Tel: 7676775624 | Mail: info@yellowandred.in

Language: EN KAN

    Follow us :


ಕಾವೇರಿ ವಾಟರ್ ಬೋರ್ಡ್ ಸರ್ಕಲ್ ಗುಂಡಿಮಯ. ಪ್ರಯಾಣಿಕರ ಪರದಾಟ

Posted date: 22 Oct, 2021

Powered by:     Yellow and Red

ಕಾವೇರಿ ವಾಟರ್ ಬೋರ್ಡ್ ಸರ್ಕಲ್ ಗುಂಡಿಮಯ. ಪ್ರಯಾಣಿಕರ ಪರದಾಟ

ಚನ್ನಪಟ್ಟಣ:ಅ/22/21. ಚನ್ನಪಟ್ಟಣ ನಗರದ ಕಾವೇರಿ ನೀರು ಸರಬರಾಜು ಕಚೇರಿಯ ವೃತ್ತದಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಗುಂಡಿ ಬಿದ್ದು ವಾಹನಸವಾರರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಸದ್ಯ ರಾಜ್ಯ ಹೆದ್ದಾರಿ ಆಗಿದ್ದು ಶೀಘ್ರದಲ್ಲೇ ರಾಷ್ಟ್ರೀಯ ಹೆದ್ದಾರಿಯಾಗುತ್ತಿದೆ. ಚನ್ನಪಟ್ಟಣ ನಗರದ ಕವಲೊಡೆದ ರಸ್ತೆಯಲ್ಲಿ ಹೆಚ್ಚು ಭಾರವುಳ್ಳ ರಸ್ತೆ ಇದಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.


ಶಾಲಾಕಾಲೇಜು ವಿದ್ಯಾರ್ಥಿಗಳು, ಉದ್ಯೋಗಸ್ಥರು ಬೆಳಗ್ಗೆಯಿಂದ ಸಂಜೆವರೆಗೂ ಪ್ರಯಾಣ ಮಾಡುತ್ತಾರೆ. ಆದರೆ ಈ ರಸ್ತೆ ಗುಂಡಿಬಿದ್ದು ತಿಂಗಳುಗಳೇ ಕಳೆದಿವೆ. ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣಕುರುಡುತನವನ್ನ ಪ್ರದರ್ಶನ ಮಾಡುತ್ತಿದ್ದಾರೆ.. ಕಳೆದ 15 ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಸಂಜೆ 6 ಗಂಟೆ ಕಳೆದರೆ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗಳನ್ನು ಮಾಡಿಕೊಂಡಿದ್ದಾರೆ. ಜೊತೆಗೆ ಪಾದಚಾರಿಗಳು ಗುಂಡಿಗಳಲ್ಲಿ ಕಾಲಿಟ್ಟು ಪೆಟ್ಟುಮಾಡಿಕೊಂಡಿದ್ದಾರೆ.


ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರು ಸಹ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಕುಂಭಕರ್ಣನಂತೆ ನಿದ್ರೆ ಮಾಡುತ್ತಿದ್ದಾರೆ. ದಿನನಿತ್ಯ ಹತ್ತಾರು ಜನ ಅಪಘಾತ ಮಾಡಿಕೊಳ್ಳುತ್ತಿದ್ದರೂ ಸಹ ಯಾವುದೇ ನಾಚಿಕೆಯಿಲ್ಲದ ಅಧಿಕಾರಿಗಳ ವರ್ಗ ಅಸಡ್ಡೆ ಮಾಡಿದ್ದಾರೆ. ಇನ್ನು ಈ ಬಗ್ಗೆ ವಾಹನಸವಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು ಸ್ಥಳೀಯ ಜನಪ್ರತಿನಿಧಿಗಳು ಸಹ ಗಮನಹರಿಸಬೇಕೆಂದು ಆಗ್ರಹಿಸಿದ್ದಾರೆ‌.


ಪ್ರಮುಖವಾಗಿ ಈ ರಸ್ತೆ ರಾಜ್ಯ ಹೆದ್ದಾರಿಯಾಗಿದ್ದು ಚನ್ನಪಟ್ಟಣದಿಂದ ಸಾತನೂರು - ಹಲಗೂರು ಮಾರ್ಗಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದೇ ರಸ್ತೆಯಿಂದ ನೂರಾರು ಹಳ್ಳಿಗಳಿಗೆ ಜನರು ಪ್ರಯಾಣ ಮಾಡುತ್ತಾರೆ. ನಗರದಲ್ಲೇ ಇಂತಹ ಕೆಟ್ಟ ಪರಿಸ್ಥಿತಿ ಕಣ್ಣಿಗೆ ಕಾಣುತ್ತಿದ್ದರೂ ಸಹ ಬೇಜಾಬ್ದಾರಿಯುತ ಅಧಿಕಾರಿಗಳ ವರ್ಗ ಏನ್ಮಾಡ್ತಿದ್ದಾರೆಂದು ಬೇಸತ್ತ ವಾಹನಸವಾರರು ಪ್ರಶ್ನೆ ಮಾಡುತ್ತಿದ್ದಾರೆ.


ನಗರದಲ್ಲಿ ಎಲ್ಲೆಲ್ಲಿ ಕಾವೇರಿ ನೀರಿನ ಪೈಪು ಹಾದುಹೋಗಿದೆಯೋ ಅಲ್ಲೆಲ್ಲಾ ಗುಂಡಿಗಳೇ ತುಂಬಿವೆ. ಒಂದು ಬಾರಿ ಒಡೆದ ಪೈಪನ್ನು ಬದಲಿಸದೆ ಅದನ್ನೇ ಪದೇಪದೇ ಗಂಟು ಹಾಕುತ್ತಿರುತ್ತಾರೆ. ಮತ್ತೆ ಒಡೆದಾಗ ರಸ್ತೆ ಗುಂಡಿ ಬೀಳುತ್ತದೆ. ಹಲವಾರು ಕಡೆ ಬ್ಯಾರಿಕೇಡ್ ಹಾಕಿ ತಿಂಗಳು ಗಟ್ಟಲೆ ಹಾಗೆ ಬಿಟಿದ್ದು ಉಂಟು. ಬೇಜಾವಾಬ್ದಾರಿತನದ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಪ್ರಯಾಣಿಕರುಗಳಿಗೆ ಅನುವು ಮಾಡಿಕೊಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑