Tel: 7676775624 | Mail: info@yellowandred.in

Language: EN KAN

    Follow us :


ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ: ಡಾ.ರಾಕೇಶ್ ಕುಮಾರ್

Posted date: 04 Dec, 2021

Powered by:     Yellow and Red

ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ: ಡಾ.ರಾಕೇಶ್ ಕುಮಾರ್

ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾರ್ಮಿಕರ ದತ್ತಾಂಶವನ್ನು ಸಿದ್ದಪಡಿಸಲು ಇ-ಶ್ರಮ್ ಪೋರ್ಟನಲ್ಲಿ ಜಿಲ್ಲೆಯ ಎಲ್ಲಾ ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತವಾಗಿ ನೋಂದಣಿ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್  ಕೆ ಅವರು‌ ತಿಳಿಸಿದರು.


ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಅಸಂಘಟಿತ ಕಾರ್ಮಿಕರ ನೋಂದಣಿಗಾಗಿ ಕೇಂದ್ರ ಸರ್ಕಾರ ಅಭಿವೃದ್ಧಿ ಪಡಿಸಿರುವ ಸಮಗ್ರ ರಾಷ್ಟ್ರೀಯ ಡೇಟಾಬೇಸ್ ಸಿದ್ಧಪಡಿಸುವ ನಿಟ್ಟಿನಲ್ಲಿ ಜರುಗಿದ ಜಿಲ್ಲಾಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ಧಪಡಿಸಲು ಕಾರ್ಮಿಕ ಮತ್ತು ಉದ್ಯೋಗ ಮಂತ್ರಲಾಯವು ಇ-ಶ್ರಮ್ ಪೋರ್ಟಲ್   (www.eshram.gov.in) ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು. 

*ಯಾವ ವರ್ಗದವರಿಗೆ ಸೌಲಭ್ಯ:*

ಕೃಷಿ  ಕಾರ್ಮಿಕರು, ಕಟ್ಟಡ ಕಾರ್ಮಿಕರು ಕೂಲಿ ಕಾರ್ಮಿಕರು (ನರೆಗಾ), ಬೀದಿ ವ್ಯಾಪಾರಿಗಳು, ಹಮಾಲಿ ಕಾರ್ಮಿಕರು, ಅರಣ್ಯ ಕಾರ್ಮಿಕರು, ರೇಷ್ಮೆ ಬೆಳೆಗಾರರು, ಸಣ್ಣ  ಮತ್ತು ಅತೀ ಸಣ್ಣ ರೈತರು, ಕಸ ಮತ್ತು ಮರುಬಳಕೆ  ಸಂಗ್ರಹ  ಕಾರ್ಮಿಕರು, ಮೀನುಗಾರರು,  ಪಶು ಸಂಗೋಪನಗಾರರು, ನೇಕಾರರು, ಬಡಗಿ   ಕೆಲಸಗಾರರು, ಆಶಾ  ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು,  ಫೋಟೋಗ್ರಾಫರು, ಕ್ಷೌರಿಕರು,  ತರಕಾರಿ ಮತ್ತು ಹಣ್ಣು  ಮಾರಾಟಗಾರರು, ಮನೆಕೆಲಸಗಾರರು, ಪತ್ರಿಕೆ  ಮಾರಾಟಗಾರರು, ಚಾಲಕರು  ಮತ್ತು ನಿರ್ವಾಹಕರು,  

ಅಂಗಡಿ ವ್ಯಾಪಾರಸ್ಥರು,  ಚರ್ಮ ಕೈಗಾರಿಕಾ ಕಾರ್ಮಿಕರು, ಟೈಲರ್‍ಗಳು, ಹೋಟೆಲ್  ಕಾರ್ಮಿಕರು, ಬೇಕರಿ ವ್ಯಾಪಾರಸ್ಥರು, ವಲಸೆ ಕಾರ್ಮಿಕರು, ಮೆಕಾನಿಕ್ ಹಾಗೂ ಇತರೆ ವೃತ್ತಿಯಲ್ಲಿ  ತೊಡಗಿಸಿಕೊಂಡವರು ಇ-ಶ್ರಮ್ ಪೋರ್ಟಲ್ ಅಡಿಯಲ್ಲಿ ನೊಂದಾಣಿಯಾಗಿ ಸೌಲಭ್ಯ ಪಡೆಯಬಹುದಾಗಿದೆ ಎಂದು ತಿಳಿಸಿದರು.


*ನೋಂದಣಿಯಿಂದಾಗುವ ಪ್ರಯೋಜನ:*

ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆ, ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ 2 ಲಕ್ಷ ರೂ. ಹಾಗೂ ಭಾಗಶ: ಅಂಗವೈಕಲಕ್ಕೆ 1 ಲಕ್ಷ ರೂ. ಪಡೆಯಬಹುದಾಗಿದೆ ಎಂದು ತಿಳಿಸಿದರು.


*ಸಿ.ಎಸ್.ಸಿ ಕೇಂದ್ರಗಳಲ್ಲಿ ಉಚಿತ ನೋಂದಣಿ:*

ಜಿಲ್ಲೆಯಲ್ಲಿ ಒಟ್ಟು 470 ಸಾಮಾನ್ಯ ಸೇವಾ ಕೇಂದ್ರ (ಸಿ.ಎಸ್.ಸಿ)ಗಳಿದ್ದು, ಹತ್ತಿರದ ಕೇಂದ್ರಕ್ಕೆ ಭೇಟಿ ನೀಡಿ ಉಚಿತವಾಗಿ ನೋಂದಾಯಿಸಬಹುದಾಗಿದೆ. ನೋಂದಣಿಗೆ 16 ರಿಂದ 59 ವಯೋಮಿತಿ ಹೊಂದಿದವರಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಆಧಾರ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ, ಬ್ಯಾಂಕ್ ಖಾತೆಯ ವಿವರ ಅರ್ಜಿದಾರರ ನಾಮ ನಿರ್ದೇಶಿತರ ಆಧಾರ ಪ್ರತಿಯನ್ನು ನೋಂದಣಿಗಾಗಿ ತೆಗೆದುಕೊಂಡು ಹತ್ತಿರದ ಸಿ.ಎಸ್.ಸಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವಂತೆ ಹಾಗೂ ಫಲಾನುಭವಿಗಳು ಸ್ವಯಂ ಆಪ್‍ಗಳ ಮೂಲಕವು ಸಹ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ಜಿಲ್ಲಾಧಿಕಾರಿಗಳು ಎಲ್ಲಾ ಇಲಾಖೆಗಳ ಮುಖ್ಯಸ್ಥರುಗಳಿಗೆ ಆಯಾ ಇಲಾಖೆಯಲ್ಲಿ ಒಳಪಡುವ ಅಸಂಘಟಿತ ಕಾರ್ಮಿಕರುಗಳನ್ನು ಗುರುತಿಸಿ ಅರಿವು ಮೂಡಿಸಿ ಕ್ಯಾಂಪ್‍ಗಳ ಮುಖಾಂತರ ಇ-ಶ್ರಮ್ ಪೋರ್ಟನಲ್ಲಿ ನೋಂದಾಯಿಸುವಂತೆ ಸೂಚಿಸಿದರು, ಸಭೆಯಲ್ಲಿ ಕಾರ್ಮಿಕರಿಗೆ ಸಾಂಕೇತಿಕವಾಗಿ ಇ-ಶ್ರಮ್ ಕಾರ್ಡ್‍ಗಳನ್ನು ವಿತರಿಸಲಾಯಿತು.


ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ,  ನಗರಾಭಿವೃದ್ಧಿ ಕೋಶದ‌ ಯೋಜನಾ ನಿರ್ದೇಶಕ ಅಶ್ವಿನ್, ಜಂಟಿ ಕೃಷಿ ನಿರ್ದೇಶಕ ಸೋಮ ಸುಂದರ್, ರೇಷ್ಮೆ ಇಲಾಖೆ ಉಪನಿರ್ದೇಶಕ ಪುಟ್ಟಸ್ವಾಮಿ,  ಜಿಲ್ಲಾ ಕಾರ್ಮಿಕ ಅಧಿಕಾರಿ ಸುಭಾಷ್ ಎಂ.ಆಲದಕಟ್ಟಿ, ಸಿ.ಐ.ಟಿ.ಯೂ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿ.ಬಿ.ರಾಘವೇಂದ್ರ ಸೇರಿದಂತೆ ಇನ್ನಿತರ  ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑