Tel: 7676775624 | Mail: info@yellowandred.in

Language: EN KAN

    Follow us :


ಮುನಿಯಪ್ಪನದೊಡ್ಡಿ‌ ಸರ್ಕಾರಿ ಶಾಲಾ ಮಕ್ಕಳಿಗೆ ಟೀ ಶರ್ಟ್ ವಿತರಿಸಿದ ಲೋಕೇಶ್

Posted date: 19 Nov, 2021

Powered by:     Yellow and Red

ಮುನಿಯಪ್ಪನದೊಡ್ಡಿ‌ ಸರ್ಕಾರಿ ಶಾಲಾ ಮಕ್ಕಳಿಗೆ ಟೀ ಶರ್ಟ್ ವಿತರಿಸಿದ ಲೋಕೇಶ್

ಚನ್ನಪಟ್ಟಣ: ತಾಲೂಕಿನ ಮುನಿಯಪ್ಪನದೊಡ್ಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಮಾಜಸೇವಕ, ಜೆಡಿಎಸ್ ನಾಯಕ ನರ್ಸರಿ ಲೋಕೇಶ್ ಗುರುವಾರ ಟೀ ಶರ್ಟ್ ಗಳನ್ನು ವಿತರಿಸಿದರು.


ಈ ವೇಳೆ ಮಾತನಾಡಿದ ಅವರು, ಕೋವಿಡ್ ನಂತರ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಗೊಂಡಿರುವುದು ಸಂತಷದ ವಿಚಾರ. ಈ ಹಿಂದೆ ಸರ್ಕಾರಿ ಶಾಲೆಗಳು ಎಂದರೆ, ಪಾಲಕರು ಮೂಗು ಮುರಿಯುತ್ತಿದ್ದರು. ಈ ಸನ್ನಿವೇಶ ಬದಲಾಗಿರುವುದು ಸರ್ಕಾರಿ ಶಾಲೆಗಳ ಉಳಿವಿನ ದೃಷ್ಟಿಯಲ್ಲಿ ಪೂರಕವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತದೆ. ಸಮುದಾಯ ಹಾಗೂ ಉಳ್ಳವರು ತಮ್ಮ ಕೈಲಾದ ನೆರವನ್ನು ಸರ್ಕಾರಿ ಶಾಲೆಗಳಿಗೆ ನೀಡಬೇಕು. ಎಲ್ಲದಕ್ಕೂ ಸರ್ಕಾರವನ್ನೆ ಅವಲಂಬಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.


ಈ ಹಿಂದಿನಿಂದಲೂ ಉದ್ಯಮದಲ್ಲಿ ಬಂದ ಲಾಂಭಾಂಶದಲ್ಲಿ ನನ್ನ ಕೈಲಾದಷ್ಟೂ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದೇನೆ. ಯಾರೊಬ್ಬರು ಕೂಡ ಶಿಕ್ಷಣದಿಂದ ವಂಚಿತರಾಗಬಾರದು. ಶಿಕ್ಷಣವೇ ಈ ದೇಶದ ಭವ್ಯ ಆಸ್ತಿ ಎಂದು ಅಭಿಪ್ರಾಯಪಟ್ಟರು.

ನಾನು  ಇಲ್ಲಿವರೆಗೆ  ಮಾಡಿದ ಸಮಾಜಸೇವೆಗಿಂತ ಸರ್ಕಾರಿ  ಶಾಲೆಯ ಮಕ್ಕಳಿಗೆ  ಮಾಡುತ್ತಿರುವ ಕೆಲಸ ತುಂಬಾ ಸಂತಸ ತಂದಿದೆ. ಇನ್ನು ಮುಂದೆ  ಪ್ರತಿ ತಿಂಗಳು ಒಂದೊಂದು  ಸರ್ಕಾರಿ ಶಾಲೆಗೆ ಟೀ ಶರ್ಟ್  ಕೊಡುವ ಕಾರ್ಯಕ್ರಮವನ್ನು ಮಾಡುತ್ತೇನೆ ಎಂದು ಘೋಷಿಸಿದರು. ಭವಿಷ್ಯ  ಸಮಾಜದ  ಪ್ರಜೆಗಳಾದ  ವಿದ್ಯಾರ್ಥಿಗಳು ಚೆನ್ನಾಗಿ ಅಭ್ಯಾಸಿಸಿ ಶಿಕ್ಷಕರಿಗೆ ಹಾಗೂ ಪಾಲಕರಿಗೆ ಕೀರ್ತಿ ತರಬೇಕು ಎಂದು ಕರೆನೀಡಿದರು.


ಕ್ಷೇತ್ರ ಸಂಪನ್ಮೂಲ  ಸಮನ್ವಯಾಧಿಕಾರಿ ಎಸ್.ವಿ. ಕುಸುಮಲತಾ ಮಾತನಾಡಿ, ಸಮಾಜದಲ್ಲಿ ಉಳ್ಳವರು ಸಾಮಾಜಿಕ ಕಳಕಳಿಯನ್ನು ಮೆರೆಯಬೇಕು. ಸರ್ಕಾರಿ ಶಾಲೆಗಳ ಅಭಿವೃದ್ಧಿ ಕೇವಲ ಸರ್ಕಾರದ ಕೆಲಸವಲ್ಲ. ಸಮುದಾಯದ ಮಂದಿಯೂ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಲೋಕೇಶ್‍ರವರಂತಹ ಸಮಾಜಸೇವಕರ ಸಂತತಿ ಹೆಚ್ಚಾಗಬೇಕು. ನಮ್ಮ ಸರ್ಕಾರಿ  ಶಾಲೆಯ ಮಕ್ಕಳ ಬಗ್ಗೆ ಅವರಿಗೆ  ಇರುವ ಕಾಳಜಿ ಮತ್ತು ಇವರ  ಕೆಲಸ ಇತರರಿಗೂ ಮಾದರಿಯಾಗಿದೆ. ಸಾಕಷ್ಟು  ಜನ ಶ್ರೀಮಂತರಿದ್ದಾರೆ. ಎಲ್ಲರಿಗೂ ಇಂತಹ ಸಹೃದಯ  ಇರುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಈ ವೇಳೆ ಸಿ.ಆರ್.ಪಿ  ರಾಮಣ್ಣ, ಮುಖ್ಯ ಶಿಕ್ಷಕಿ ರತ್ನಮ,  ಶಿಕ್ಷಕಿಯರಾದ ಭಾನುಮತಿ,

ಚಿಕ್ಕತಾಯಮ್ಮ, ನಮಿತಾ,  ನೇತ್ರಾವತಿ, ಪದ್ಮ,  ಭಾನುಮತಿ  ಪ್ರಜಾಯತ್ನ  ಸಂಸ್ಥೆಯ  ಅರಸು, ಎಸ್.ಡಿ.ಎಂ.ಸಿ  ಅಧ್ಯಕ್ಷ ಸುಬ್ಬರಾಜು, ಸದಸ್ಯರಾದ ಆಶಾ, ರೂಪಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑