Tel: 7676775624 | Mail: info@yellowandred.in

Language: EN KAN

    Follow us :


ಸ್ಮಶಾನ ದೂರದಲ್ಲಿದೆ ಎಂದು ತಹಶಿಲ್ದಾರ್ ಕಚೇರಿ‌ ಮುಂದೆ ಶವವಿಟ್ಟು ಪ್ರತಿಭಟನೆ

Posted date: 25 Apr, 2022

Powered by:     Yellow and Red

ಸ್ಮಶಾನ ದೂರದಲ್ಲಿದೆ ಎಂದು ತಹಶಿಲ್ದಾರ್ ಕಚೇರಿ‌ ಮುಂದೆ ಶವವಿಟ್ಟು ಪ್ರತಿಭಟನೆ

ಚನ್ನಪಟ್ಟಣ:ಏ.25:  ತಾಲ್ಲೂಕಿನ ಕನ್ನಮಂಗಲ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸ್ಮಶಾನ ಜಾಗ ಇದ್ದರೂ ಇಲ್ಲದಂತಾಗಿದೆ. ಶವ ಸಂಸ್ಕಾರ ಮಾಡಲು ನಿಗದಿತ ಜಾಗ ಇರದ ಕಾರಣಕ್ಕೆ ಗ್ರಾಮಸ್ಥರೆಲ್ಲರೂ ಒಗ್ಗೂಡಿ ಮೃತ ವ್ಯಕ್ತಿಯ ಶವವನ್ನು ಟ್ರ‍್ಯಾಕ್ಟರ್‌ನಲ್ಲಿ ಹಾಕಿಕೊಂಡು, ತಾಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲು ಹೊರಟಿದ್ದರು, ಗ್ರಾಮಸ್ಥರನ್ನು ಪಾರೆದೊಡ್ಡಿ ಗ್ರಾಮದ ಬಳಿ ಎಂಕೆ ದೊಡ್ಡಿ ಪೊಲೀಸರು ತಡೆ ಹಿಡಿದರು.


ಎಂ.ಕೆ ದೊಡ್ಡಿ ಹಾಗೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು, ಗ್ರಾಮಸ್ಥರ ಜೊತೆ ರಾಜಿ ಸಂದಾನಕ್ಕೆ ಮುಂದಾಗಿದ್ದು, ತಹಶೀಲ್ದಾರ್ ಜೊತೆಯಲ್ಲಿ ಸಂಪರ್ಕ ಮಾಡಿ, ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು. ಪರ್ಯಾಯ ವ್ಯವಸ್ಥೆ ಆಗುವವರೆಗೂ ನಾವು ಇಲ್ಲಿಂದ ತೆರಳುವುದಿಲ್ಲ ಎಂದು ಕನ್ನಮಂಗಲ ಗ್ರಾಮದ ರೈತರು ಪೊಲೀಸರ ಜೊತೆ ವಾಗ್ವಾದಲ್ಲಿ ತೊಡಗಿ, ಮೃತ ರೈತನ ಮೃತದೇಹವನ್ನು ಕುಟುಂಬಸ್ಥರು ರಸ್ತೆಯ ಪಕ್ಕದಲ್ಲಿ ಟ್ರ‍್ಯಾಕ್ಟರ್ ನಲ್ಲಿ ಇಟ್ಟುಕೊಂಡು ಹಲವು ಗಂಟೆಗಳಿಂದ ರಸ್ತೆಯಲ್ಲೇ ಕಾಲ ದೂಡಿದ ಘಟನೆ ನಡೆಯಿತು.


ಗ್ರಾಮದ ಜನರು ಕೆಲದಿನಗಳಿಂದ ಕಣ್ವ ಕೆರೆಯ ದಡದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದು ಈಗ ಕಣ್ವ ಡ್ಯಾಮ್ ತುಂಬಿರುವ ಕಾರಣ ಶವ ಸಂಸ್ಕಾರ ಮಾಡಲು ಜಾಗವಿಲ್ಲದಂತಾಗಿದೆ. ಸ್ಮಶಾನಕ್ಕಾಗಿ ತಾಲೂಕು ಕಚೇರಿಗೆ ಮನವಿ ಸಲ್ಲಿಸಿ ವರ್ಷಗಳೇ ಕಳೆದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸ್ಮಶಾನವಿದೆ ಎಂದು ಹೇಳುವ ಜಾಗದಲ್ಲಿ ಬೇರೆಯವರು ವ್ಯವಸಾಯ ಮಾಡುತ್ತಿದ್ದಾರೆ ಜೊತೆಗೆ ಅದು ಎರಡು ಕಿಮೀ ದೂರ ಅಂಗರಹಳ್ಳಿ ಗ್ರಾಮದ ಬಳಿ ಇದೆ ಎಂದು ಆರೋಪಿಸಿ, ತಾವು ಶವವನ್ನು  ತಾಲೂಕು ಕಚೇರಿಯ ಬಳಿ ಇಟ್ಟೇ ತೀರು ತ್ತೇವೆ ಎಂದು ಹಠತೊಟ್ಟು ಶವವವನ್ನು ಇಲ್ಲಿನ ತಾಲ್ಲೂಕು ಕಛೇರಿಗೆ ಸಾಗಿಸಿಕೊಂಡು ಬಂದಿದ್ದರು.


ಗ್ರಾಮಕ್ಕೆ ಹತ್ತಿರವಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ, ಸ್ಮಶಾನಕ್ಕೆ ಮೀಸಲಿಡುವ ತನಕ ತಾಲ್ಲೂಕು ಕಚೇರಿಯ ಮುಂದೆಯೇ ಶವವಿಟ್ಟು, ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು. ತಹಶೀಲ್ದಾರ್ ನಾಗೇಶ್ ಮನವೊಲಿಸಲು ಮುಂದಾ ದರು, ಆದರೆ ಪ್ರತಿಭಟನಾ ನಿರತರು ಸ್ಮಶಾನ ಜಾಗ ನಿಗದಿಯಾಗದೆ ಖಾಲಿ ಮಾಡುವುದಿಲ್ಲ ಎಂದು ಪಟ್ಟು ಹಿಡಿದರು.


ತಹಶೀಲ್ದಾರ್ ನಾಗೇಶ್, ಸರ್ವೇಯರ್ ಮತ್ತು ಪೊಲೀಸರ ಜೊತೆಗೂಡಿ ಗ್ರಾಮಕ್ಕೆ ತೆರಳಿ, ಸ್ಮಶಾನ ಜಾಗವನ್ನು ನಿಗದಿ ಗೊಳಿಸಿದರು. ದೂರವಾಣಿ ಮೂಲಕ ಪ್ರತಿ ಭಟನಾ ಕಾರರಿಗೆ ಮಾಹಿತಿ ನೀಡಿದ ನಂತರ ಕನ್ನಮಂಗಲ ಗ್ರಾಮದ ರೈತರು ಶವವನ್ನು ಅದೇ ಟ್ರಾಕ್ಟರ್‌ನಲ್ಲಿ ಹಿಂದಕ್ಕೆ ತೆಗೆದುಕೊಂಡು ಹೋಗಿ ಶವಸಂಸ್ಕಾರ ಮಾಡಿದರು.


ಈ ಕುರಿತು ಮಾತನಾಡಿದ ತಹಶಿಲ್ದಾರ್ ನಾಗೇಶ್ ರವರು ಕನ್ನಮಂಗಲ ಗ್ರಾಮದಲ್ಲಿ ಈಗಾಗಲೇ ಸ್ಮಶಾನಕ್ಕೆಂದೆ ಎರಡೂವರೆ ಎಕರೆ ಜಾಗವನ್ನು ನೀಡಲಾಗಿತ್ತು. ಅದು ದೂರ ಇದ್ದು ಉಪಯೋಗಕ್ಕೆ ಬರುತ್ತಿಲ್ಲಾ ಎಂದು ಗ್ರಾಮಸ್ಥರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಇಂದು ನಾವು ಗ್ರಾಮಕ್ಕೆ ಹತ್ತಿರವಿರುವ ಸರ್ಕಾರಿ ಗೋಮಾಳ ದ ಸರ್ವೇ ನಂ 118 ರಲ್ಲಿ ಒಂದೂವರೆ ಎಕರೆ ಜಾಗ ಗುರುತಿಸಿ ಸರ್ವೇ ಮಾಡಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಕಡತವನ್ನು ನೀಡಲಾಗುತ್ತದೆ. ಗ್ರಾಪಂ ಪಿಡಿಓ ಗೂ ಸಹ ಅಭಿವೃದ್ಧಿ ಮಾಡಲು ಈಗಾಗಲೇ ಸೂಚನೆ ನೀಡಿದ್ದೇವೆ ಎಂದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑