Tel: 7676775624 | Mail: info@yellowandred.in

Language: EN KAN

    Follow us :


ಕುಮಾರಸ್ವಾಮಿ ಬಿರುಗಾಳಿಯಂತೆ ಅವರು ಬಂದಕಡೆ ಏನೂ ಉಳಿಯಲ್ಲ ಸಿ ಪಿ ಯೋಗೇಶ್ವರ್

Posted date: 10 May, 2022

Powered by:     Yellow and Red

ಕುಮಾರಸ್ವಾಮಿ ಬಿರುಗಾಳಿಯಂತೆ ಅವರು ಬಂದಕಡೆ ಏನೂ ಉಳಿಯಲ್ಲ ಸಿ ಪಿ ಯೋಗೇಶ್ವರ್

ಚನ್ನಪಟ್ಟಣ: ಮೇ 11 22. ಕಳೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಯವರು ಬಿರುಗಾಳಿ ಬಂದಂಗೆ ಬಂದ್ರು ಗೆದ್ರು ಹೋದ್ರು. ಅಂದರೆ ಬಿರುಗಾಳಿ ಬರುವುದು ಒಳ್ಳೆಯದಕ್ಕಲ್ಲಾ ಎಲ್ಲವನ್ನೂ ಬಾಚಿಕೊಂಡು ಹೋಗಲು ಎಂಬುದನ್ನು ಸಾಬೀತು ಪಡಿಸಿದರು. ನೀವುಗಳೆಲ್ಲರೂ ನಮ್ಮ ಕ್ಷೇತ್ರದಿಂದ ಮುಖ್ಯಮಂತ್ರಿ ಆಗ್ತಾರೆ ಅಂತ ನೀವೆಲ್ಲರೂ ಮತ ಹಾಕಿ ಗೆಲ್ಸಿದ್ರಿ ಅವರು ಮುಖ್ಯಮಂತ್ರಿ ಅಂತೂ ಆದರೂ ತಾಲ್ಲೂಕಿಗೆ ನಾಮ ಇಕ್ಕಿದರು ಎಂದು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ವ್ಯಂಗವಾಡಿದರು. ಅವರು ಇಂದು ಬಿ ವಿ ಪಾಳ್ಯ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಕುಮಾರಸ್ವಾಮಿ ಯವರು ಈ ತಾಲ್ಲೂಕಿನಿಂದ ಮುಖ್ಯಮಂತ್ರಿ ಆಗಿದ್ದರೂ ಸಹ ಮಹದೇಶ್ವರ ದೇವಾಲಯಕ್ಕೆ ಅನುದಾನ ನೀಡಿ ಪೂರ್ಣಗೊಳಿಸಲಿಲ್ಲ. ಪ್ರತಿನಿತ್ಯ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿರುವ ಕಾಡಾನೆಗಳು ಬಾರದಂತೆ ತಡೆಗೋಡೆ ನಿರ್ಮಿಸಲಿಲ್ಲ. ನೀರಾವರಿ ಮಾಡಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ಅದು ನನ್ನ ಕೆಲಸ ಎಂದು ಹೇಳಿಕೊಳ್ಳುತ್ತಾರೆ. ರೈತರು ಇಂದು ಆತಂಕದಲ್ಲಿದ್ದಾರೆ. ಇದುವರೆಗೂ ಯಾವುದೇ ಅನುಕೂಲ ಕಲ್ಪಿಸಿಲ್ಲ. ಇಂತಹ ನಾಯಕರು ನಮಗೆ ಬೇಕಾ ಎಂದು ಪ್ರಶ್ನಿಸಿದರು. ಕುಮಾರಸ್ವಾಮಿ ಯವರು ಚನ್ನಪಟ್ಟಣಕ್ಕೆ ಹಣ ನೀಡಬೇಡಿ ಎಂದು ಮುಖ್ಯಮಂತ್ರಿಗಳಿಗೆ ಒತ್ತಡ ಹೇರಿದ್ದರ ನಡುವೆಯೂ ಮುಖ್ಯಮಂತ್ರಿಗಳು ತಾಲ್ಲೂಕಿನ ಅಭಿವೃದ್ಧಿಗೆ ಐವತ್ತು ಕೋಟಿ, ಮಹದೇಶ್ವರ ದೇವಾಲಯಕ್ಕೆ ಎರಡು ಕೋಟಿ, ವಿವಿಧ ದೇವಾಲಯಗಳ ಅಭಿವೃದ್ಧಿಗೆ ಒಂದು ಕೋಟಿ ರೂ ನೀಡಿದ್ದಾರೆ. ಸಚಿವ ಸ್ಥಾನ ಸಿಗುವ ಭರವಸೆ ಇದ್ದು ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡಲು ಉತ್ಸುಕನಾಗಿದ್ದೇನೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದರು.


ಹಿರಿಯ ಮುತ್ಸದ್ದಿ ಬಿ ವಿ ಹಳ್ಳಿಯ ಜಯಮುದ್ದಪ್ಪ ರವರು ಮಾತನಾಡಿ ಹೆಚ್ ಡಿ ದೇವೇಗೌಡರು ಅವಕಾಶವಾದಿಗಳು, ಮಣ್ಣಿನಮಕ್ಕಳು ಎಂದು ಹೇಳಿಕೊಂಡರೇ ವಿನಹ ನಿಜವಾದ ಮಣ್ಣಿನ ಮಕ್ಕಳಿಗೆ ಯಾವುದೇ ಕೊಡುಗೆ ನೀಡಲಿಲ್ಲ. ಅದೇ ಜಾಡಿನಲ್ಲಿ ಮಕ್ಕಳು ಸೊಸೆಯಂದಿರು ಮತ್ತು ಮೊಮ್ಮಕ್ಕಳು ನಡೆಯುತ್ತಿರುವುದು ರೈತರ ದುರ್ದೈವ. ಕಳೆದ ಬಾರಿ ಇಂತಹ ಅವಕಾಶವಾದಿಗಳಿಗೆ ಅವಕಾಶ ನೀಡಿದ್ದು ನಮಗೆ ನಾವೇ ಮಾಡಿಕೊಂಡ ಮೋಸ. ತಾಲ್ಲೂಕಿಗೆ ನೀರಾವರಿ ಕಲ್ಪಿಸಿ ರೈತರ ಬದುಕನ್ನು ಹಸನು ಮಾಡಿದ ಸಿ ಪಿ ಯೋಗೇಶ್ವರ್ ರವರನ್ನು ಮುಂದಿನ ಬಾರಿ ಗೆಲ್ಲಿಸುವ ಜವಾಬ್ದಾರಿ ತಾಲ್ಲೂಕಿನ ಮತದಾರರ ಕೈಯ್ಯಲ್ಲಿ ಇದೆ. ಬಹುತೇಕ ಈ ವಾರ ಅವರಿಗೆ ಮಂತ್ರಿ ಸ್ಥಾನ ಸಿಗುವ ಖಚಿತತೆ ಇದ್ದು ಉಳಿದ ಹತ್ತು ತಿಂಗಳು ಅಧಿಕಾರ ನಡೆಸಿ ತಾಲ್ಲೂಕಿಗೆ ಹೆಚ್ಚಿನ ಕೆಲಸ ಮಾಡುತ್ತಾರೆ ಎಂದು ಆಶಿಸಿದರು.


ಮುದಗೆರೆ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬಿಜೆಪಿ ಮುಖಂಡ ಜಯಕುಮಾರ್ (ಜೆಕೆ) ಮಾತನಾಡಿ ಯೋಗೇಶ್ವರ್ ರವರು ತಾಲ್ಲೂಕಿಗೆ ನೀರಾವರಿ ಯೋಜನೆ ಮಾಡುವ ಮುನ್ನಾ ರೈತರ ಬದುಕು ಮೂರಾಬಟ್ಟೆಯಾಗಿತ್ತು. ಜನಜಾನುವಾರುಗಳಿಗೆ ಕುಡಿಯುವ ನೀರಿಗೂ ತತ್ವಾರವಾಗಿತ್ತು. ಆದರೆ ಇಂದಿನ ಪರಿಸ್ಥಿತಿ ವಿಭಿನ್ನವಾಗಿದೆ. ಬೆಂಗಳೂರಿಗೆ ವಲಸೆ ಹೋಗಿದ್ದಂತಹ ಅನೇಕ ರೈತರು ಇಂದು ತಮ್ಮ ಹೊಲದಲ್ಲಿ ವ್ಯವಸಾಯ ಮಾಡುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಇದುವರೆಗೂ ಜೆಡಿಎಸ್ ಪಕ್ಷದವರು ಕೊಟ್ಟಂತಹ ಸುಳ್ಳು ಆಶ್ವಾನೆಗಳನ್ನು ನಂಬಿ ಮತ್ತೆ ಮೋಸ ಹೋಗುವುದು ಬೇಡ. ಮುಂದಿನ ಚುನಾವಣೆಯಲ್ಲಿ ನಮ್ಮೆಲ್ಲರ ಮತ ಸಿ ಪಿ ಯೋಗೇಶ್ವರ್ ರವರಿಗೆ ಮೀಸಲಾಗಿರಿಸೋಣಾ ಎಂದು ಕರೆ ನೀಡಿದರು.


ವೇದಿಕೆಯಲ್ಲಿ ಬಿಡಿಸಿಸಿ ಮತ್ತು ಬಮೂಲ್ ನ ಮಾಜಿ ನಿರ್ದೇಶಕ ಎಸ್ ಲಿಂಗೇಶ್ ಕುಮಾರ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆಲಗೆರೆ ಜಯರಾಮು, ಅರಳಾಳುಸಂದ್ರ ಗ್ರಾಮದ ರಾಜೇಶ್, ರವಿ ಕೂರಣಗೆರೆ ರವರು ಮಾತನಾಡಿದರು.

ನಗರದಿಂದ ಹೊರಟ ಸಿ ಪಿ ಯೋಗೇಶ್ವರ್ ರವರಿಗೆ ಅಮ್ಮಳ್ಳಿದೊಡ್ಡಿ, ಬಿ ವಿ ಹಳ್ಳಿ ಮತ್ತು ಬಿ ವಿ ಪಾಳ್ಯ ಗ್ರಾಮದ ಬಿಜೆಪಿ ಮುಖಂಡರು ಪಟಾಕಿ ಸಿಡಿಸಿ ಬೈಕ್ ರ್ಯಾಲಿ ಮೂಲಕ ಬಿ ವಿ ಪಾಳ್ಯ ಗ್ರಾಮದ ವೇದಿಕೆಗೆ ಕರೆತಂದರು. ಬಿ ವಿ ಹಳ್ಳಿ, ಅರಳಾಳುಸಂದ್ರ, ಬಿ ವಿ ಪಾಳ್ಯ ಗ್ರಾಮದ ಹಲವಾರು ಹಿರಿಯರು, ಯುವಕರು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ನಗರ ಅಧ್ಯಕ್ಷ ಶಿವಕುಮಾರ್, ಮಾಜಿ ತಾಲ್ಲೂಕು ಅಧ್ಯಕ್ಷ ಆನಂದಸ್ವಾಮಿ, ಸಿ ಪಿ ನಾಗೇಶ್, ರಾಮಚಂದ್ರು, ಕೃಷ್ಣೇಗೌಡ, ಅಣ್ಣಯ್ಯ, ವಿ ಬಿ ಚಂದ್ರು, ಪ್ರೇಮಕುಮಾರ್ ಮತ್ತಿತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑