Tel: 7676775624 | Mail: info@yellowandred.in

Language: EN KAN

    Follow us :


ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

Posted date: 03 Nov, 2021

Powered by:     Yellow and Red

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್ಳಿಹೈದನ ತಾಂತ್ರಿಕಗಾಥೆ ಕೃತಿ ಬಿಡುಗಡೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಇಂಜಿಯರ್, ತಾಲ್ಲೂಕಿನ ಮಂಗಾಡಹಳ್ಳಿಯ ಎಂ.ಎಲ್ ಮಾದಯ್ಯ ಅವರು ತಿಳಿಸಿದರು.

ಅವರು ಇಂದು ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


ಈ ಪುಸ್ತಕ ಬಿಡುಗಡೆ ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಡಾ: ನಿರ್ಮಲಾನಂದನಾಥ ಸ್ವಾಮೀಜಿ ಯವರು ವಹಿಸುವರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ಕೃತಿಯನ್ನು ಲೋಕಾರ್ಪಣೆ ಮಾಡುವರು.

ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕರಾದ ಎಚ್.ಡಿ ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್, ಮಾಗಡಿ ಶಾಸಕ ಎ.ಮಂಜುನಾಥ್, ನಾಡೋಜ ಡಾ.ವೂಡೇ ಕೃಷ್ಣ ಭಾಗವಹಿಸುವರು, ಕೃತಿಯನ್ನು ಕುರಿತು ಬಿಎಂಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಬೈರಮಂಗಲ ರಾಮೇಗೌಡ ಮಾತನಾಡುವರು ಎಂದರು.


*ಕೃತಿಗೆ ಪ್ರೇರಣೆ:*

ನಾನು 20 ತಿಂಗಳು ಕೊರೊನಾ ದಿಗ್ಬಂಧನಕ್ಕೆ ಒಳಗಾಗಿದ್ದೆ. ಆ ಸಂದರ್ಭದಲ್ಲಿ ಏನಾದರೂ ಬರೆಯಬೇಕು ಎನ್ನಿಸಿತು. ನಿವೃತ್ತಿಯ ನಂತರ ಕೆಲವರು ನಿಮ್ಮ ಸಾಧನೆ ಸಾಕಷ್ಟಿದೆ ಸಮುದಾಯದ ಒಬ್ಬರು ಕ್ರಮಿಸಿದ ದಾರಿ ಗಮನಾರ್ಹ, ಹಾಗಾಗಿ ನಿಮ್ಮ ಬದುಕು ಬೇರೆಯವರಿಗೆ ಪ್ರೇರಣೆಯಾಗಬಹುದು ಹಾಗಾಗಿ ಬರೆಯಿರಿ, ಬರೆಯಲಾಗದಿದ್ದರೆ ಬೇರೆಯವರಿಗೆ ಹೇಳಿ ಬರೆಸಿ ಎಂದರು, ಅದಕ್ಕಾಗಿ ನಾನೇ ಯಾಕೆ ಪ್ರಯತ್ನಿಸಬಾರದು ಎಂದು ಕೃತಿ ರಚನೆಗೆ ಮುಂದಾದೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.


ಮತ್ತೊಂದು ಪ್ರಶ್ನೆಗೆ ಇದು ಗ್ರಂಥವಾಗಿ ಹೊರಹೊಮ್ಮಬೇಕು ಎಂದುಕೊಂಡಿದ್ದೆ, ಈ ಮಧ್ಯೆ ಕೆಲವು ಸ್ನೇಹಿತರು ಅದಕ್ಕೆ ಬೇರೆಯವರ ಅಭಿಪ್ರಾಯವನ್ನೂ ಸೇರಿಸಿ ಎಂದು ಕೊಟ್ಟ ಸಲಹೆ ಮೇರೆಗೆ ಇದನ್ನು ಪರಿವರ್ತಿಸಿಕೊಳ್ಳ ಲಾಗಿದೆ ಎಂದರು.

ಆನ್‌ಲೈನ್‌ನಲ್ಲಿ ಕೆಲವರು ಬಿಡುಗಡೆ ಮಾಡುವುದನ್ನು ಗಮನಿಸಿದೆ, ಮನೆಯವರು ಆನ್‌ಲೈನ್‌ನಲ್ಲೇ ಬಿಡುಗಡೆ ಮಾಡಿ ಎಂದು ಸಲಹೆ ನೀಡಿದರು. ಆದರೆ ನನ್ನ ಜನರ ಮಧ್ಯೆ, ಗುರುಹಿರಿಯರ ಮಧ್ಯೆ ಬಿಡುಗಡೆ ಮಾಡುವುದು ಸೂಕ್ತ ಎಂದು ಈ ರೂಪದಲ್ಲಿ ಪ್ರಕಟಿಸುತ್ತಿದ್ದೇನೆ ಎಂದು ಅವರು ವಿವರಿಸಿದರು.


*ಕಿರು ಪರಿಚಯ*

ಮಂಗಾಡಹಳ್ಳಿಯ ಲೇಟ್ ಲಿಂಗೇಗೌಡರ ಮಗನಾದ ಇವರು, ಈಗ ಬೆಂಗಳೂರು ವಾಸಿ. ಮುಖ್ಯ ಇಂಜಿಯರ್ ಆಗಿ ನಿವೃತ್ತರಾಗಿದ್ದು, ಇವರಿಗೆ ಫೆಲೋಇನ್ ಇನ್‌ಸ್ಟಿ ಟೂಟ್ ಆಫ್ ಇಂಜಿನಿಯರ್ಸ್, ಫೆಲೋ ಇನ್ ಇನ್‌ಸ್ಟಿಟೂಟ್ ಆಫ್ ವ್ಯಾಲ್ಯೂರ್ಸ್ ಫೆಲೊ ಇನ್ ಕೌನ್ಸಿಲ್ ಆಫ್ ಆರ್‌ಬಿಟ್ ರೇರ್ಸ್, ಫೆಲೋ ಇನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಆರ್‌ಬಿ ಟ್ರೇಟ್ಸ್ ಚಾರ‍್ಟರ್ ಇಂಜಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ.


ಮಂಗಾಡಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಕೋಡಂಬಹಳ್ಳಿ ಯಲ್ಲಿ ಮಾಧ್ಯಮಿಕ ಶಾಲೆ, ಚನ್ನಪಟ್ಟಣ ಬಾಲಕರ ಪ್ರೌಢಶಾಲೆ ಹಾಗೂ  ಮಂಡ್ಯ ಮುನಿಸಿಪಲ್ ಹೈಸ್ಕೂಲ್‌ನಲ್ಲಿ ಪ್ರೌಢಶಾಲೆ ಮುಗಿಸಿ, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯು ಹಾಗೂ ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿಯರಿಂಗ್ ಕಾಲೇಜಿನಲ್ಲಿ 1966 ರಲ್ಲಿ ಬಿಇ ಮುಗಿಸಿ, ಇಂಜಿಯರ್ ಆಗಿ, ಬಡ್ತಿ ಹೊಂದುತ್ತಾ, 2001 ರಲ್ಲಿ ಮುಖ್ಯ ಇಂಜಿಯರ್ ಆಗಿ ನಿವೃತ್ತರಾಗಿದ್ದಾರೆ. ಈಗಲೂ ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.


ಗೋಷ್ಠಿಯಲ್ಲಿ ಬರಹಗಾರ ಡಾ.ಕೂಡ್ಲೂರು ವೆಂಕಟಪ್ಪ ಹಾಗೂ ಮಾದಯ್ಯನವರ ಸಹವರ್ತಿಯಾದ ರಂಗರಾಜು ಸಹ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑