ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಕಾರ್ಯಕ್ರಮ ಉದ್ಘಾಟನೆ ನಾಡಿದ ಇಓ ಚಂದ್ರು

ಇ-ಸ್ವತ್ತು ಸಾರ್ವಜನಿಕರಿಗೆ ಅವಶ್ಯಕವಾದ ದಾಖಲೆಯಾಗಿದ್ದು, ಜನ ಜಾಗೃತಿ ಮೂಡಿಸುವ ಕೆಲಸ ಜರುಗಬೇಕು ಈ ಉದ್ದೇಶದಿಂದಲೇ ಇಂದು ಜಿಲ್ಲಾದ್ಯಾಂತ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಚನ್ನಪಟ್ಟಣ ತಾಲ್ಲೂಕಿನ ಕಾರ್ಯ ನಿರ್ವಾಹಕ ಅಧಿಕಾರಿ ಚಂದ್ರು ಅವರು ತಿಳಿಸಿದರು.
ಅವರು ಇಂದು ಮುದಗೆರೆ ಗ್ರಾಮ ಪಂಚಾಯಿತಿ ವತಿಯಿಂದ ಮುದಗೆರೆ ಗ್ರಾಮದಲ್ಲಿ ನಡೆಯುತ್ತಿರುವ " ನಿರಂತರ ಇ-ಸ್ವತ್ತು ಖಾತಾ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮ ಪಂಚಾಯತಿ ವತಿಯಿಂದ ಮನೆ ಮನೆ ಭೇಟಿ ನೀಡಿ ಇ-ಸ್ವತ್ತು ಖಾತೆಯ ಬೇಡಿಕೆಗೆ ತಕ್ಕಂತೆ ಅರ್ಜಿಯನ್ನು ನೀಡಿ ಕರಪತ್ರದ ಮೂಲಕ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳ ಮಾಹಿತಿಯನ್ನು ನೀಡುವುದರ ಮೂಲಕ ಜನರಿಗೆ ಜಾಗೃತಿ ಮೂಡಿಸಿ ನಿರಂತರ ಇ-ಸ್ವತ್ತು ಖಾತಾವನ್ನು ಸಾರ್ವಜನಿಕರು ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿಂದು ಎಂ ಆರ್ , ಉಪಾಧ್ಯಕ್ಷರಾದ ರವಿ, ಗ್ರಾಮೀಣಾಭಿವೃದ್ಧಿ ಅಧಿಕಾರಿ ದೇವರಾಜು ಎಚ್ ಆರ್ , ಸದಸ್ಯರು , ಗ್ರಾಮ ಪಂಚಾಯತಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು