Tel: 7676775624 | Mail: info@yellowandred.in

Language: EN KAN

    Follow us :


ರಾಷ್ಟ್ರೀಯ ಕ್ರೀಡಾಕೂಟದಲ್ಲಿ 33 ಪದಕ ಪಡೆದ ವಿದ್ಯಾರ್ಥಿಗಳು

Posted date: 10 Oct, 2021

Powered by:     Yellow and Red

ರಾಷ್ಟ್ರೀಯ ಕ್ರೀಡಾಕೂಟದಲ್ಲಿ 33 ಪದಕ ಪಡೆದ ವಿದ್ಯಾರ್ಥಿಗಳು

ಡೆಹ್ರಾಡೂನ್ ನಲ್ಲಿ ಅಕ್ಟೋಬರ್ 3 ರಿಂದ 05 ರವರೆಗೆ

ಜರುಗಿದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಾಜ್ಯದಿಂದ ಭಾಗವಹಿಸಿದ್ದ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಅಡ್ಡ್ವಂಚರ್ ಅಕಾಡೆಮಿಯ ಕ್ರೀಡಾಪಟುಗಳು ಹದಿನೈದು ಚಿನ್ನ, ಹದಿಮೂರು ಬೆಳ್ಳಿ ಮತ್ತು ಐದು ಕಂಚಿನ ಪದಕ ಸೇರಿದಂತೆ ಒಟ್ಟು ಮೂವತ್ತ ಮೂರು ಪದಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಹಾಗೂ ಜಿಲ್ಲೆಗೆ ಹೆಸರನ್ನು ತಂದಿದ್ದಾರೆ.


ಕನಕಪುರ ನಗರದ ಅಡ್ಡ್ವಂಚರ್ ಅಕಾಡೆಮಿಯ ತರಬೇತುದಾರರಾದ ಮನೋಜ್ ಹಾಗೂ ಅಕ್ಷತಾ ನೇತೃತ್ವದಲ್ಲಿ ಹತ್ತು, ಹದಿನೈದು ಹಾಗೂ ಹದಿನೇಳು ವರ್ಷದ ಒಳಗಿನ ಗಂಡು ಹಾಗೂ ಹೆಣ್ಣು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗಳಿಸಿದ್ದಾರೆ, 


ಹದಿನೇಳು ವರ್ಷದ ಒಳಗಿನ ಬಾಲಕರ ಕ್ರೀಡಾ ವಿಭಾಗದ ಓಟದಲ್ಲಿ ವಿಶ್ವಾಸ್ 1,500 ಮೀಟರ್ ಓಟ ಹಾಗೂ ಲಾಂಗ್ ಜಂಪ್ ನಲ್ಲಿ ಎರಡನೇ ಸ್ಥಾನ, ಹದಿನಾಲ್ಕು ವರ್ಷದ ಒಳಗಿನ ಕ್ರೀಡಾ ವಿಭಾಗದ 1,500 ಹಾಗೂ 3,000 ಮೀಟರ್ ಓಟದಲ್ಲಿ ಚಿರಾಗ್ ಗೌಡ  ಮೊದಲನೇ ಸ್ಥಾನ ಗಳಿಸಿದ್ದಾರೆ.


ಹತ್ತು ವರ್ಷ ಒಳಗಿನ ಬಾಲಕಿಯರ ವಿಭಾಗದಲ್ಲಿ 3,000 ಹಾಗೂ 1,500 ಮೀಟರ್ ಓಟದಲ್ಲಿ ರಚನಾ ಮನು ಮೊದಲನೇ ಸ್ಥಾನ ಹಾಗೂ ಮೂರನೇ ಸ್ಥಾನ, 800 ಹಾಗೂ 400 ಮೀಟರ್ ಓಟದಲ್ಲಿ ಸಮೀಕ್ಷಾ ಎಸ್.ಗೌಡ ಮೊದಲನೇ ಸ್ಥಾನ, ಭಾನು 100 ಹಾಗೂ 200 ಮೀಟರ್ ಓಟದಲ್ಲಿ ಮೊದಲನೇ ಸ್ಥಾನ, ಅದಿತಿ 100 ಹಾಗೂ 200 ಮೀಟರ್ ಓಟದಲ್ಲಿ ಎರಡು ಮತ್ತು ಮೂರನೇ ಸ್ಥಾನ, ಶ್ರೇಯಾ 200 ಹಾಗೂ 400 ಮೀಟರ್ ಓಟದಲ್ಲಿ ಎರಡನೇ ಸ್ಥಾನ, ಐಶ್ವರ್ಯ 100 ಹಾಗೂ 400 ಮೀಟರ್ ಓಟದಲ್ಲಿ ಮೊದಲ ಹಾಗೂ ಎರಡನೇ ಸ್ಥಾನ, ಬಾಂಧವ್ಯ ಎಸ್. ಗೌಡ 1,500 ಮೀಟರ್ ವಿಭಾಗದಲ್ಲಿ ಮೊದಲನೇ ಸ್ಥಾನ, ಸನೌ 10 ಕಿ.ಮೀ ಹಾಗೂ 5 ಕಿ.ಮೀ ವಿಭಾಗದಲ್ಲಿ ಮೊದಲನೇ ಸ್ಥಾನ ಗಳಿಸಿದ್ದಾರೆ, 


ಬಾಲಕರ ವಿಭಾಗದ 100 ಹಾಗೂ 200 ಮೀಟರ್ ಓಟದಲ್ಲಿ ವಿನಿ, ಎಸ್.ಪಿ. ಮೊದಲನೇ ಸ್ಥಾನ, ಮನು 400 ಹಾಗೂ 200 ಮೀಟರ್ ಓಟದಲ್ಲಿ ಎರಡನೇ ಹಾಗೂ ಮೂರನೇ ಸ್ಥಾನ, ಸಮರ್ಥ್ 400 ಹಾಗೂ 200 ಮೀಟರ್ ಓಟದಲ್ಲಿ  ಮೊದಲ ಹಾಗೂ ಎರಡನೇ ಸ್ಥಾನ, ಚಿನ್ಮಯಿ 1,500 ಹಾಗೂ 800 ಮೀಟರ್ ಓಟದಲ್ಲಿ ಮೊದಲ ಸ್ಥಾನ, ಸಮೃದ್ಧ್ 10,000 ಮೀಟರ್ ಓಟದಲ್ಲಿ ಎರಡನೇ ಸ್ಥಾನ, ವಿರಾಟ್ 800 ಹಾಗೂ 3,000 ಮೀಟರ್ ಓಟದಲ್ಲಿ ಮೊದಲನೇ ಸ್ಥಾನ ಗಳಿಸಿದ್ದಾರೆ, 


 ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಕೆ ಅವರು ತಮ್ಮ ಕಛೇರಿಯಲ್ಲಿ ಮಕ್ಕಳ ಸಾಧನೆಯನ್ನು ಮೆಚ್ಚಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜವರೇಗೌಡ ಟಿ, ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑