ಆಗ್ನೇಯ ಭಾಗದಿಂದ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆ

ನವದೆಹಲಿ: ಆಗ್ನೇಯ ದಿಕ್ಕಿನಿಂದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ಪ್ರದೇಶಗಳಿಗೆ ಡಿ.4ರಂದು ಬೆಳಗ್ಗೆ ಚಂಡಾಮಾರುತ ಅಪ್ಪಳಿಸುವ ಸಾಧ್ಯತೆಯಿದೆ ಎಂದು ಭಾರತದ ಹವಾಮಾನ ಇಲಾಖೆ ತಿಳಿಸಿದೆ.
ಅಂಡಮಾನ್, ನಿಕೋಬಾರ್ ಭಾಗದಲ್ಲಿರುವ ದಕ್ಷಿಣ ಥೈಲ್ಯಾಂಡ್ ಕಡಲಿನಲ್ಲಿ ಕಡಿಮೆ ಒತ್ತಡ ಪ್ರದೇಶ ಸೃಷ್ಟಿಯಾಗಿದ್ದು, ಇದು ಅಂಡಮಾನ್ ಹಾಗೂ ನಿಕೋಬಾರ್ ಭೂಪ್ರದೇಶಕ್ಕೂ ಪರಿಣಾಮ ಉಂಟುಮಾಡಲಿದ್ದು, ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತಗೊಳ್ಳಲಿದೆ.
ಡಿ.2ರಂದು ಪೂರ್ವ-ಮಧ್ಯೆ ಬಂಗಾಳ ಕೊಲ್ಲಿಯಲ್ಲಿ ಚಂಡಾಮಾರುತ ಪರಿವರ್ತನೆಯಾಗಲಿದೆ. ಬಳಿಕ ವಾಯುವ್ಯಕ್ಕೆ ಚಲಿಸಿ ಅಂದು ಬೆಳಗ್ಗೆ ಉತ್ತರ ಭಾಗದ ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿಗೆ ಅಪ್ಪಳಿಸಲಿದೆ. ಪರಿಣಾಮ ಒಡಿಶಾ ಕರಾವಳಿಯಲ್ಲಿ ಹಾಗೂ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯಲಿದೆ. ಪಶ್ಚಿಮ ಬಂಗಾಳದ ಕರಾವಳಿ ಜಿಲ್ಲೆಗಳಲ್ಲಿ ಹಾಗೂ ಆಂಧ್ರಪ್ರದೇಶದ ಉತ್ತರ ಕರಾವಳಿಯಲ್ಲಿ ಕೂಡ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು