Tel: 7676775624 | Mail: info@yellowandred.in

Language: EN KAN

    Follow us :


ಪ್ರತಿ ಹಳ್ಳಿಗಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ನಿ ನ್ಯಾ ನಾಗಮೋಹನದಾಸ್

Posted date: 20 Apr, 2022

Powered by:     Yellow and Red

ಪ್ರತಿ ಹಳ್ಳಿಗಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ನಿ ನ್ಯಾ ನಾಗಮೋಹನದಾಸ್

ಚನ್ನಪಟ್ಟಣ: ಏ:20/22.ಬುಧವಾರ. ಜಾನಪದ ಎಂಬುದು ಒಂದು ದೇಶಕ್ಕೆ, ರಾಜ್ಯಕ್ಕೆ, ಜಿಲ್ಲೆಗೆ, ತಾಲ್ಲೂಕಿಗೆ ಸಂಬಂಧಿಸಿದ್ದಲ್ಲಾ. ಪ್ರತಿ ಹಳ್ಳಿಹಳ್ಳಿಗೂ ಒಂದೊಂದು ಜಾನಪದ ಇತಿಹಾಸವಿದೆ. ಆ ಜನಪದವೂ ರೈತನರಿಂದಲೇ ಹೆಚ್ಚು ಪ್ರಚಲಿತವಾಗಿದೆ. ಮುಂಜಾನೆ ಎದ್ದು ರಾಗಿ ಬೀಸುವಾಗ ಒಂದು ಹಾಡು. ಜಾನುವಾರು ಹೊಡೆದುಕೊಂಡು ಹೋಗುವಾಗ ಪದ, ನಾಟಿಮಾಡುವಾಗ, ಕೊಯ್ಲು ಮಾಡುವಾಗ, ಮಗುವಿಗೆ ಅನ್ನ ತಿನ್ನಿಸುವಾಗ ಮಗು ಮಲಗಿಸಲು ಜೋಗುಳ ಹಾಡಲು ಸಹ ಜನಪದ ಇದ್ದೇ ಇರುತ್ತಿತ್ತು. ಹಾಗಾಗಿ ಜಾನಪದ ಎನ್ನುವುದು ಎಲ್ಲಾ ದೇಶಗಳಲ್ಲೂ, ಗ್ರಾಮಗಳಲ್ಲೂ ಹಿಂದೆಯೂ ಇತ್ತು ಈಗಲೂ ಇದೆ ಮುಂದೆಯೂ ಇರುತ್ತದೆ. ಆದರೆ ಸ್ವಲ್ಪ ಮಾರ್ಪಾಡಾಗಿದೆ ಎಂದರು.

ಅವರು ಇಂದು‌ ನಗರದ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದಲ್ಲಿ ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರ ದವರು ಜಾನಪದ ವಿದ್ವಾಂಸ ಡಾ ಚಕ್ಕೆರೆ ಶಿವಶಂಕರ್ ರವರಿಗೆ ಕೊಡಮಾಡಿದ ಜಾನಪದ ಚೂಡಾಮಣಿ ಪ್ರಶಸ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


*ದೇಶದ ಏಳ್ಗೆಗೆ ರಾಜಕಾರಣಿಗಳೇ ಮಾರಕ*

ಜನರ ಸಂಕಷ್ಟಗಳನ್ನು ಅರಿತು, ಅಧಿವೇಶನಗಳಲ್ಲಿ ಪ್ರಶ್ನಿಸಿ, ಜನಸಾಮಾನ್ಯರ ಬದುಕನ್ನು ಕಟ್ಟಿಕೊಡಲು, ದೇಶದ ಆರ್ಥಿಕತೆಯನ್ನು ಬಲಪಡಿಸಲು, ಶೈಕ್ಷಣಿಕವಾಗಿ ಮೇಲ್ಪಂಕ್ತಿಗೆ ತೆಗೆದುಕೊಂಡು ಹೋಗಲು ನೆರವಾಗಬೇಕಾದ ಜನಪ್ರತಿನಿಧಿಗಳು ಯಾವುದೇ ಚರ್ಚೆ ನಡೆಸದೆ ಬಿಲ್ ಗಳನ್ನು ಪಾಸ್ ಮಾಡುತ್ತಿದ್ದಾರೆ. ಉನ್ನತ ಪದವಿ ಹೊಂದಿದವರಿಂದಲೂ ದೇಶ ಅಧೋಗತಿಗಿಳಿಯುತ್ತಿದೆ. ದೇಶದಲ್ಲಿ ಯಾವ ಬಡವನೂ ದೊಡ್ಡ ಅಪರಾಧಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲಾ. ಅದು ವೈಟ್ ಕಾಲರ್ ನವರು ಮಾತ್ರ ದೇಶ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಚಾಟಿ ಬೀಸಿದರು.


*ದೇಜಗೌ ರವರಂತೆ ಶಿವಶಂಕರ್ ರವರು ಪ್ರಖ್ಯಾತರು ಅಪ್ಪಗೆರೆ ತಿಮ್ಮರಾಜು*

ಕರ್ನಾಟಕದಲ್ಲಿ ಪ್ರಪ್ರಥಮವಾಗಿ ಜಾನಪದದಲ್ಲಿ ಪಿಹೆಚ್‌ಡಿ ಮಾಡಿದವರು ಚಕ್ಕೆರೆ ಶಿವಶಂಕರ್. ನಶಿಸಿ ಹೋಗುತ್ತಿರುವ ಅನೇಕ ಕಲೆಗಳನ್ನು ತಮ್ಮ ಬರವಣಿಗೆಯಲ್ಲಿ ಹಿಡಿದಿಟ್ಟಂತವರು. ತಾಲ್ಲೂಕಿನ ಮೇರು ವ್ಯಕ್ತಿಗಳಾದ ವಿ ವೆಂಕಟಪ್ಪ, ಬಿ ಜೆ ಲಿಂಗೇಗೌಡ, ದೇ ಜವರೇಗೌಡ ರಂತಹವರ ಸಾಲಿನಲ್ಲಿ ಅವರು ನಿಲ್ಲುತ್ತಾರೆ. ಯಾವ ದೇಶದಲ್ಲಿ ಜಾನಪದ ಮರಣ ಹೊಂದುತ್ತದೋ ಆ ದೇಶ ಮಾರಾಟವಾಗುವುದರಲ್ಲಿ ಅನುಮಾನವೇ ಇಲ್ಲಾ. ಅದಕ್ಕೆ ಜಾನಪದ ಮೂಲ ಎನಿಸಿಕೊಂಡ ಗ್ರೀಕ್ ದೇಶವೇ ಉದಾಹರಣೆಗಯಾಗಿದೆ. ಇಂತಹ ಜಾನಪದವನ್ನು ಶಿವಶಂಕರ್ ರವರು ಉಳಿಸುವಲ್ಲಿ ಪ್ರಮುಖರಾಗಿದ್ದಾರೆ. ಇಂತಹ ಜಾನಪದ ಮೇಧಾವಿಗೆ ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರ ಜಾನಪದ ಚೂಡಾಮಣಿ ಪ್ರಶಸ್ತಿ ನೀಡಿರುವುದು, ಅದರಲ್ಲೂ ಚನ್ನಪಟ್ಟಣ ನಗರದಲ್ಲೇ ನೀಡಿದ್ದು, ಪ್ರಶಸ್ತಿಯನ್ನು ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್ ರವರು ನೀಡಿದ್ದು ಅವರ ಸಾಧನೆಗೆ ಸಂದದ್ದಾಗಿದೆ ಎಂದರು.


*ಜಾನಪದ ಲೋಕ ಪ್ರಸಿದ್ದವಾಗಲು ಶಿವಶಂಕರ್ ಕಾರಣ: ತಹಶಿಲ್ದಾರ್ ನಾಗೇಶ್*

ಕರ್ನಾಟಕ ಜಾನಪದ ಪರಿಷತ್ತಿನ ಜಾನಪದ ಲೋಕ ಇಂದು ಪ್ರವಾಸಿ ತಾಣವಾಗಲು ಕಾರಣವಾದವರಲ್ಲಿ ಚಕ್ಕೆರೆ ಶಿವಶಂಕರ್ ಪ್ರಮುಖರು. ಜಿ ನಾರಾಯಣ ರವರ ಗರಡಿಯಲ್ಲಿ ಜಾನಪದಲೋಕ ಕಟ್ಟಲು ಶ್ರಮಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ, ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳು ಇವರ ಮುಡಿಗೇರಲಿ ಎಂದು ಹಾರೈಸಿದರು.


*ವೈದಿಕರು ಕಸಿದುಕೊಳ್ಳಲಾಗದ ಶೂದ್ರರು ಕಟ್ಟಿದ ಜಾನಪದ ಸಿ ಕೆ ರಾಮೇಗೌಡ*

ಜನರಿಂದ ಜನರ ಬಾಯಿಗೆ ಹರಡಿದ ಪದವೇ ಜಾನಪದ. ಉಣ್ಣುವುದನ್ನು, ಉಡುವುದನ್ನು, ವಿದ್ಯೆಯನ್ನು ಅಂದು ಶೂದ್ರರಿಂದ ಕಸಿದುಕೊಂಡ ವೈದಿಕರು ಜಾನಪದವನ್ನು ಕಿತ್ತುಕೊಳ್ಳಲಾಗಲಿಲ್ಲ. ಹಾಗಾಗಿ ಜಾನಪದ ಉಳಿಯಲು ಸಾಧ್ಯವಾಗಿದೆ. ಇದಕ್ಕೆ ಕಣ್ಣೆದುರೇ ಇರುವ ಶಿವಶಂಕರ್ ಉದಾಹರಣೆಯಾಗಿ ನಿಂತಿದ್ದಾರೆ ಎಂದು ಶ್ಲಾಘಿಸಿದರು.


*ನನ್ನೆಲ್ಲಾ ಪ್ರಶಸ್ತಿ ಪುರಸ್ಕಾರಗಳು ನಾಗೇಗೌಡರಿಗೆ ಸೇರಬೇಕು ಚಕ್ಕೆರೆ ಶಿವಶಂಕರ್*

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಶಂಕರ್ ಅವರು ನನಗೆ ಎಷ್ಟೇ ಪ್ರಶಸ್ತಿಗಳು ಬಂದರೂ ಅವು ನಾಗೇಗೌಡರಿಗೆ ಸಮರ್ಪಿತವಾಗಬೇಕು ಎಂದರು.

ಎನ್ ಜಿ ಇ ಎಫ್ ನಲ್ಲಿ ಕೆಲಸ ಮಾಡುತ್ತಿದ್ದಾಗ ಹಿರಿಯ ಐಎಎಸ್ ಅಧಿಕಾರಿ, ಜಾನಪದ ವಿದ್ವಾಂಸ ಹೆಚ್ ಎಲ್ ನಾಗೇಗೌಡ ರವರ ಆಹ್ವಾನದ ಮೇರೆಗೆ ಜಾನಪದ ಲೋಕಕ್ಕೆ ಬಂದು ಜಿ ನಾರಾಯಣ ರವರ ನೇತೃತ್ವದಲ್ಲಿ ಜಾನಪದ ಲೋಕವನ್ನು ಕಟ್ಟಿಬೆಳೆಸಿದ್ದೇನೆ. ದೇಜಗೌ ರವರು ವಿಶ್ವವಿದ್ಯಾಲಯದಲ್ಲಿ ಜಾನಪದ ಪದವಿಗೆ ಅವಕಾಶ ನೀಡಿದರು. ಹಲವು ಪ್ರಶಸ್ತಿಗಳು ಈಗಾಗಲೇ ನನಗೆ ಸಂದಿವೆ. ನನ್ನೂರಿನಲ್ಲಿ ಸಂದ ಈ ಪ್ರಶಸ್ತಿ ನನಗೆ ಅತ್ಯಂತ ಅಪ್ಯಾಯಮಾನವಾಗಿದೆ. ಜಾನಪದದ ಬಗ್ಗೆ ನಿರಂತರ ಅಧ್ಯಯನವಾಗಬೇಕು ಆಗಲೇ ಜಾನಪದ ಉಳಿಯಲು ಸಾಧ್ಯ. ಶಾಲಾಕಾಲೇಜುಗಳಲ್ಲಿ ಜಾನಪದ ಕೋರ್ಸ್ ಗಳನ್ನು ಆರಂಭಿಸಬೇಕು ಎಂದು ಅಭಿಪ್ರಾಯ ಪಟ್ಟರು.


ವೇದಿಕೆಯಲ್ಲಿ ಸಾಹಿತಿ ಮಲ್ಲಿಕಾರ್ಜುನಸ್ವಾಮಿ, ತಹಶಿಲ್ದಾರ್ ನಾಗೇಶ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ ಕೆ ರಾಮೇಗೌಡ, ಎಂ ಕೆ ರಂಗಪ್ಪ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಭಿಲಾಷ್ ತಿಟ್ಟಮಾರನಹಳ್ಳಿ, ರಾಜಶೇಖರ, ಬೊಮ್ಮೇಗೌಡ, ಸಿಂಲಿಂ ನಾಗರಾಜು, ಸು ತ ರಾಮೇಗೌಡ, ಚಿಕ್ಕಕೊಮಾರಿಗೌಡ, ಬಿ ಟಿ ಚಿಕ್ಕಪುಟ್ಟೇಗೌಡ, ಮದ್ದೂರಿನ ಡಿ ಪಿ ಸ್ವಾಮಿ, ಕೀಲಾರ ಕೃಷ್ಣೇಗೌಡ ಮತ್ತು ಜಾನಪದ ಕಲಾವಿದರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑