Tel: 7676775624 | Mail: info@yellowandred.in

Language: EN KAN

    Follow us :


ಕೊಟ್ರು ಬಸವಪ್ಪ ನ ಕೊಂಡಕ್ಕೆ ಆಯತಪ್ಪಿ ಬಿದ್ದ ಅರ್ಚಕ

Posted date: 10 May, 2022

Powered by:     Yellow and Red

ಕೊಟ್ರು ಬಸವಪ್ಪ ನ ಕೊಂಡಕ್ಕೆ ಆಯತಪ್ಪಿ ಬಿದ್ದ ಅರ್ಚಕ

ಚನ್ನಪಟ್ಟಣ: ಮೇ 11 22. ತಾಲ್ಲೂಕಿನ ಮಂಕುಂದ ಗ್ರಾಮದ ಹೊರವಲಯದಲ್ಲಿರುವ "ಕೊಟ್ರು ಬಸವಪ್ಪ" ಕೊಂಡೊತ್ಸವ ಸಂದರ್ಭದಲ್ಲಿ ಕೊಂಡ ಹಾಯುವ ವೇಳೆ ಅರ್ಚಕ ನಂದೀಶ್ (38) ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.


ಮಂಕುಂದ, ಹರೂರು, ಮೊಗೇನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಕೊಟ್ರು ಬಸವಪ್ಪ ಸ್ವಾಮಿ ದೇವರ ಕೊಂಡೋತ್ಸವವೂ ಇಂದು ಭಕ್ತರ ಸಮ್ಮುಖದಲ್ಲಿ ಜರುಗಿತು. ಸೋಮವಾರ ಬಸವಪ್ಪ ದೇವಾಲಯದ ಬಸವೇಶ್ವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಭಕ್ತರು ಕೊಂಡಕ್ಕೆ ತಂದು ಪೇರಿಸಿದ್ದ ಸೌದೆಗೆ ಮಧ್ಯರಾತ್ರಿ ಅಗ್ನಿ ಹಚ್ಚಲಾಗಿತ್ತು.


ಮಂಗಳವಾರ ಮುಂಜಾನೆ ವಿವಿಧ ಪೂಜೆಗಳೊಂದಿಗೆ ಕೊಂಡ ಮಹೋತ್ಸವ ನಡೆಯುವ ವೇಳೆ ಓರ್ವ ಅರ್ಚಕರು ನಿರ್ವಿಘ್ನವಾಗಿ ಕೊಂಡ ಹಾಯ್ದರು. ನಂತರ ಕತ್ತಿಹಿಡಿದು ಮೈಮೇಲೆ ದೇವರು ಬಂದಂತೆ ನಟಿಸಿದ ನಂದೀಶ್ ರವರು ಹುರುಪಿನಲ್ಲಿ ಕೊಂಡಹಾಯುವ ವೇಳೆ ಮಧ್ಯದಲ್ಲೇ ಎಡವಿ ಬಿದ್ದರು, ಎದ್ದು ಎರಡು ಹೆಜ್ಜೆ ಹಾಕುವಷ್ಟರಲ್ಲೇ ಮತ್ತೆ ಎಡವಿ ಬಿದ್ದರು. ನೆರೆದಿದ್ದ ಭಕ್ತರು ಅರ್ಚಕರನ್ನು ಎತ್ತಿ ಸಂತೈಸಿ ನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮಂಡ್ಯ ದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಅರ್ಚಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑