ ಅನ್ಯಾಯವಾಗಿದೆ. ಈ ಬಗ್ಗೆ ಸಮಸ್ಯೆ ಬಗೆಹರಿಸಲು ಶಿಕ್ಷಣ ಇಲಾಖೆಗೆ ಹಲವು ಬಾರಿ ರಾಜ್ಯ ಸಂಘ ಮನವಿ ಮಾಡಿದೆ. ಹೀಗಿದ್ದರೂ ಸಮಸ್ಯೆಗಳಿಗೆ ಪರಿಹಾರ ದೊರೆತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಸಮಸ್ಯೆಗಳನ್ನು ಬಗೆಹರಿಸುವವರೆಗೂ ಯಾವುದೇ ರೀತಿಯ ತರಬೇತಿಗಳಲ್ಲಿ ಶಿಕ್ಷಕರು ಪಾಲ್ಗೊಳ್ಳುವುದಿಲ್ಲ. ತರಬೇತಿಗಳನ್ನು ಬಹಿಷ್ಕರಿಸಲಾಗುವುದು. ಇಲಾಖೆಯಿಂದ ಈ ಬಗ್ಗೆ ಅತೀ ಶೀಘ್ರದಲ್ಲಿ ಪರಿಹಾರ ದೊರಕದೇ ಹೋದಲ್ಲಿ ಹಂತ ಹಂತವಾಗಿ ಹೋರಾಟಗಳನ್ನು ರೂಪಿಸುವ ನಿಲ್ಲುವನ್ನು ಸಂಘಟನೆ ನಿರ್ಧರಿಸಿದೆ ಎಂದರು.


ಈ ಹೋರಾಟಗಳಿಗೆ ಸಂಘಟನೆಯು ಜವಾಬ್ದಾರಿಯಾಗಿರದೆ ಇಲಾಖೆಯ ಅಧಿಕಾರಿಗಳಿಂದ ಸೇವಾ ನಿರತ ಪದವೀಧರ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ದೊರಕದೇ ಇರುವುದೇ ಕಾರಣವಾಗಿರುತ್ತದೆ. ನಮ್ಮ ಸಂಘಟನೆಯ ಈ ನಿರ್ಣಯವನ್ನು ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದು ಮೊದಲ ಹಂತದ ಹೋರಾಟವಾಗಿದ್ದು, ರಾಮನಗರ ಜಿಲ್ಲೆಯ ಸಮಸ್ತ ಶಿಕ್ಷಕ ಬಂಧುಗಳು ನಿಷ್ಠ 3.0 ಆನ್ಲೈನ್ ತರಬೇತಿಗಳನ್ನ ಬಹಿಸ್ಕರಿಸಿ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.


ರಾಮನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಎಂ. ಕೆಂಪೇಗೌಡ, ಪ್ರಧಾನ ಕಾರ್ಯದರ್ಶಿ ಟಿ.ಬಿ. ಗುಣಶೇಖರಯ್ಯ, ಖಜಾಂಚಿ ಗುರುಮೂರ್ತಿ, ಉಪಾಧ್ಯಕ್ಷ ಮಲ್ಲೇಶಯ್ಯ, ಸಹಕಾರ್ಯದರ್ಶಿ ಎನ್.ಎ. ಅಶೋಕ, ಸಂಘಟನಾ ಕಾರ್ಯದರ್ಶಿ ಎಂ.ಎನ್. ಕುಮಾರಸ್ವಾಮಿ, ತಾಲ್ಲೂಕು ಘಟಕಗಳ ಅಧ್ಯಕ್ಷರಾದ ಎಂ. ಕಾಂತರಾಜು, ಎಸ್.ಎಂ. ನಾಗೇಶ್, ನೇ.ರ. ಪ್ರಭಾಕರ್, ಶಿವನಸಂದ್ರ ಶಿವರಾಮಯ್ಯ, ಪ್ರಧಾನಾ ಕಾರ್ಯದರ್ಶಿಗಳಾದ ವೈ.ಸಿ. ನಟರಾಜ್, ಪಿ. ವಾಸುದೇವ್, ಬಿ. ವೀರಭದ್ರಯ್ಯ, ಎ.ಬಿ. ಶಿವಲಿಂಗಯ್ಯ ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑