Tel: 7676775624 | Mail: info@yellowandred.in

Language: EN KAN

    Follow us :


ಸಣ್ಣ ಪತ್ರಿಕೆಗಳು ಜಾಹೀರಾತು ವಿಷಯದಲ್ಲಿ ಲೋಪ ಮಾಡುತ್ತಿವೆ. ಸು ತ ರಾಮೇಗೌಡ

Posted date: 08 Jan, 2022

Powered by:     Yellow and Red

ಸಣ್ಣ ಪತ್ರಿಕೆಗಳು ಜಾಹೀರಾತು ವಿಷಯದಲ್ಲಿ ಲೋಪ ಮಾಡುತ್ತಿವೆ. ಸು ತ ರಾಮೇಗೌಡ

ಚನ್ನಪಟ್ಟಣ:ಜ.08: 1976ರಲ್ಲಿ ಚನ್ನಪಟ್ಟಣದಿಂದ ‘ಬಯಲುಸೀಮೆ’ ವಾರ ಪತ್ರಿಕೆಯಾಗಿ ತನ್ನ ಪ್ರಕಟಣೆಯನ್ನು ಶುರುಮಾಡಿತು. ಆ ಕಾಲಕ್ಕೆ ಚನ್ನಪಟ್ಟಣದಲ್ಲಿಯೇ ಯಾಕೆ ಆಗಿನ ಬೆಂಗಳೂರು ನಗರ ಹೊರತುಪಡಿಸಿ, ಗ್ರಾಮಾಂತರ ಜಿಲ್ಲೆಯಲ್ಲಿ ಯಾವ ಪತ್ರಿಕೆಗಳು ಕೂಡ ಇರಲಿಲ್ಲ.

ಅಲ್ಲೊಂದು ಇಲ್ಲೊಂದು ತೆರೆಯ ಮರೆಯಲ್ಲಿ ತಮ್ಮ ಸ್ವಹಿತಾಸಕ್ತಿಯ ನೆಲೆಯಲ್ಲಿ ಹೇಗೋ ಹಾಗೆ ಪ್ರಕಟಣೆಗೊಳ್ಳುತ್ತಿದ್ದವು. ಈಗ ರಾಮನಗರ ಜಿಲ್ಲೆಯಲ್ಲಿ ಆ ಮೂಲಕ ಚನ್ನಪಟ್ಟಣ ತಾಲ್ಲೂಕಿನಲ್ಲಿಯೂ ಪತ್ರಿಕೆಗಳು ಬಹಳಷ್ಟು ಪ್ರಕಟವಾಗುತ್ತಿವೆ.


ಹೊಸ ಹೊಸ ವಿಚಾರಗ ಳನ್ನು ಕೊಡುವ ಮೂಲಕ ಹಲವು ಹತ್ತು ಹುಳುಕುಗಳನ್ನು ಎತ್ತಿ ತೋರಿಸಿ, ಅವು ಆರೋಗ್ಯಕರವಾಗಿ ನಡೆದರೆ ಅವುಗಳಿಂದ ಒಳಿತೇ ಆಗಬಹುದು. ಆದರೆ, ಹಲವರು ಬೇರೆಯ ಪತ್ರಿಕೆಗಳನ್ನು ತುಳಿದು, ತಮ್ಮದೇ ಆದ ಸಾಮ್ರಾಜ್ಯವನ್ನು ಸೃಷ್ಟಿಸಿಬೇಕು ಎಂಬ ದಾರಿಯಲ್ಲಿ ಹೊರಡುವುದು ಈ ಉದ್ಯಮಕ್ಕೆ ಗೌರವವನ್ನು ತರುವುದಿಲ್ಲ. ನ್ಯಾಯಯುತವಾಗಿ ಜಾಹಿರಾತನ್ನೂ ಪಡೆಯಲಿ, ಆದರೆ ಹಳದಿ ಪತ್ರಿಕೋದ್ಯಮದ ದಾರಿಯಲ್ಲಿ ಸಾಗುವುದು ಸರಿಯಾದ ಕ್ರಮವಲ್ಲ. ಮಾಧ್ಯಮ ಪಟ್ಟಿಯಲ್ಲಿ ಇಲ್ಲದವರು ತಮಗೆ ಇಷ್ಟ ಬಂದಷ್ಟು ಹಣವನ್ನು ಜಾಹಿರಾತಿಗೆ ಸಂಗ್ರಹ ಮಾಡಿ ಕೊಂಡು ತಾವು ಉಳಿಯುವ ದಾರಿಯಲ್ಲಿ ಸಾಗಲಿ, ಆದರೆ, ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ವಾರ್ತಾ ಇಲಾಖೆಯ ದರದ ಶೇ 10ರಷ್ಟು ಅಥವಾ 20ರಷ್ಟು ಜಾಹಿರಾತು ದರ ಪಡೆದು ಪ್ರಕಟಿಸುವುದೂ ಸಹ ಸರಿಯಾದುದು ಅಲ್ಲ.


ಎಂತಹ ಮನಃಸ್ಥಿತಿ ಇದೆ ಎಂದರೆ, ಶ್ರಮವಹಿಸಿ ಸುದ್ದಿ ಬರೆಯುವುದಕ್ಕೆ ಬದಲಾಗಿ, ಆ ಜಾಗದಲ್ಲಿ ನೂರೋ ಇನ್ನೂರೋ ಹಣ ಪಡೆದರೆ ಅದು ಕೂಡ ಲಾಭವೇ ಅಲ್ಲವೇ ! ಎಂದು ವಾದ ಮಾಡುವ ಮನಃಸ್ಥಿತಿಯು ಬೆಳೆಯುತ್ತಿರುವುದು ಕಂಡು ಬರುತ್ತಿದೆ.

ಸಾರ್ವಜನಿಕ ಹಿತಾಸಕ್ತಿಯ, ನ್ಯಾಯಾಲಯ ಪ್ರಕಟಣೆಗಳನ್ನು ಪ್ರಕಟಿಸುವಾಗ ಅಂತಹ ಒಂದು ಛಾಳಿ ಬೆಳೆದು ನಿಂತಿರುವುದು ದೃರದೃಷ್ಟಕರ ಸಂಗತಿ.

ಪತ್ರಿಕೆಗಳಲ್ಲಿ ಅಂತಹ ಪ್ರಕಟಣೆಗಳನ್ನು ಕೊಡಿಸುವ ವಕೀಲರಿಂದ ಮೊದಲ್ಗೊಂಡು ಎಲ್ಲರೂ ಕೂಡ ಹಂಚಿಕೊಳ್ಳುವುದು ನಡೆದಿದೆ. ಅಂತಹ ಪ್ರಕರಣಗಳಲ್ಲಿ ಮಧ್ಯವರ್ತಿಗೂ ಸಹ ಕಮೀಷನ್ ನೀಡಿ ಮುಗಿಬಿದ್ದು ಪಡೆಯುವ ಸಂಸ್ಕೃತಿ ಬೆಳೆದಿದೆ.

ಅಂತಹ ಪ್ರವೃತ್ತಿಯು ಉದ್ಯಮಕ್ಕೆ ಕಂಟಕ ತರುವುದಾಗಿದೆ. ಯಾವುದೇ ಒಂದು ವ್ಯಾಪಾರಕ್ಕೂ ಕೂಡ ಒಂದು ನೀತಿ ಇರುತ್ತದೆ, ಗುಣಮಟ್ಟದ ಲೆಕ್ಕ ಇಟ್ಟುಕೊಂಡು ಹೆಚ್ಚು ಅಥವಾ ಕಡಿಮೆ ದರ ಹೇಳಬಹುದು. ಸುಧಾರಣಾ ಮುಖವಾಗಿ ಆಲೋಚಿಸುವ ಒಂದು ಜನಪರವಾದ ಉದ್ಯಮದ ಸ್ಥಿತಿ ಹೀಗಾದರೆ ಏನು ಹೇಳುವುದು.


ಇತ್ತೀಚೆಗೆ ಬಯಲುಸೀಮೆ ಪತ್ರಿಕೆ ನಿಂತಿದೆ ಎಂಬ ಸುಳ್ಳು ಸುದ್ದಿ ಘಟನೆಯೊಂದು ನಡೆಯಿತು. ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಸಂದರ್ಭದಲ್ಲಿ, ಜಾಹಿರಾತು ನೀಡಲು ಕೇಳಿದಾಗ, ಕೆಲವು ಪತ್ರಕರ್ತರು ಬಯಲು ಸೀಮೆ ನಿಂತು ಹೋಗಿದೆ ಎಂದು ಸುದ್ದಿ ಹಬ್ಬಿಸಿದ್ದರು.

ಅವರು, ಪತ್ರಿಕೆ ಚೆನ್ನಾಗಿ ಬರುತ್ತಿತ್ತು ಯಾಕೆ ನಿಲ್ಲಿಸಿದಿರಿ ಎಂದು ಕೇಳಿದರು. ಅದನ್ನು ಯಾರು ಹೇಳಿದರು ಎಂದು ಕೇಳಿದಾಗ ಅವರು ಹೇಳಲು ಇಷ್ಟಪಡಲಿಲ್ಲ. ಪತ್ರಿಕೆಯು ನಮ್ಮ ಪಕ್ಕದ ಮನೆಗೆ ಬರುತ್ತಿತ್ತು. ಅವರು ಇತ್ತೀಚಿಗೆ ಬರುತ್ತಿಲ್ಲ ಎಂದರು, ಅವರು ಹೇಳಿದ್ದಕ್ಕೂ ಇದಕ್ಕೂ ತಾಳೆಯಾಯ್ತು.

ಪತ್ರಿಕೆ ನಿಲ್ಲಿಸಿರುವುದರ ಸುದ್ದಿಯ ಬೆನ್ನು ಹತ್ತಿದಾಗ, ಪೇಪರ್ ಹಾಕುವ ಹುಡುಗನಿಗೆ ಹಣ ಕೊಟ್ಟು, ಕೆಲವು ದಿವಸ ಪೇಪರ್ ಹಾಕುವುದನ್ನು ನಿಲ್ಲಿಸು ಎಂದು ಹೇಳಲಾಗಿದೆ. ಆತನಿಗೆ ಪತ್ರಿಕೆಯ ಮಹತ್ವ ಏನು ಗೊತ್ತು, ಶ್ರಮವಿಲ್ಲದೆ ಹಣ ಬಂತು, ಹಾಕದ ಪೇಪರ್‌ಗಳನ್ನು ಮಾರಾಟ ಮಾಡಿಕೊಂಡರೆ ಅದಕ್ಕೂ ಹಣ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಸದ್ದಿಲ್ಲದೆ ಇದ್ದು ಬಿಟ್ಟ.


ಅದರ ಜೊತೆಗೆ ಪೇಪರ್ ಹಾಕುವ ಹಣವನ್ನೂ ಸಂಗ್ರಹ ಮಾಡಿಕೊಂಡು ಹೋಗಿದ್ದಾನೆ. ಇದನ್ನು ಹುಡುಕಲು ಹೊರಟಾಗ, ಪತ್ರಿಕೋದ್ಯಮದಲ್ಲಿ ಎಂತಹ ಮಾಫಿಯಾ ಗುಂಪು ಕೆಲಸ ಮಾಡುತ್ತಿದೆ ಎಂದು ತಿಳಿಯಿತು. ಈ ರೀತಿಯ ಜನರನ್ನೇ ಕೂಡಿ ಕೊಂಡು ಪತ್ರಿಕೋದ್ಯಮ ನಡೆಸಬೇಕಾದ ಸ್ಥಿತಿಯು ಮುಂದೆ ಉಂಟಾಗಬಹುದು.

ಅದಕ್ಕೆ ಪೂರಕವಾದ ಉದಾಹರಣೆಯಾಗಿ

ಇಂದು ಅದಕ್ಕೆ ಪೂರಕವಾದ ಮಾಹಿತಿ ಸಿಕ್ಕಿತು. ಚನ್ನಪಟ್ಟಣದ ಒಂದು ದಿನಸಿ ಅಂಗಡಿಗೆ, ನವೆಂಬರ್ ತಿಂಗಳಿಂದ ಡಿಸೆಂಬರ್ 21ನೇ ತಾರೀಖಿನವರೆಗೆ ಹಂಚಿಕೆಗೆ ಕೊಟ್ಟ ಬಹುಪಾಲು ಎಲ್ಲಾ ಪತ್ರಿಕೆಗಳು ದಿನವಹಿ ಅಂಗಡಿಯವರು ಕೊಂಡು ಕೊಂಡಿದ್ದರೆ, ಅದನ್ನು ಚನ್ನಪಟ್ಟಣದ ಉರ್ದು ಪತ್ರಿಕೆಯ ಸಂಪಾದಕರಾದ  ಕರೀಂ ಅವರು ತಮ್ಮ ಪತ್ರಿಕೆಯನ್ನು ಕೊಡಲು ಹೋದಾಗ ಸಂಶಯ ಬಂದು ಗಮನಿಸಿದ್ದಾರೆ. ಅವರಿಗೆ ಈ ರೀತಿಯ ದಂಧೆಯನ್ನು ಪತ್ರಿಕಾ ವಿತರಕರು ಮಾಡುತ್ತಿರುವ ಬಗ್ಗೆ ಹೇಳಿಕೊಂಡಿದ್ದೆ, ಅದು ಜ್ಞಾಪಕಕ್ಕೆ ಬಂದು ನನ್ನನ್ನೂ ಅಲ್ಲಿಗೆ ಕರೆದರು.


ನಾವು ಅಂಗಡಿಗೆ ಹೋಗಿ ನೋಡಿದಾಗ, ನಾವು ಕೊಟ್ಟಿದ್ದ ಪತ್ರಿಕೆಗಳು ದಿನವಹಿ ಯತಾವತ್ತಾಗಿ ಕಟ್ಟಿದ ಬಂಡಲ್ ರೂಪದಲ್ಲಿ ಕಂಡು ಬಂತು.

ಈ ಪತ್ರಿಕೆಯನ್ನು ಹಿಂದೆ ಬಡಾವಣೆಯ ಭಾಗಕ್ಕೆ ಹೇಮಂತ್ ಎಂಬ ಹುಡುಗ ಹಂಚುತ್ತಿದ್ದ, ಆತನೂ ಇದೇ ಒಂದು ಕೆಲಸ ಮಾಡುತ್ತಿದ್ದ ಎಂದು ಈಗ ಅನ್ನಿಸುತ್ತಿದೆ. ಯಾರಾದರೂ ಪತ್ರಿಕೆ ಬಂದಿಲ್ಲ ಎಂದು ದೂರು ನೀಡಿದಾಗ, ಒಂದಷ್ಟು ದಿವಸ ಪೇಪರ್ ಹಾಕಿದ ರೀತಿಯಲ್ಲಿ ಮಾಡಿ, ಮತ್ತೆ ಅದೇ ರೀತಿಯ ಕೃತ್ಯ ಮಾಡಿರಬಹುದು. ಈಗ ವಿತರಣೆ ಮಾಡುತ್ತಿದ್ದ ಸೂರ್ಯ ಎಂಬ ಹುಡುಗನ ಬಗ್ಗೆ ಬಹಳಷ್ಟು ದೂರು ಇದ್ದವು. ನಾವು ಹೊಸದಾಗಿ ಆದ ಚಂದಾದಾರರಿಗೆ ಹಾಕಲು ಹೇಳಿದಾಗಲೂ ಆತ ಹಾಕುತ್ತಿರಲಿಲ್ಲ.

ಆತನನ್ನು ಬದಲಿಸಬೇಕು ಎಂದು ನಿರ್ಧರಿಸಿ, ನೀನು ಹಾಕುತ್ತಿರುವ ಚಂದಾದಾರರರ ವಿಳಾಸ ಬರೆದುಕೊಡು ಎಂದು ಕೇಳಿದಾಗ ಜೀಲಿ ಮಾಡಿದ, ಆ ತಿಂಗಳ ಹಣ ಕೊಡಬೇಕು ಎಂದರೆ, ನಾನೇ ನಿನ್ನ ಜೊತೆಯಲ್ಲಿ ಪೇಪರ್ ಹಾಕುವ ಜಾಗಕ್ಕೆ ಬರುತ್ತೇನೆ ಎಂದಾಗ ಹಣವನ್ನೂ ಪಡೆಯದೆ ದೂರ ಸರಿದ. ಈಗ ಪರ್ಯಾಯ ವ್ಯವಸ್ಥೆ ಯನ್ನು ಮಾಡಲಾಗಿದೆ. ಇನ್ನೂ ಬಹಳಷ್ಟು ವಿಳಾಸ ಸಿಗಬೇಕಾಗಿದೆ.  ಸುಧಾರಣೆಯನ್ನು ಬಯಸುವ ಪತ್ರಿಕಾ ಕ್ಷೇತ್ರದಲ್ಲಿ ಇದನ್ನು ಮಾಫಿಯಾ ಅಲ್ಲದೆ ಬೇರೇನು ಎಂದು ಹೇಳಲು ಸಾಧ್ಯ?


ಸು ತ ರಾಮೇಗೌಡ.

ಬಯಲುಸೀಮೆ ಸಂಜೆ ದಿನಪತ್ರಿಕೆ ಸಂಪಾದಕರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑