Tel: 7676775624 | Mail: info@yellowandred.in

Language: EN KAN

    Follow us :


ಪ್ರತಿಭೆಗೆ ಮೂರು ಚಿನ್ನದ ಪದಕ

Posted date: 02 May, 2022

Powered by:     Yellow and Red

ಪ್ರತಿಭೆಗೆ ಮೂರು ಚಿನ್ನದ ಪದಕ

ಚನ್ನಪಟ್ಟಣ: ಮೀನುಗಾರಿಕೆ ವಿಜ್ಞಾನದ ಸ್ನಾತಕೋತ್ನರ ಪದವಿಯಲ್ಲಿ ತಾಲೂಕಿನ ಕುವರಿ ಕೆ.ಬಿ ಕುಶಲ ಮೂರು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾಳೆ.


ತಾಲೂಕಿನ ಕಳ್ಳಿಹೊಸೂರು ಗ್ರಾಮದ ಸುಮಾ ಹಾಗೂ ಬೋರೇಗೌಡ (ಬಜ್ಜಪ್ಪ)ನವರ ಪುತ್ರಿ ಈ ಸಾಧನೆ ಮಾಡಿರುವ ವಿದ್ಯಾರ್ಥಿನಿ. ಈಕೆ ಬೀದರ್ ನ ಕರ್ನಾಟಕ ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ (ಕೆವಿಎಎಫ್‍ಎಸ್‍ಯು)ನಲ್ಲಿ  ಮೀನುಗಾರಿಕೆ ವಿಜ್ಷಾನದಲ್ಲಿ ಸ್ನಾತಕೋತ್ನರ ಪದವಿ ಓದುತ್ತಿದ್ದಳು. ಅಂತಿಮ ವರ್ಷದ ಪದವಿಯಲ್ಲಿ ಮೀನುಗಾರಿಕೆ, ಸೂಕ್ಷ್ಮಜೀವ ಹಾಗೂ ವಿಜ್ಞಾನ ವಿಷಯದಲ್ಲಿ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾಳೆ.

ತಾಲೂಕಿನ ಕಳ್ಳಿಹೊಸೂರು ಗ್ರಾಮದ ಅತ್ಯಂತ ಚಿಕ್ಕ ಗ್ರಾಮವಾಗಿದ್ದು, ಗ್ರಾಮಕ್ಕೆ ಸಾರಿಗೆ ಸಂಪರ್ಕವೂ ಸಹ ಇಲ್ಲ. ಇಂತಹ ಗ್ರಾಮದ ರೈತಾಪಿ ಕುಟುಂಬದ ಹಿನ್ನೆಲೆಯ ಕುಶಲ ತನ್ನ ನಿರಂತರ ಓದು ಹಾಗೂ ಸಾಧಿಸಲೇಬೇಕು ಎಂಬ ಹಠದಿಂದ ಈ ಸಾಧನೆ ಮಾಡಿ ತನ್ನ ಪಾಲಕರು ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾಳೆ. ಈಕೆಯ ಸಾಧನೆಯಿಂದ ಆಕೆಯ ಕುಟುಂಬದವರು ಹಾಗೂ ಗ್ರಾಮಸ್ಥರು ಸಂತಷಗೊಂಡಿದ್ದಾರೆ.ಪತ್ರಿಕೆಯೊಂದಿಗೆ ತನ್ನ ಸಂತಷ ಹಂಚಿಕೊಂಡಿರುವ ಕೆ.ಬಿ.ಕುಶಲ, ತನ್ನ ತಂದೆ ತಾಯಿಯ ಸಹಕಾರದಿಂದ ಇದೆಲ್ಲವೂ ಸಕಾರವಾಗಿದೆ. ಇದಲ್ಲದೇ ವಿವಿಯಲ್ಲಿ ನುರಿತ ಪ್ರಾಧ್ಯಾಪಕರು ಸದಾ ಉತ್ತಮ ಮಾರ್ಗದರ್ಶನ ನೀಡುತ್ತಿದ್ದರು. ಈ ವಿಷಯದ ಬಗ್ಗೆ ನನಗೆ ಚಿಕ್ಕಂದಿನಿಂದಲೂ ಅಪಾರವಾದ ಆಸಕ್ತಿ ಇತ್ತು. ಇದು ಸಹ ನನ್ನ ಓದಿಗೆ ಸಹಕಾರವಾಯಿತು. ಮುಂದೆ ಇದೇ ಕ್ಷೇತ್ರದ ಇನ್ನಷ್ಟು ಅಭ್ಯಾಸ ಹಾಗೂ ವೃತ್ತಿ ಮಾಡುವ ಆಲೋಚನೆ ಇದೆ. ಸ್ನಾತಕೋತ್ನರ ಪದವಿಯಲ್ಲಿ ಮೂರು ಪದಕ ಬಂದಿರುವುದು ಅಪಾರವಾದ ಸಂತಷ ತಂದಿದೆ ಎಂದು ತಿಳಿಸಿದ್ದಾಳೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑