Tel: 7676775624 | Mail: info@yellowandred.in

Language: EN KAN

    Follow us :


ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

Posted date: 07 Nov, 2021

Powered by:     Yellow and Red

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ ಕೃತಿಯನ ಲೋಕಾರ್ಪಣೆ ಮಾಡಿದ ರಾಜ್ಯದ ಉನ್ನತ ಶಿಕ್ಷಣ ಸಚಿವ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ ರವರು, ಎಂ.ಎಲ್ ಮಾದಯ್ಯನವರ ಜೀವನ ನಮ್ಮಲ್ಲಿನ ಎಲ್ಲರಿಗೂ ಆದರ್ಶಣೀಯವಾದದು, ಅವರ ಮಾರ್ಗದಲ್ಲಿ ನಮ್ಮ ವಿದ್ಯಾವಂತ ಸಮೂಹ ಮುಂದುವರಿಯಬೇಕಾಗಿದೆ ಎಂದರು.


ಅಂದಿನ ಕಾಲದಲ್ಲಿ ಕುಗ್ರಾಮದಲ್ಲಿ ಹುಟ್ಟಿದ ವ್ಯಕ್ತಿ ಇಂಜಿಯರಿಂಗ್ ಪರೀಕ್ಷೆಯಲ್ಲಿ 8 ನೇ ರ‍್ಯಾಂಕ್ ಪಡೆದು, ಸಹಾಯಕ ಇಂಜಿಯರ್ ಆಗಿ, ತಮ್ಮ ಪ್ರತಿಭೆಯ ಪ್ರದರ್ಶನದ ಮೂಲಕ ರಾಜ್ಯದ ಮುಖ್ಯ ಇಂಜಿಯರ್ ಆಗಿ ಲೋಕೋಪಯೋಗಿ ಇಲಾಖೆಯಲ್ಲಿ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ಈಗಲೂ ಸಹ ಅವರು ವಿವಿಧ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ದುಡಿಯುತ್ತಾ ತಮ್ಮ ಕೀರ್ತಿಯನ್ನು ಮೆರೆದಿದ್ದಾರೆ ಎಂದರು.

ಇಂತಹವರ ರೀತಿಯಲ್ಲಿ ನಮ್ಮ ರಾಮನಗರ ಜಿಲ್ಲೆಯ ಅನೇಕ ಜನರು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ವಿಶ್ವ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನನ್ನ ಬಯಕೆ. ಮನಸ್ಸಿದ್ದರೆ ಮಾರ್ಗ ಎಂಬುದು ಇವರಿಂದ ನಾವು ಕಲಿಯುವ ಪಾಠವಾಗಿದೆ. ಅದನ್ನು ಸಾಧಿಸಿ ತೋರಿಸುವ ಛಲ ನಮ್ಮ ಯುವಕರಲ್ಲಿ ಬರಲಿ ಎಂದು ಅವರು ಆಶಿಸಿ ಅವರ ಅನುಭವಗಳನ್ನು ಈ ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ, ಅದನ್ನು ಎಲ್ಲರೂ ಓದುವಂತಾಗಲಿ ಎಂದರು.


ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರು, ಮಾದಯ್ಯನವರನ್ನು ನಾನು ಹತ್ತಿರದಿಂದ ಬಲ್ಲೆ, ಅವರ ಶಿಸ್ತು, ಸಂಯಮ ಹಾಗೂ ಪ್ರಾಮಾಣಿಕತೆಗಳು, ಅವರನ್ನು ನಾಲ್ಕು ಜನರು ಗುರುತಿಸುವಂತಾಗಿದೆ.ಅವರಂತೆ ಎಲ್ಲರೂ ಆದರೆ ಈಗಿನ ಘಾತುಕತನ ಕಡಿಮೆಯಾಗುತ್ತದೆ ಎಂದರು.


ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ನಾಡೋಜ, ಶಿಕ್ಷಣ ತಜ್ಞರಾದ ವೂಡೇ ಪಿ.ಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಅ.ದೇವೇಗೌಡ, ಮಾಜಿಮಂತ್ರಿ ಮುಳುಬಾಗಿಲು ಶಾಸಕ ಹೆಚ್. ನಾಗೇಶ್ ಅವರು ಉಪಸ್ಥಿತರಿದ್ದರು.

ವಿಶೇಷ ಆಹ್ವಾನಿತರಾಗಿ ಕುವೆಂಪು ವಿಶ್ವ ವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಚಿದಾನಂದಗೌಡ, ಆರ್‌ಜಿಯುಹೆಚ್‌ಎಸ್ ವಿಶ್ರಾಂತ ನಿರ್ದೇಶಕರಾದ ಡಾ.ಕೆ.ಪಿ ಪುತ್ತೂರಾಯ, ವಿಧಾನ ಪರಿಷತ್ ಸದಸ್ಯ ಅ ದೇವೇಗೌಡ, ಪ್ರೊ ಕೆ ಮಲ್ಲಯ್ಯ ಪಾಲ್ಗೊಂಡಿದ್ದರು.

ಕೃತಿಯನ್ನು ಕುರಿತು ಮಾತನಾಡಿದ ಬಿಎಂ ಶ್ರೀ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಬೈರಮಂಗಲ ರಾಮೇಗೌಡ ಅವರು, ಈ ಕೃತಿಯಲ್ಲಿ ಮಾದಯ್ಯನವರ ನಿಜ ವಿಚಾರ ಲಹರಿ ಹರಿದು ಬಂದಿದೆ. ಈಗಿನ ಅಧಿಕಾರಿಗಳು ಅದನ್ನು ಓದುವ ಮೂಲಕ  ಸಾರ್ಥಕ ಮಾಡಿಕೊಳ್ಳಬೇಕು ಎಂದರು.

ಸಂದರ್ಭದಲ್ಲಿ ಕೃತಿಕಾರ ಎಂ.ಎಲ್ ಮಾದಯ್ಯನವರು, ತಮ್ಮ ಪತ್ನಿ ಸಮೇತ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನ ಪ್ರಾಂಶುಪಾಲರಾದ ರಾಮಲಿಂಗಯ್ಯ, ಪ್ರೌಢ ಶಾಲಾವಿಭಾಗದ ಉಪ ಪ್ರಾಂಶುಪಾಲರಾದ ಪಾರ್ವತಮ್ಮ, ಹಿರಿಯ ವಿದ್ಯಾರ್ಥಿಸಂಘದ ಪ್ರಮುಖ ತಿಟ್ಟಮಾರನಹಳ್ಳಿ ಸಿದ್ದೇಗೌಡ ಅವರನ್ನು ಸನ್ಮಾನಿಸಲಾಯಿತು. ಹಾಗೂ ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿದರು.


ಬೆಂಗಳೂರಿನ ಎಸ್‌ಎಲ್‌ಎನ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಕೂಡ್ಲೂರು ವೆಂಕಟಪ್ಪ ನಿರೂಪಣೆ ಮಾಡಿದರು. ಡಾ.ಮಾದಯ್ಯ ಕುಟುಂಬದ ವರಾದ ರಾಘವೇಂದ್ರ ಅವರು ಸ್ವಾಗತ ಬಯಸಿದರು. ಕಾರ್ಯಕ್ರಮದಲ್ಲಿ ಅನೇಕ ನಿವೃತ್ತ ಅಧಿಕಾರಿಗಳು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑