Tel: 7676775624 | Mail: info@yellowandred.in

Language: EN KAN

    Follow us :


ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

Posted date: 29 Nov, 2021

Powered by:     Yellow and Red

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃ ತರಾದ ಉತ್ತರ ಪ್ರದೇಶದ ಜನಪದ ಸೂಫಿ ಗಾಯಕರಾದ ಜನಾಬ್ ಮೊಹಮ್ಮದ್ ಸಲೀಂ ಹಸನ್ ಚಿಸ್ತಿಯವರಿಗೆ, ಕಾರ್ಯಕ್ರಮ ಉದ್ಘಾಟನೆ ಮಾಡಿದ ಆದಿ ಚುಂಚನಗಿರಿ ಮಠಾಧೀಶರಾದ ಶ್ರೀ ಡಾ. ನಿರ್ಮಲಾನಂದ ಸ್ವಾಮೀಜಿಯವರು ಪ್ರಶಸ್ತಿ ಪ್ರದಾನ ಮಾಡಿದರು.


ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿಯವರು, ಜಾನಪದ ಪರಿಷತ್ತು ಮಧ್ಯೆ ಬಂದ ಯಾವುದೇ ಅಡೆ ತಡೆಗಳಿಗೆ ಜಗ್ಗದೆ, ಕಾಲಕಾಲಕ್ಕೆ ತನ್ನ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಹೋಗುತ್ತಿದೆ. ಜಗತ್ತಿನಲ್ಲಿ ಏನೇನು ಬದಲಾವಣೆಗಳು ಆಗುತ್ತಿದೆಯೋ ಅದಕ್ಕೆ ಪ್ರತಿಯಾಗಿ ಬೆಂಗಳೂರು ಕೂಡ ಧ್ವನಿಸಿ ಮುಂದೆ ಸಾಗುತ್ತಿದೆ. ವಿಜ್ಞಾನ ತಂತ್ರಜ್ಞಾನ ವಿಷಯದಲ್ಲಿ ತನ್ನದೆ ದಾರಿಯಲ್ಲಿದೆ. ಅಮೆರಿಕೆಯ ಅಧ್ಯಕ್ಷನಾಗಿದ್ದ ಒಬಾಮಾ ಬೆಂಗಳೂರಿಗೆ ಬಂದಿದ್ದಾಗ ಬೆಂಗಳೂರಿನ ಮಕ್ಕಳ ಕೊಡುಗೆ ಅಪಾರ, ಅದನ್ನು ಅಮೆರಿಕೆಯ ಮಕ್ಕಳೂ ಸೇರಿದಂತೆ ಪ್ರಪಂಚದ ಎಲ್ಲಾ ದೇಶದ ಮಕ್ಕಳೂ ಸಹ ಒಂದು ಸಾರಿ ಗಮನಿಸಬೇಕು ಎಂದಿದ್ದರು.


ಮುಂದೊಂದು ದಿವಸ ತಂತ್ರಜ್ಞಾನ, ವಿಜ್ಞಾನ ಎಲ್ಲವನ್ನೂ ಸಹಿಸಲಾಗದು,  ಐನ್‌ಸ್ಟೀನ್, ಮುಂದೊಂದು ಜನ್ಮವಿದ್ದರೆ, ಕಾಡಿನ ಮಧ್ಯೆ ಹರಿಯುತ್ತಿರುವ ನದಿಯ ಪಕ್ಕದಲ್ಲಿ ಗುಡಿಸಿನಲ್ಲಿ ನಾನು ಓರ್ವ ರೈತನ ಮಗನೋ, ಬಡಗಿಯ ಮಗನಾಗಿಯೋ ಹುಟ್ಟಿ ಸಂತೈಸಿಕೊಳ್ಳುತ್ತೇನೆ ಎಂದಿದ್ದರು.

ಅದಕ್ಕಿಂತಲೂ ಮೊದಲು ನಮ್ಮ ನಾಡಿನ ಹೆಮ್ಮೆಯ ಕವಿ ಕುವೆಂಪು ಅಂತಹದ್ದೇ ಒಂದು ಭಾವನೆಯ ಕವಿತ ಬರೆದಿದ್ದರು. ಇವೆಲ್ಲವೂ ಅತಿಯಾದಾಗ ಜಾನಪದ ವೆಂಬ ಪರ್ಯಾಯವೇ ಹಿಂದೆ ಉಳಿದಿದ್ದು, ಮುಂದೆ ಉಳಿಯುವಂತಹದ್ದು ಎಂದು ಹೋಲಿಕೆ ನೀಡಿ, ಅಕ್ಬರನ ಆಸ್ತಾನದಲ್ಲಿ ಹಾಡುತ್ತಿದ್ದ ಸೂಫಿ ಸಂತರ ಪರಂಪರೆಯ 17ನೇ ತಲೆ ಮಾರಿನ ಈ ಕಲಾವಿದನಿಗೆ ಪ್ರಶಸ್ತಿ ಕೊಡಮಾಡುತ್ತಿರುವುದು ಸಾಧುವಾಗಿದೆ ಎಂದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಾನಪದ ವಿದ್ವಾಂಸ ಡಾ.ಗೊ.ರು ಚನ್ನಬಸಪ್ಪ ಮಾತನಾಡಿ, ನನ್ನನ್ನು ಅತಿಥಿ ಎಂದು ಕರೆದಿದ್ದಾರೆ, ಅದು ಅವರ ಅಭಿಮಾನ, ನಾನು ಈ ಮನೆಯಲ್ಲಿಯೇ ಇದ್ದು, ಜಾನಪದ ಪರಿಷತ್ತನ್ನು ನಾಡೋಜ ಎಚ್.ಎಲ್ ನಾಗೇಗೌಡರು ಬೆಳೆಸಿದ್ದನ್ನು ಗಮನಿಸಿದ್ದೇನೆ, ಅವರೊಬ್ಬ ಸಾಹಿತಿಯಷ್ಟೇ ಅಲ್ಲ, ಜಾನಪದ ಪರಿಷತ್ತನ್ನು ಸಶಕ್ತವಾಗಿ ಕಟ್ಟಿದ್ದಾರೆ, ಅವರೊಬ್ಬ ಸಾಧಕ ಅವಿಶ್ರಾಂತ ದುಡಿಮೆಯಿಂದ ಈ ಪರಿಷತ್ತು, ಗಟ್ಟಿಯಾಗಿ ನೆಲೆಯೂರಿದೆ. ಅವರು ಪ್ರಾಚೀನ ಹಾಗೂ ಅರ್ವಾನಚೀನ ಸಮನ್ವಯಕಾರ ಎಂದರು. ಸರ್ಕಾರ ಸ್ಥಾಪಿಸಿ ರುವ ಜಾನಪದ ವಿಶ್ವ ವಿದ್ಯಾನಿಲಯ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ, ಜಾನಪದ ಕಲಾವಿದರ ಪ್ರಾತಿನಿಧಿಕ ಸಂಸ್ಥೆಯಾಗಿ ಪರಿಷತ್ತು, ಅವರ ಬೇಕು ಬೇಡಗಳನ್ನು ಈಡೇರಿಸಿಕೊಡಲು ಮುಂದಾಗಿದೆ ಎಂದರು.

ಆಶಯ ಭಾಷಣ ಹಾಗೂ ಅಧ್ಯಕ್ಷ ಭಾಷಣ ಎರಡನ್ನೂ ಮಾಡಿದ, ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಟಿ. ತಿಮ್ಮೇಗೌಡರು, ಓರ್ವ ಐಎಎಸ್ ಅಧಿಕಾರಿಯಾಗಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೃತಿಗಳನ್ನು ನಾಗೇಗೌಡರು ನೀಡಿದ್ದಾರೆ, ಅವರ ಪ್ರವಾಸ ಕಥನ, ಎಂಟು ಸಂಪುಟಗಳಲ್ಲಿ ಪ್ರಕಟಗೊಂಡಿದ್ದು ದೊಡ್ಡ ಸಾಧನೆಯಾಗಿದೆ. ಶ್ರೀಯುತರು ಜಾನಪದ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು, ಅವರು ಮಾಡಿರುವುದನ್ನು ನಾವು ಉಳಿಸಿ ಬೆಳೆಸಿಕೊಂಡು ಹೋದರೆ, ಅವರ ಆತ್ಮಕ್ಕೆ ಚಿರಶಾಂತಿ ನೀಡಿದಂತೆ, ಈಗ ಜಾನಪದ ಲೋಕ ಕಲಾವಿದರ ಕಾಶಿಯಾಗಿದೆ ಎಂದರು.


ನಾಗೇಗೌಡರ ನಂತರ ಅಧ್ಯಕ್ಷರಾಗಿದ್ದ ಜಿ.ನಾರಾಯಣ, ಭದ್ರ ಭುನಾದಿ ಹಾಕಿದ್ದಾರೆ. ಸರ್ಕಾರ ನೀಡುವ ಜಾನಪದ ಶ್ರೀ ಗಿಂತ ಒಂದು ಕೈ ಮೇಲಾಗಿರುವ ಈ ಪ್ರಶಸ್ತಿಯನ್ನು 2015 ರಿಂದ ಇಲ್ಲಿಯವರೆಗೆ 6 ಜನ ಅರ್ಹ ಕಲಾವಿದರಿಗೆ 1 ಲಕ್ಷ ನಗದು ಹಾಗು ಫಲಕ ನೀಡುತ್ತಾ ಬಂದಿದೆ ಎಂದರು.


ಸಂದರ್ಭದಲ್ಲಿ ಪ್ರಶಸ್ತಿ ಪುರಸ್ಕೃತ ಜನಾಬ್ ಮೊಹಮದ್ ಸಲೀಂ ಹಸನ್ ಚಿಸ್ತಿ ಮಾತನಾಡಿ, ಕನ್ನಡ ಜನರ ಹೃಯದ ವೈಶಾಲ್ಯತೆಯ ಬಗ್ಗೆ ಅಭಿನಂದಿಸಿದರು. ಕರ್ನಾಟಕ ಜಾನಪದ ಪರಿ ಷತ್ತು ತಮ್ಮನ್ನು ಗುರುತಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ನನಗೆ ಅಂತರರಾಷ್ಟ್ರೀಯ ಮಟ್ಟ ದಲ್ಲೂ ಪ್ರಶಸ್ತಿ ಬಂದಿದೆ, ಆದರೆ ಇದು ಬಂದಾಗ ಆದ ಸಂತೋಷ ಅಪೂರ್ವ ಎಂದು ಹೇಳಿ, ಸೂಫಿ ಗಾಯನ ನಡೆಸಿಕೊಟ್ಟರು.


ಮಂತ್ರಿ ಮಹೋದ ಯರ ಗೈರು:

ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿ ಇದ್ದುದರಿಂದ ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಬೇಕಾಗಿದ್ದ ರಾಜ್ಯ ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಗೈರು ಹಾಜರಾದರು.

ಅದೇ ರೀತಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗ ವಹಿಸಬೇಕಾಗಿದ್ದ ಇಲಾಖೆಯ ಕಾರ್ಯದರ್ಶಿಗಳಾದ ಡಾ.ಮಂಜುಳಾ ಎನ್ ಹಾಗೂ ಇಲಾಖೆಯ ನಿರ್ದೇ ಶಕರಾದ ಎಸ್ ರಂಗಪ್ಪ ಅವರು ಗೈರು ಹಾಜರಾದರು. ಆದರೂ ಜನ ಕಿಕ್ಕಿರಿದಿತ್ತು.


ಅವರನ್ನು ಸ್ವಾಗತಿಸಲು ರಾಜ್ಯದ ವಿವಿಧ ಜಾನಪದ ಕಲಾತಂಡ ಸಂವಹನಗೊಳಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶತಕಂಠ ಧ್ವನಿ ಹೊಮ್ಮಿಸಿದ ಹಾಡುಗಾರರಿಂದ, ಅವರನ್ನು ಖುಷಿಗೊಳಿಸಲಾಯ್ತು. ಕೊನೆಯಲ್ಲಿ ಜಾನಪದ ಪರಿಷತ್ತಿನ ವ್ಯವಸ್ಥಾ ಪಕ ಟ್ರಸ್ಟಿ ಆದಿತ್ಯ ನಂಜರಾಜ್ ವಂದನೆಯನ್ನು ಸಲ್ಲಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑