Tel: 7676775624 | Mail: info@yellowandred.in

Language: EN KAN

    Follow us :


ರೈತನಿಗೆ ರೀಲರ್ಸ್ ನಿಂದ ದೌರ್ಜನ್ಯ. ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನ ಲಿ ಕೃಷ್ಣ ಒತ್ತಾಯ

Posted date: 14 Jan, 2022

Powered by:     Yellow and Red

ರೈತನಿಗೆ ರೀಲರ್ಸ್ ನಿಂದ ದೌರ್ಜನ್ಯ. ಕಾನೂನು ಕ್ರಮ ಕೈಗೊಳ್ಳುವಂತೆ ಮದ್ದೂರು ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ನ ಲಿ ಕೃಷ್ಣ ಒತ್ತಾಯ

ಮದ್ದೂರು:  ರಾಮನಗರ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ರೀಲರ್ ರಿಂದ ನಡೆದ ದೌರ್ಜನ್ಯ ಖಂಡಿಸಿ ರೀಲರ್ ನನ್ನು ತಕ್ಷಣ ಬಂಧಿಸಬೇಕು ಹಾಗೂ ಲೈಸನ್ಸ್ ರದ್ದತಿಗೆ ಮಾಡಬೇಕು ಎಂದು ಮದ್ದೂರು ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ನ.ಲಿ.ಕೃಷ್ಣ ಒತ್ತಾಯಿಸಿದರು. ಅವರು ಇಂದು ನಗರದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದರು.


ರಾಮನಗರದ ರೇಷ್ಮೆ ಗೂಡಿನ ಮಾರುಕಟ್ಟೆಯಲ್ಲಿ ದಿ 12-1-2022 ರಂದು ಹಾವೇರಿ ತಾಲ್ಲೂಕಿನ ಗುತ್ತಲು ಗ್ರಾಮದ ವಿರೂಪಾಕ್ಷಪ್ಪ ಬಿನ್ ಮಲ್ಲಪ್ಪ ಅವರ ಮೇಲೆ ರೀಲರ್ ಮುನೀರ್ ಆಹ್ಮದ್ ಬಿನ್ ಗಪಾರ್ ಸಾಬ್ ಇವರು ದೌರ್ಜನ್ಯ ಎಸಗಿದ ಕ್ರಮ ಖಂಡನೀಯ ಎಂದು ಪ್ರಗತಿ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ ಎಂದು  ಪತ್ರಿಕಾಗೋಷ್ಠಿ ಯಲ್ಲಿ ತಿಳಿಸಿದರು. ರೀಲರ್ ಮುನೀರ್ ಅವರು ರೇಷ್ಮೆ ಗೂಡು ಹರಾಜಿನ ನಂತರ ಅಕ್ರಮವಾಗಿ ಗುಂಪು ಕಟ್ಟಿಕೊಂಡು ನಿಯಮ ಬಾಹಿರವಾಗಿ ಗೂಡಿನ ವಿಂಗಡಣೆ 

ಬೇರ್ಪಡಿಸುವಿಕೆ, ಅಕ್ರಮವಾಗಿ ಗೂಡನ್ನು ಸಾಗಿಸುವ ಪ್ರಯತ್ನ ಮತ್ತು ಗೂಡು ಕದಿಯುವ ಯತ್ನ ಮಾಡಿರುವುದು ಕಾನುನು ಬಾಹಿರ ಕ್ರಮವಾಗಿರುತ್ತದೆ ಎಂದ ಅವರು

ರೈತ ವಿರೂಪಕ್ಷಪ್ಪ ಇಂತಹ ಕ್ರಮ ಸರಿಯಲ್ಲಾ ಎಂದು ತಿಳಿಸಿ ಗೂಡಿನ ಲಾಟು ಅಕ್ರಮವಾಗಿ ಪಲ್ಲಟ ಮಾಡುವ ಕ್ರಮ ಸರಿಯಲ್ಲಾ ಎಂದಿದ್ದಕ್ಕೆ ಅವ್ಯಾಚ್ಯ ಶಬ್ದಗಳ ಮೂಲಕ ನಿಂದಿಸಿ, ಅತನ ಸಹಚರರೊಟ್ಟಿಗೆ ಸೇರಿ ಹಲ್ಲೆಗೂ ಯತ್ನಿಸಿದ್ದಾರೆ.


ರೀಲರ್ ನ ಇಂತಹ ನಿಯಮಬಾಹಿರ ಕ್ರಮ ಖಂಡನೀಯವಾದದ್ದು 

ರೈತ ವಿರುಪಾಕ್ಷಪ್ಪನ ಮೇಲೆ ರೀಲರ್ ಮುನೀರ್ ಅಹ್ಮದ್ ಅಕ್ರಮಮವಾಗಿ ಗುಂಪು ಕಟ್ಟಿಕ್ಕೊಂಡು ದೌರ್ಜ್ಯನ್ಯ ಎಸಗುತ್ತಿದ್ದರು ಯಾವೊಬ್ಬ ಅಧಿಕಾರಿಯು ರೈತನ ನೆರವಿಗೆ ಧಾವಿಸಿ ರಕ್ಷಣೆ ನೀಡದಿದ್ದದ್ದು  ಅಶ್ಚರ್ಯ ಮತ್ತು ಅಘಾತಕಾರಿಯಾದದ್ದು ಎಂದು ಆತಂಕ ವ್ಯಕ್ತಪಡಿಸಿದರು.


ಇಂತಹ ಘಟನೆಗಳು ಮಾರುಕಟ್ಟೆಯಲ್ಲಿ ಪ್ರತಿದಿನ ನಡೆಯುತ್ತಿದ್ದು, ಕೆಲವು ಹೊರಗೆ ಬಾರದಂತೆ ಮುಚ್ಚಿ ಹಾಕುತ್ತಿದ್ದಾರೆ. ಅಧಿಕಾರಿಗಳು ಮಾರುಕಟ್ಟೆಯಲ್ಲಿ ನಡೆಯುವ ಗೂಡು ಕದಿಯುವ ಮಾಫಿಯಾ ಮತ್ತು ದೌರ್ಜ್ಯನ್ಯ ಎಸಗುವ ರೀಲರ್ ಗಳೊಂದಿಗೆ ಮಾರುಕಟ್ಟೆ ಅಧಿಕಾರಿಗಳು ಶಾಮಿಲಾಗಿರುವ ಮತ್ತು ಇಂತಹ ಕೃತ್ಯ ಪೊಷಣೆಮಾಡುತ್ತಿರುವ ಕುರಿತು ಪುಷ್ಠಿ ನೀಡುತ್ತದೆ ಎಂದು ಆರೋಪಿಸಿದರು.


12-1-2022 ರಂದು ನಡೆದ ಘಟನೆ ಬಗ್ಗೆ  ಯಾವುದೆ ಪೊಲೀಸ್ ದೂರು ನೀಡದ ಮಾರುಕಟ್ಟೆ ಅಧಿಕಾರಿ 

ರೀಲರ್ ದೌರ್ಜನ್ಯ ಕುರಿತು  ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ವೈರಲ್ ಆದ ನಂತರ ಮರುದಿನ ಸಾಂಕೇತಿಕವಾಗಿ ದೂರು ನೀಡಿದ್ದಾರೆ. ಇದು ಅಧಿಕಾರಿಗಳ ನಡೆಯನ್ನು ಪ್ರಶ್ನಿಸುವಂತಿದೆ ಎಂದು ಕಿಡಿಕಾರಿದರು. ಈ ದೂರನ್ನು ಪಡೆದ ಪೊಲೀಸರು ಎಪ್ ಐ ಆರ್ ದಾಖಲಿಸದೆ ಎನ್ ಸಿ ಆರ್ ಮಾಡಿರುವ ಕ್ರಮ ಸಂಪೂರ್ಣವಾಗಿ ವ್ಯವಸ್ಥಿತ ಸಂಚು ಮತ್ತು ಮಾರುಕಟ್ಟೆ ಅಧಿಕಾರಿ ತನ್ನಹುದ್ದೆಯ ರಕ್ಷಣೆಗಾಗಿ ಮಾಡಿದ ನಾಟಕ ಎಂಬುದು ಸ್ಪಷ್ಠ.


ಆ ಕಾರಣ ಕೂಡಲೆ ರೀಲರ್ ಮುನೀರ್ ಅಹ್ಮದ್ ನ ಬಂಧನ ಆಗಬೇಕು ರೀಲರ್ ಲೈಸನ್ಸ್ - 2599 ಶಾಶ್ವತವಾಗಿ ರದ್ದುಗೊಳಿಸಬೇಕು ಈತನ ಹೆಸರು ಕಪ್ಪು ಪಟ್ಟಿಯಲ್ಲಿ ಸೇರಿಸಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರ ಸಂಘದ ಅಧ್ಯಕ್ಷ ಜಿ ಎನ್ ಸತ್ಯ, ಕಕಜವೇ ಜಿಲ್ಲಾಧ್ಯಕ್ಷ

ಉಮಾ ಶಂಕರ್ ಉಪಸ್ಥಿತದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑