ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
2021ರಲ್ಲಿ ಬಿಡುಗಡೆಯಾದ ಪುಸ್ತಕಗಳ ಪೈಕಿ ರಾಜ್ಯಮಟ್ಟದ ಸಾವಿರದ ಆರು ನೂರಕ್ಕೂ ಹೆಚ್ಚು ಪುಸ್ತಕಗಳ ಪೈಕಿ ಸಂಪ್ರೀತಿ ರಾಮಾಯಣ ಪುಸ್ತಕವು ಸ್ಥಾನ ಪಡೆದಿದೆ.
ಸಂಪ್ರೀತಿ ರಾಮಾಯಣ ಪುಸ್ತಕವನ್ನು ಮಾಗಡಿಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಉಪ ಮುಖ್ಯಮಂತ್ರಿಗಳಾಗಿದ್ದ ಡಾಕ್ಟರ್ ಸಿ.ಎನ್ ಅಶ್ವಥ್ ನಾರಾಯಣರವರು ಮೇ ತಿಂಗಳಲ್ಲಿ ಲೋಕಾರ್ಪಣೆಗೊಳಿಸಿದರು.
ಪುಸ್ತಕವು ಸಮಿತಿಗೆ ಆಯ್ಕೆಯಾದ ಸಂತಸವನ್ನು ಹಂಚಿಕೊಂಡು ಮಾತನಾಡಿದ
ಲೇಖಕ ಡಿ.ಸಿರಾಮಚಂದ್ರ ರವರು ರಾಮಾಯಣವನ್ನು ಪ್ರೀತಿಯಿಂದ ಓದಬೇಕೆನ್ನುವ ದೃಷ್ಟಿಯಲ್ಲಿ ರಾಮಾಯಣದ ಸ್ವಾರಸ್ಯ ಸನ್ನಿವೇಶಗಳನ್ನು ಒಳಗೊಂಡ ಪುಸ್ತಕ ರಾಜ್ಯಮಟ್ಟದ ಪುಸ್ತಕ ಸಮಿತಿಗೆ ಆಯ್ಕೆಯಾಗಿರುವುದು ಸಂತಸದ ವಿಚಾರ, ಭಾರತದ ಪವಿತ್ರಗ್ರಂಥಗಳಲ್ಲಿ ಒಂದಾಗಿರುವ ರಾಮಾಯಣವನ್ನು ಇಂದಿನ ಯುವ ಪೀಳಿಗೆ ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು