Tel: 7676775624 | Mail: info@yellowandred.in

Language: EN KAN

    Follow us :


265 ಅತಿಥಿ ಉಪನ್ಯಾಸಕರ ನೇಮಕಕ್ಕೆ ಅರ್ಜಿ ಆಹ್ವಾನ

Posted date: 30 Mar, 2018

Powered by:     Yellow and Red

ಶಿಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಖಾಲಿ ಇರುವ 265 ಬೋಧಕ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳುತ್ತಿದ್ದು ಅರ್ಹ ಹಾಗೂ ಆಸಕ್ತ ವಿದ್ಯಾರ್ಥಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ_ಸಲ್ಲಿಸಲು_ಕೊನೆಯ_ದಿನಾಂಕ: ಏಪ್ರಿಲ್ 25, 2018 
ಆಯ್ಕೆ_ವಿಧಾನ:
ಸಂದರ್ಶನದ ಮೂಲಕ.
ಅರ್ಜಿ_ಸಲ್ಲಿಸುವ_ವಿಧಾನ:
ಅಂಚೆಯ ಮೂಲಕ.

ಲಭ್ಯವಿರುವ_ಸ್ಥಳಗಳು:
ಸ್ನಾತಕೋತ್ತರ ಕೇಂದ್ರ ಶಂಕರಘಟ್ಟ ಶಿವಮೊಗ್ಗ, ಕಡೂರು/ಚಿಕ್ಕಮಗಳೂರು ಹಾಗೂ ವಿವಿಯ ಅಧೀನಕ್ಕೊಳಪಡುವ ಘಟಕಗಳು.

ಅರ್ಜಿ ಕರೆಯಲಾಗಿರುವ ವಿಷಯಗಳು:
ಇಂಗ್ಲಿಷ್, ಹಿಂದಿ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರ, ಸಮಾಜಕಾರ್ಯ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ, ದೈಹಿಕ ಶಿಕ್ಷಣ, ಯೋಗ ಪಿಜಿ ಡಿಪ್ಲೊಮಾ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಜೀವ ರಸಾಯನಶಾಸ್ತ್ರ, ಔದ್ಯೋಗಿಕ ರಸಾಯನಶಾಸ್ತ್ರ, ಭೌತಶಾಸ್ತ್ರ, ಎಲೆಕ್ಟ್ರಾನಿಕ್ಸ್, ಅನ್ವಯಿಕ ಸಸ್ಯಶಾಸ್ತ್ರ, ಅನ್ವಯಿಕ ಭೂ ವಿಜ್ಞಾನ, ಅನ್ವಯಿಕ ಪ್ರಾಣಿಶಾಸ್ತ್ರ, ವನ್ಯಜೀವಿ ವಿಭಾಗ, ಸೂಕ್ಷ್ಮಾಣು ಜೀವಶಾಸ್ತ್ರ,ಜೈವಿಕ ತಂತ್ರಜ್ಞಾನ, ಪರಿಸರ ವಿಜ್ಞಾನ, ಎಂಸಿಎ/ಕಂಪ್ಯೂಟರ್ ಸೈನ್ಸ್, ಗಣಿತಶಾಸ್ತ್ರ, ಎಂಬಿಎ, ವಾಣಿಜ್ಯಶಾಸ್ತ್ರ, ಎಂಟಿಎ, ಕನ್ನಡ , ಶಿಕ್ಷಣ, ಉರ್ದು, ಸಂಸ್ಕೃತ, ಎಂಕಾಂ, ಪರಿಸರ ವಿಜ್ಞಾನ, ಬಿಬಿಎ ಮತ್ತು ಬಿಸಿಎ ವಿಷಯಗಳಿಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗುತ್ತದೆ. Kiran Raghupathi, VP, KSPSTA

ಅರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಹಾಗೂ ಯುಜಿಸಿ ನಿಯಮಾನುಸಾರ ಶೇಕಡಾ 55 ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು. 

ಅರ್ಹತಾ ಪರೀಕ್ಷೆಗಳಾದ ನೆಟ್/ ಕೆ-ಸೆಟ್ /ಎಸ್ಎಲ್ಇಟಿ ಯಲ್ಲಿ ಅರ್ಹತೆ ಪಡೆದಿರಬೇಕು ಅಥವಾ ಪಿಎಚ್.ಡಿ ಪದವಿಯನ್ನು ಪಡೆದಿರಬೇಕು.

ಅರ್ಜಿ_ಶುಲ್ಕ:
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗಳಿಗೆ 100 ರೂ.,
ಉಳಿದೆಲ್ಲಾ ಅಭ್ಯರ್ಥಿಗಳಿಗೆ 200 ರೂ. ಶುಲ್ಕ ನಿಗದಿಪಡಿಸಲಾಗಿದೆ. 

ಶುಲ್ಕವನ್ನು 'ಹಣಕಾಸು ಅಧಿಕಾರಿಗಳು, ಕುವೆಂಪು ವಿವಿ, ಶಂಕರಘಟ್ಟ' ಹೆಸರಿಗೆ ಎಸ್ಬಿಐ ಬ್ಯಾಂಕ್ನಲ್ಲಿ ಡಿಡಿ ಪಡೆದು ಪಾವತಿಸುವಂತೆ ಸೂಚಿಸಲಾಗಿದೆ.

ಅರ್ಜಿ_ಸಲ್ಲಿಸುವ_ವಿಧಾನ:
ಅರ್ಜಿ ನಮೂನೆಯನ್ನು ವೆಬ್‌ಸೈಟ್ ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿರುವ ಅರ್ಜಿಯನ್ನು ಅಂಚೆ ಮೂಲಕ 'ಕುಲಸಚಿವರು, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ-577451' ವಿಳಾಸಕ್ಕೆ ಕಳುಹಿಸಬೇಕು. 

ಲಕೋಟೆಯ ಮೇಲೆ ಆಯಾ ವಿಷಯದ ಹೆಸರು ಬರೆದು 'ಅತಿಥಿ ಉಪನ್ಯಾಸಕರ ಸೇವೆಗೆ' ಎಂದು ಸ್ಪಷ್ಟವಾಗಿ ಬರೆದಿರಬೇಕು.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑