ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ

ಹಲಗೂರು: ಸೌದೆ ಕತ್ತರಿಸಲು ತೆಗೆದುಕೊಂಡಿದ್ದ ಮಚ್ಚನ್ನು ವಾಪಸ್ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮುತ್ತತ್ತಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಾಲುಮಲ್ಲನ ಪುತ್ರ ಮುತ್ತುರಾಜ್ 48 ಮೃತ ಪಟ್ಟವ್ಯಕ್ತಿ.
ಸಂಬಂಧಿಕರೊಬ್ಬರು 5ದಿನಗಳ ಹಿಂದೆ ಮೃತಪಟ್ಟಿದ್ದರು. ಅವರ ಅಂತ್ಯಸಂಸ್ಕಾರಕ್ಕೆ ಸೌದೆ ತರುವುದಕ್ಕಾಗಿ ಅದೇ ಗ್ರಾಮದ ಸಂಜೀವಮೂರ್ತಿ ಎಂಬುವವರ ಬಳಿ ಮುತ್ತುರಾಜ್ ಮಚ್ಚನ್ನು ತೆಗೆದುಕೊಂಡಿದ್ದರು. ಕೆಲವು ದಿನಗಳು ಕಳೆದರೂ ಮಚ್ಚನ್ನು ಕೊಟ್ಟಿರಲಿಲ್ಲ. ಮಚ್ಚನ್ನು ಮರಳಿ ನೀಡುವಂತೆ ಸಂಜೀವ್ ಮೂರ್ತಿ ಮುತ್ತುರಾಜ್ ನನ್ನು ಕೇಳಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಸಂಜೀವಮೂರ್ತಿ ಮುತ್ತುರಾಜನ ಹೊಟ್ಟೆಯ ಭಾಗಕ್ಕೆ ಜೋರಾಗಿ ಹೊಂದಿದ್ದಾನೆ. ನಂತರ ಆತ ಅಲ್ಲೇ ಕುಸಿದು ಬಿದ್ದಿದ್ದಾನೆ. ಈತನನ್ನು ಆಸ್ಪತ್ರೆಗೆ ಸೇರಿಸಲು ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಮೃತಪಟ್ಟಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮಿ ನಾರಾಯಣ ಪ್ರಸಾದ್, ವೃತ್ತನಿರೀಕ್ಷಕ ಧನರಾಜ್ ಭೇಟಿ ನೀಡಿ ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು