Tel: 7676775624 | Mail: info@yellowandred.in

Language: EN KAN

    Follow us :


”>

ಕೆಂಗಲ್ ಆಂಜನೇಯಸ್ವಾಮಿ ದರ್ಶನ ಪಡೆದ ಲೋಕಪಾಲ್ ಮುಖ್ಯಸ್ಥ ಪಿನಾಕಿ ಚಂದ್ರ ಘೋಷ್

Posted date: 14 May, 2022

Powered by:     Yellow and Red

ಕೆಂಗಲ್ ಆಂಜನೇಯಸ್ವಾಮಿ ದರ್ಶನ ಪಡೆದ ಲೋಕಪಾಲ್ ಮುಖ್ಯಸ್ಥ ಪಿನಾಕಿ ಚಂದ್ರ ಘೋಷ್

ಚನ್ನಪಟ್ಟಣ: ಮೇ 14 22 ತಾಲ್ಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಕೆಂಗಲ್ ಆಂಜನೇಯಸ್ವಾಮಿ ದೇವಾಲಯಕ್ಕೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಹಾಗೂ ಭಾರತ ಲೋಕಪಾಲ್ ಸಂಸ್ಥೆಯ ಮುಖ್ಯಸ್ಥ ಪಿನಾಕಿ ಚಂದ್ರ ಘೋಷ್ ರವರು ಭೇಟಿ ನೀಡಿ ದರ್ಶನ ಪಡೆದರು.


ಇದೇ ಮೊದಲ ಬಾರಿಗೆ ದೇವಾಲಯಕ್ಕೆ ಭೇಟಿ ನೀಡಿದ ಅವರು ಒಳಾಂಗಣದಲ್ಲಿನ ಲಕ್ಷ್ಮೀನರಸಿಂಹ, ಶ್ರೀರಾಮ, ಲಕ್ಷ್ಮಣ, ಸೀತಾ, ಆಂಜನೇಯಸ್ವಾಮಿ ಹಾಗೂ ಕೆಂಗಲ್ ಆಂಜನೇಯಸ್ವಾಮಿ ದರ್ಶನವನ್ನು ತಮ್ಮ ಧರ್ಮಪತ್ನಿಯೊಂದಿಗೆ ಪಡೆದರು. ಪ್ರಧಾನ ಅರ್ಚಕರಾದ ರವೀಂದ್ರಭಟ್ಟ ಮತ್ತು ಶರತ್ ರವರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಲೋಕಪಾಲ್ ಮುಖ್ಯಸ್ಥರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು ಕೆಂಗಲ್ ಆಂಜನೇಯಸ್ವಾಮಿ ಬಗ್ಗೆ ಮಾಹಿತಿ ನೀಡಿ, ದಂಪತಿಗಳಿಗೆ ಸನ್ಮಾನಿಸಿ ಬೀಳ್ಕೊಟ್ಟರು.


ಈ ಸಂದರ್ಭದಲ್ಲಿ ರಾಮನಗರ ಜಿಲ್ಲಾ ನ್ಯಾಯಾಧೀಶರಾದ ನಿಂಗಪ್ಪ ಪರಶುರಾಮ, ಚನ್ನಪಟ್ಟಣ ನ್ಯಾಯಾಧೀಶರುಗಳಾದ ಶುಭಾ ಮತ್ತು ಮಹೇಂದ್ರ ರವರು, ತಹಶಿಲ್ದಾರ್ ಹರ್ಷವರ್ಧನ ಉಪ ತಹಶಿಲ್ದಾರ್ ಹರೀಶ್, ವಿಎ ಮಂಜುನಾಥ, ಮುಜರಾಯಿ ಇಲಾಖೆಯ ಕಾರ್ಯನಿರ್ವಾಹಕ ಅಧಿಕಾರಿ ತಮ್ಮೇಗೌಡ ಮತ್ತಿತರರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

??????????????

  • ????? ???????? ??????????? ???? ??????????.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑