Tel: 7676775624 | Mail: info@yellowandred.in

Language: EN KAN

    Follow us :


ನಗರದ ನೀರಿನ ಪೈಪಿನಲ್ಲಿ ಶವದ ಅಂಗ ಮತ್ತೊಮ್ಮೆ ಪತ್ತೆ. ಆಕ್ರೋಶಗೊಂಡ ನಗರಿಗರು

Posted date: 27 Oct, 2021

Powered by:     Yellow and Red

ನಗರದ ನೀರಿನ ಪೈಪಿನಲ್ಲಿ ಶವದ ಅಂಗ ಮತ್ತೊಮ್ಮೆ ಪತ್ತೆ. ಆಕ್ರೋಶಗೊಂಡ ನಗರಿಗರು

ಚನ್ನಪಟ್ಟಣ:ಅ/27/21. ಚನ್ನಪಟ್ಟಣ ನಗರದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಅಪರಿಚಿತ ಮೃತ ದೇಹದ ಅಂಗಗಳು. ಅಧಿಕಾರಿಗಳ ವಿರುದ್ಧ ಆಕ್ರೋಶಗೊಂಡ ನಗರವಾಸಿಗಳು.  ನಗರದ ಮಂಗಳವಾರಪೇಟೆಯ 10 ನೇ ಕ್ರಾಸ್ ನ ಕುಡಿಯುವ ನೀರಿನ ಪೈಪ್ ನಲ್ಲಿ ಮತ್ತೆ ಮಾಂಸದ ಮುದ್ದೆ ಮೂಳೆಗಳು ಪತ್ತೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.


ಇತ್ತೀಚಿಗೆ ಕೆಲ ದಿನಗಳ ಹಿಂದೆ ಚನ್ನಪಟ್ಟಣ ನಗರದ ಕೋರ್ಟ್ ಬಳಿಯ ಓವರ್ ಹೆಡ್ ವಾಟರ್ ಟ್ಯಾಂಕ್​ನಲ್ಲಿ ಅಪರಿಚಿತ ಮಹಿಳೆ ಶವದ ಕಾಲೊಂದು ಪತ್ತೆಯಾಗಿತ್ತು. ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯ ವರದಿಯೂ ಸಹ ಬಂದಿದ್ದು 20 ವರ್ಷ ವಯಸ್ಸಿನ ಯುವತಿಯ ಬಲತೊಡೆ ಎಂದು ಷರಾ ನೀಡಿದ್ದಾರೆ. ನೀರಿನ ಟ್ಯಾಂಕ್ ಬಳಿ ಮಹಿಳೆಯ ಬಟ್ಟೆ ಹಾಗೂ ಚಪ್ಪಲಿಯೂ ಸಹ ಅಂದೇ ಪತ್ತೆಯಾಗಿತ್ತು.


ಟ್ಯಾಂಕ್ ಮೇಲೇರಿ ನೀರಿಗೆ ಬಿದ್ದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ…! ಅಥವಾ ಕೊಲೆ ಮಾಡಿ ದೇಹವನ್ನ ತುಂಡು ತುಂಡು ಮಾಡಿ ಟ್ಯಾಂಕಿನ ಒಳಗಡೆ ಹಾಕಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಕೆ ಕೂಡ ಹಲವು ದಿನಗಳಿಂದ ಸ್ಥಗಿತಗೊಂಡಿದ್ದು ಟ್ರ್ಯಾಕ್ಟರ್ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರೆ ಸಾರ್ವಜನಿಕರು ಅಲ್ಲಗಳೆದಿದ್ದಾರೆ.


ಕಳೆದ ಹಲವು ದಿನಗಳಿಂದ ಟ್ಯಾಂಕ್​ನಿಂದ ನೀರು ಪೂರೈಕೆ ಸ್ಥಗಿತಗೊಳಿಸಿ. ಎಲ್ಲೆಲ್ಲಿ ವಾಲ್ ಪೈಪ್ ಗಳಿವೆ ಅಲ್ಲಲ್ಲಿ ಪೈಪುಗಳನ್ನು‌ ಕತ್ತರಿಸಿ ದೇಹ ಒಂದು ವೇಳೆ ನೀರಿನ ಪೈಪ್ ನಲ್ಲಿ ಅಂಗಾಂಗಗಳು ಸಿಕ್ಕಿ ಹಾಕಿಕೊಂಡಿವೆಯೆಂದು ಹೊರ ತೆಗೆಯುವ ಕಾರ್ಯಾಚರಣೆ ನಡೆಸಬೇಕಾದ ಅಧಿಕಾರಿಗಳು ತಟಸ್ಥರಾಗಿದ್ದರು. ಇಂದು ಬೆಳಿಗ್ಗೆ ವಾಲ್ವ್ ಬಳಿ ಊದಿಕೊಂಡಂತಹ ಮಾಂಸದ ಮುದ್ದೆ ಕಾಣಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದ್ದು ಮತ್ತೆ ಕಾರ್ಯಾಚರಣೆ ಆರಂಭಿಸಿದ್ದಾರೆ.


ಕಳೆದ 15 ದಿನಗಳ ಹಿಂದೆ ಕೋರ್ಟ್ ಪಕ್ಕದ ಓವರ್ ಟ್ಯಾಂಕ್ ನ ಪೈಪ್ ನಲ್ಲಿ ಕಾಲು ಪತ್ತೆಯಾಗಿ ಇಲ್ಲಿನ ಜನರನ್ನ ತೀವ್ರ ಆತಂಕಕ್ಕೀಡು ಮಾಡಿತ್ತು. ಇದೀಗ ಅದರ ಕೂಗಳತೆ ದೂರದಲ್ಲಿನ ಪೈಪ್ ನಲ್ಲಿ ಮೂಳೆ ಹಾಗೂ ಮಾಂಸದ ಇಂದು ಮುದ್ದೆ ಪತ್ತೆಯಾಗಿರುವುದು ಸ್ಥಳೀಯ ವಾರ್ಡ್ ನ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.


ಜೆಸಿಬಿ ಮೂಲಕ ಪೈಪ್ ಶೋಧ ಕಾರ್ಯ ನಡೆಸಲಾಗುತ್ತಿದೆ ಸ್ಥಳಕ್ಕೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ನಗರಸಭೆಯ ಇಂಜಿನಿಯರ್ ಹಾಗೂ ಕಾವೇರಿ ನೀರಾವರಿ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಾಂಸದ ಮುದ್ದೆಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಎಫ್ ಎಸ್ ಎಲ್ ಗೆ ಕಳುಹಿಸಿಕೊಟ್ಟಿದ್ದು, ಸ್ಥಳದಲ್ಲಿ ಕೊಳೆತ ಮಾಂಸ ವಾಸನೆಯಿಂದ ಸಾರ್ವಜನಿಕರು ಆತಂಕ್ಕೀಡಾಗಿದ್ದಾರೆ.


ಕಾರ್ಯಾಚರಣೆ ಇನ್ನು‌ ಮುಂದು ವರೆದಿದ್ದು, ಸಿಕ್ಕ ಮಾಂಸದ ಮುದ್ದೆ ಅದೇ ಮಹಿಳೆಗೆ ಸೇರಿದೆಯೋ ಅಥವಾ ಬೇರೆಯವರಿಗೆ ಸೇರಿದೆಯೋ‌ ಇನ್ನೂ ಗೊತ್ತಿಲ್ಲ.‌ ಪೋಲೀಸರ ತನಿಖೆಯಿಂದ ಮಾತ್ರವಷ್ಟೆ ಬೆಳಕಿಗೆ ಬರಬೇಕಿದೆ.


*ಕಾಲ್ಕಿತ್ತ ಇಂಜಿನಿಯರ್*

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಲಮಂಡಳಿ ಅಧಿಕಾರಿ ಗಂಗಾಧರಯ್ಯ ವಿರುದ್ಧ ಜನರ ಆಕ್ರೋಶ ವ್ಯಕ್ತಪಡಿಸಿದರು. ಒಂದು ತಿಂಗಳ ಹಿಂದೆ ಮತ್ತೊಂದು ಟ್ಯಾಂಕಿನಲ್ಲಿ ಮಹಿಳೆಯ ಕಾಲು ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಟ್ಯಾಂಕುಗಳನ್ನು ಪರಿಶೀಲನೆ ಮಾಡದೆ ಏನ್ಮಾಡ್ತಿದ್ದೀರಿ ಎಂದು ನಾಗರೀಕರು ನೀರು ಸರಬರಾಜು ಮಂಡಳಿ ಅಧಿಕಾರಿಗಳಿಗೆ ಬಿಸಿಮುಟ್ಟಿಸಿದರು. ಜೊತೆಗೆ ಈ ತಿಂಗಳು ನಮಗೆ ನೀರು ಬಿಟ್ಟಿಲ್ಲಾ, ಆದರೂ ಸಹ ಬಿಲ್ ಹೇಗೆ ನೀಡಿದ್ದೀರಿ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುನೀಲ್ ಮತ್ತು ಹಲವು ಮುಖಂಡರು ತರಾಟೆಗೆ ತೆಗೆದುಕೊಂಡರು.


ಈ ಸಂದರ್ಭದಲ್ಲಿ ಜನರ ಪ್ರಶ್ನೆಗೆ ಉತ್ತರಿಸಲಾಗದೆ ಕರ್ನಾಟಕ ನೀರು ಸರಬರಾಜು ಮಂಡಳಿ ಎಇಇ ಗಂಗಾಧರಯ್ಯ ಸ್ಥಳದಿಂದ ಕಾಲ್ಕಿತ್ತರು.

ಪೋಲೀಸ್ ಇಲಾಖೆಯ ಎಎಸ್ಐ ಮತ್ತು ಸಿಬ್ಬಂದಿಗಳನ್ನು ಹೊರತುಪಡಿಸಿದರೆ, ಪಿಎಸ್ಐ, ಸಿಪಿಐ ಮತ್ತು ಡಿವೈಎಸ್ಪಿ ಗಳ ಸುಳಿವೇ ಇರಲಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑