Tel: 7676775624 | Mail: info@yellowandred.in

Language: EN KAN

    Follow us :


ಶಿಲಾರೋಹಣ ತರಬೇತಿ ಶಿಬಿರ ಆಯೋಜನೆ

Posted date: 06 Jan, 2022

Powered by:     Yellow and Red

ಶಿಲಾರೋಹಣ ತರಬೇತಿ ಶಿಬಿರ ಆಯೋಜನೆ

ರಾಮನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಶಿಲಾರೋಹಣ ತರಬೇತಿ ಶಿಬಿರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 


ರಾಮನಗರ ಜಿಲ್ಲೆಯ ಯುವಕ ಯುವತಿಯರಿಗೆ ಬಸವನಪುರದಲ್ಲಿ ಜನವರಿ 02 ರಿಂದ 06 ರವರೆಗೆ ಚಾರಣ ಮತ್ತು ಗುಹೆಗಳ ಪರಿಶೋಧನೆ ಶಿಬಿರವನ್ನು ಆಯೋಜಿಸಲಾಗಿತ್ತು. ತರಬೇತಿ ಶಿಬಿರದಲ್ಲಿ  zip line ಮತ್ತು ಕಮಾಂಡೋ ವಾಕ್ or parallel walk ಮುಂತಾದವುಗಳ ಕುರಿತು ತರಬೇತಿ ನೀಡಲಾಯಿತು.


ಶಿಬಿರದ ಕೊನೆಯ ದಿನವಾದ ಇಂದು ರಾಮನಗರ ತಾಲ್ಲೂಕು ಪಂಚಾಯಿತಿ‌ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ ಅವರು ಶಿಬಿರಕ್ಕೆ ಭೇಟಿ ನೀಡಿದರು. ಅವರ ಸಮ್ಮುಖದಲ್ಲಿ, ಶಿಬಿರದಲ್ಲಿ ಭಾಗವಹಿಸಿದ್ದ ಯುವಕ ಯುವತಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. 


ಶಿಬಿರದಲ್ಲಿ ‌ನೀಡಿದ ತರಬೇತಿಯನ್ನು ‌ಕಾರ್ಯನಿರ್ವಾಹಕ ಅಧಿಕಾರಿ ವೀಕ್ಷಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑