Tel: 7676775624 | Mail: info@yellowandred.in

Language: EN KAN

    Follow us :


ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ

Posted date: 03 Dec, 2021

Powered by:     Yellow and Red

ಕೆ ಹೆಚ್ ರಾಮಯ್ಯ ತಂಡ ಗೆಲ್ಲಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತೇವೆ. ಜಯಮುತ್ತು, ಅ ದೇವೇಗೌಡ ತಂಡ ಮನವಿ

ನಾವು ಯಾವುದೇ ಕಾರಣಕ್ಕೂ ಭ್ರಷ್ಟಾಚಾರ ಸಹಿಸುವುದಿಲ್ಲ. ನಾವೂ ಸಹ ಈ ಹಿಂದಿನ ಅವಧಿಯಲ್ಲೂ ಸಹ ಭ್ರಷ್ಟಾಚಾರ ಮಾಡಿಲ್ಲ. ಮತದಾರರು ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಸಂಘದ ಆಸ್ತಿ ಉಳಿಸುವುದರ ಜೊತೆಗೆ ಸಂಘವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತೇವೆ. ನಮ್ಮ ತಂಡದಲ್ಲಿನ ಎಲ್ಲಾ ಅಭ್ಯರ್ಥಿಗಳಿಗೂ ಮತ ನೀಡುವ ಮೂಲಕ ಮತದಾರರು ಆಶೀರ್ವದಿಸಬೇಕೆಂದು ಅಭ್ಯರ್ಥಿ ಅ ದೇವೇಗೌಡರು ಮನವಿ ಮಾಡಿದರು.

ಅವರು ಇಂದು ಸುಣ್ಣಘಟ್ಟ ಗ್ರಾಮದ ಜಮೀನೊಂದರಲ್ಲಿ ಕೆ ಹೆಚ್ ರಾಮಯ್ಯ ತಂಡದವರು ಹಮ್ಮಿಕೊಂಡಿದ್ದ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿಣಿ ಸಮಿತಿ ಚುನಾವಣೆಯಲ್ಲಿ ಮತದಾರರನ್ನು ಕುರಿತು ಮಾತನಾಡಿದರು.


ತಂಡದ ಮತ್ತೊಬ್ಬ ನಾಯಕ ಜಯಮುತ್ತು ಮಾತನಾಡಿ ನಾನು ಯಾವುದೇ ರೀತಿಯಲ್ಲೂ ಈ ಹಿಂದೆ ಭ್ರಷ್ಟಾಚಾರ ಮಾಡಿಲ್ಲ. ನಾನು ಒಂದು ತಂಡದಲ್ಲಿದ್ದೆ. ಅಲ್ಲೂ ಕುದುರೆ ವ್ಯಾಪಾರ ನಡೆಯುತ್ತಿರುವುದರಿಂದ ಅ ದೇವೆಗೌಡ ಮತ್ತು ಸ್ನೇಹಿತರ ತಂಡ ಕಟ್ಟಿಕೊಂಡು ಸ್ಪರ್ಧಿಸಿದ್ದೇನೆ. ನನಗೆ ಮಾತ್ರ ಮತ ನೀಡಬೇಡಿ. ಇಡೀ ನನ್ನ ತಂಡಕ್ಕೆ ಮತನೀಡಿ. ತಂಡವನ್ನು ಗೆಲ್ಲಿಸಿದರೆ ಮಾತ್ರ ಹೆಚ್ಚಿನ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇಡೀ ಜಿಲ್ಲೆಯಲ್ಲಿ ಸಮುದಾಯದ ಕೆಲಸವನ್ನು ಮಾಡುತ್ತೇನೆ ಎಂದರು.


ನನಗೆ ಹಣ ಮಾಡುವ ಉದ್ದೇಶವಿಲ್ಲಾ, ನನಗೆ ಒಂದು ಪಕ್ಷದಲ್ಲಿ ತಾಲ್ಲೂಕು ಅಧ್ಯಕ್ಷ ಆಗಿದ್ದೇನೆ. ಆದರೆ ಸಮುದಾಯದ ವಿಷಯಕ್ಕೆ ಬಂದಾಗ ಸಮಸ್ಯೆ ಹೇಳಿಕೊಂಡು ಬಂದವರೆಲ್ಲರಿಗೂ ವೈಯುಕ್ತಿಕವಾಗಿ ಸಹಾಯ ಹಸ್ತ ಚಾಚಿದ್ದೇನೆ. ಎಲ್ಲರನ್ನೂ ಭೇಟಿ ಮಾಡಲು ಸಾಧ್ಯವಾಗದಿರುವುದರಿಂದ ನಮ್ಮ ತಂಡಕ್ಕೆ ಸಂಪೂರ್ಣ ಮತನೀಡಿ ಎಂದು ಮನವಿ ಮಾಡಿದರು. ಮುಂದಿನ ಅವಧಿಯಲ್ಲಿ ಇಡೀ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಲ

 ಶ್ರಮಿಸುತ್ತೇನೆ ಎಂದು ಅವರು ನೆರೆದಿದ್ದ ಮತದಾರರಲ್ಲಿ ಮನವಿ ಮಾಡಿದರು.


ತಂಡದಲ್ಲಿರುವ ಅಭ್ಯರ್ಥಿಗಳಾದ ಚಂದ್ರಶೇಖರ್ ಕೆ ಟಿ. ಬಿ ಟಿ ಜವರೇಗೌಡ, ದರ್ಶನ್, ಸಿ‌ಕೆ. ಎಂ ಪುಟ್ಟಸ್ವಾಮಿ, ಪ್ರಸಾದ್ ಪಿವಿಎಸ್, ಎಲ್ ಬಾಲರಾಜು. ಎಸ್ ಮಂಜುನಾಥ್, ಲಕ್ಷ್ಮಣ ಬಿ ಎಸ್. ಸೊಣ್ಣೇಗೌಡ ಎನ್ ಎಂ. ಸೋಮಶೇಖರ ಎ ಸಿ. ಹನುಮಂತಗೌಡ, ಡಿ ಹನುಮಂತಯ್ಯ, ಹರೀಶ್ ಎನ್, ರವರು ತಮ್ಮ ಕ್ರಮ ಸಂಖ್ಯೆ ಮತ್ತು ಪೂರ್ವಾಪರ ಪರಿಚಯಿಸಿಕೊಂಡು ಮತದಾರರಲ್ಲಿ ಮತಯಾಚನೆ ಮಾಡಿದರು.

ತಾಲ್ಲೂಕಿನಾದ್ಯಂತ ಐದು ಸಾವಿರಕ್ಕೂ ಹೆಚ್ಚು ಮಂದಿ ಮತದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎಲ್ಲಾ ಮತದಾರರಿಗೂ ಬಾಡೂಟದ ವ್ಯವಸ್ಥೆ ಮಾಡಲಾಗಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑