Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಮೂರು ದಿನ ಮಾವುಮೇಳ ಸಿಇಓ ಇಕ್ರಂ

Posted date: 10 May, 2022

Powered by:     Yellow and Red

ಜಿಲ್ಲೆಯಲ್ಲಿ ಮೂರು ದಿನ ಮಾವುಮೇಳ ಸಿಇಓ ಇಕ್ರಂ

ಚನ್ನಪಟ್ಟಣ: ಮೇ 11 22 : ಅತಿ ಹೆಚ್ಚು ಮಾವು ಬೆಳೆಯುವ ರಾಮನಗರ ಜಿಲ್ಲೆಯಲ್ಲಿ ಎರಡು ಕಡೆ ಪ್ರತಿ ವರ್ಷದಂತೆ 2022/23ನೇ ಸಾಲಿನ ಮಾವು ಮೇಳವನ್ನು ಮೂರು ದಿನಗಳ ಕಾಲ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ತೋಟಗಾರಿಕೆಯ ಸಹಯೋಗದೊಂದಿಗೆ ಚನ್ನಪಟ್ಟಣ ತಾಲ್ಲೂಕಿನ ಕೆಂಗಲ್ ದೇವಸ್ಥಾನದ ಮುಂಭಾಗ ಹಾಗೂ ಕನಕಪುರ-ಬೆಂಗಳೂರು ರಸ್ತೆಯಲ್ಲಿರುವ ಶ್ರೀ ರವಿಶಂಕರ್ ಗುರೂಜಿ ಆಶ್ರಮದ ಬಳಿ ಇದೇ ತಿಂಗಳ 13:05:22 ರ ಶುಕ್ರವಾರದಿಂದ 15:05:22 ಭಾನುವಾರದವರೆಗೆ ಮಾವು ಮೇಳವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ತಿಳಿಸಿದರು.


ಅವರು ಮಂಗಳವಾರ ಕೆಂಗಲ್ ಬಳಿ ಇರುವ ಸಸ್ಯಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಮನಗರ ಜಿಲ್ಲೆಯಲ್ಲಿ ಮಾವು ಬೆಳೆ ಒಂದು ಪ್ರಮುಖ ಬೆಳೆಯಾಗಿದ್ದು, ಅಂದಾಜು 28 ಸಾವಿರ ರೈತ ಕುಟುಂಬಗಳು ಮಾವು ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಮಾವಿನಲ್ಲಿ ಪ್ರಮುಖವಾಗಿ ಬಾದಾಮಿ, ರಸಪೂರಿ, ಮಲ್ಲಿಕಾ ಸೇರಿದಂತೆ ಐವತ್ತಕ್ಕು ಹೆಚ್ಚಿನ ತಳಿಗಳನ್ನು ಬೆಳೆಯುತ್ತಿದ್ದು, ಪ್ರಸ್ತುತ ಹಂಗಾಮಿನಲ್ಲಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಅನಿರೀಕ್ಷಿತವಾಗಿ ಬಿದ್ದ ಮಳೆಯಿಂದ ಮಾವಿನ ಫಸಲು ಇಳಿಮುಖವಾಗಿದ್ದರ ಜೊತೆಗೆ ತಡವಾಗಿಯೂ ಮಾರುಕಟ್ಟೆಗೆ ಬಂದಿರುವುದರಿಂದ ಪ್ರಸ್ತುತ ಸಾಲಿನಲ್ಲಿ 80 ಸಾವಿರದಿಂದ ಒಂದು ಲಕ್ಷ ಟನ್ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ ಎಂದರು.


2020/21/22 ಸಾಲಿನಲ್ಲಿ ಕೊರೊನಾ ಮಹಾಮಾರಿಯಿಂದ ಜಿಲ್ಲೆಯಲ್ಲಿ ಮಾವು ಮೇಳವನ್ನು ಆಯೋಜಿಸಲಾಗಿರಲಿಲ್ಲ. ಅದಕ್ಕೂ ಹಿಂದೆ 2019/20 ಸಾಲಿನಲ್ಲಿ ಜಾನಪದ ಲೋಕದ ಬಳಿ ಹಮ್ಮಿಕೊಳ್ಳಲಾಗಿದ್ದ ಮಾವು ಮೇಳದಲ್ಲಿ ಇಪ್ಪತ್ತು ರೈತರು ಭಾಗವಹಿಸಿ ಐದು ದಿನಗಳು ನಡೆದ ಮೇಳದಲ್ಲಿ 39.03 ಟನ್ ಮಾರಾಟದಿಂದ 32,86,751₹ ಗಳ ವಹಿವಾಟು ನಡೆಸಲಾಗಿತ್ತು. ಅದರ ಅನುಸಾರವಾಗಿ ಈ ಬಾರಿಯೂ ಸಹ ಇಪ್ಪತ್ತೈದರಿಂದ ಮೂವತ್ತು ಮಳಿಗೆಗಳನ್ನು ತೆರೆಯಲಾಗುತ್ತಿದ್ದು ರೈತರಿಂದ ನೇರವಾಗಿ ಗ್ರಾಹಕರಿಗೆ ಉತ್ತಮ ಹಣ್ಣುಗಳನ್ನು ಒದಗಿಸಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರಿಗೆ ಉತ್ತಮ ಬೆಲೆ ಸಿಗುವಂತೆ ಹಾಗೂ ಗ್ರಾಹಕರಿಗೆ ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಸುಲಭ ದರದಲ್ಲಿ ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.


ಮಾವು ಪ್ರದರ್ಶನ ಮತ್ತು ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ರೈತರು ಎರಡು ಸಾವಿರ ಹಣವನ್ನು ಠೇವಣಿ ಇಟ್ಟು ಆಯಾಯ ತಾಲ್ಲೂಕು ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು ದಿನಾಂಕ 12/05/22 ರ ಮಧ್ಯಾಹ್ನ ಎರಡು ಗಂಟೆಯೊಳಗೆ ತಾಲ್ಲೂಕಿನ ತೋಟಗಾರಿಕಾ ಕಚೇರಿಗೆ ಸಲ್ಲಿಸುವಂತೆ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ತೋಟಗಾರಿಕಾ ಅಧಿಕಾರಿ ಮುನೇಗೌಡ, ತಾಲ್ಲೂಕು ಹಿರಿಯ ಸಹಾಯಕ ಅಧಿಕಾರಿ ವಿವೇಕ್, ರಮೇಶ್, ಶಾಂತರಾಜು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑