Tel: 7676775624 | Mail: info@yellowandred.in

Language: EN KAN

    Follow us :


ನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎನ್ ಜಿ ಓ ಸದಸ್ಯರ ಮೇಲೆ ಮಾರಣಾಂತಿಕ ಹಲ್ಲೆ

Posted date: 15 May, 2022

Powered by:     Yellow and Red

ನಗರದಲ್ಲಿ ಅಕ್ರಮ ಗೋಮಾಂಸ ಮಾರಾಟ ಕೇಂದ್ರಗಳ ಮೇಲೆ ದಾಳಿ ನಡೆಸಿದ ಎನ್ ಜಿ ಓ ಸದಸ್ಯರ  ಮೇಲೆ ಮಾರಣಾಂತಿಕ ಹಲ್ಲೆ

ಚನ್ನಪಟ್ಟಣ: ಮೇ 15 22. ಚನ್ನಪಟ್ಟಣ ನಗರದ ಮುನಿಯಪ್ಪನದೊಡ್ಡಿ ಬಳಿಯ ಬೀಡಿ ಕಾಲೋನಿ, ಸಾತನೂರು ರಸ್ತೆಯ ಇಂದಿರಾ ಕಾಟೇಜ್ ನಲ್ಲಿ ಅಕ್ರಮ ಗೋಸಾಗಣೆ, ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಾರೆ ಎಂಬ ಖಚಿತ ಮಾಹಿತಿ ಮೇರೆಗೆ ಗೌಗ್ಯಾನ್ ಹೆಸರಿನ ಎನ್ ಜಿ ಓ ಸಂಸ್ಥೆಯ ತಂಡದ ಸದಸ್ಯರು ಸ್ಥಳೀಯ ಪೋಲೀಸರೊಂದಿಗೆ ದಾಳಿ ನಡೆಸಿದ ಸಂದರ್ಭದಲ್ಲಿ ಪೋಲೀಸರೆದುರೇ ವೈದ್ಯ ಸೇರಿದಂತೆ ಎನ್ ಜಿ ಓ ಸದಸ್ಯರಿಗೆ ಕೆಲ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.


ದೆಹಲಿ ಮೂಲದ ಗೌಗ್ಯಾನ್ ಹೆಸರಿನ ಎನ್ ಜಿ ಓ ತಂಡದವರು ಪೊಲೀಸ್ ವೃತ್ತ ನಿರೀಕ್ಷಕರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೂರ್ವ ಪೋಲೀಸ್ ಠಾಣೆ ಮತ್ತು ಪುರ ಪೋಲೀಸ್ ಠಾಣೆಗೆ ಮಾಹಿತಿ ನೀಡಿ ಕೆಲ ಸಿಬ್ಬಂದಿಗಳು ಮತ್ತು ಪಶುವೈದ್ಯರ ಜೊತೆಯಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅಕ್ರಮ ಗೋ ರಪ್ತು ಮಾರಾಟಗಾರರು ಮತ್ತು ಸ್ಥಳೀಯರು ಒಗ್ಗೂಡಿ ಸದಸ್ಯರು ಮತ್ತು ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇಬ್ಬರು ಸದಸ್ಯರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದರೆ ಪಶುವೈದ್ಯ ಗಿರೀಶ್ ರವರು ಮಾಂಸ ಪರೀಕ್ಷೆಗೆ ಬಂದಂತಹ ಸಂದರ್ಭದಲ್ಲಿ ಮಾಂಸದಂಗಡಿಯ ಮಾಲೀಕರು ಮುಷ್ಠಿಯಿಂದ ವೈದ್ಯರಿಗೂ ಸಹ ಕುತ್ತಿಗೆಗೆ ಮತ್ತು ಮುಖಕ್ಕೆ ಗುದ್ದಿದ್ದಾರೆ.


ಸಂಸ್ಥೆಯವರ ಜೊತೆ ಸ್ಥಳಕ್ಕೆ ಬಂದ ಪೊಲೀಸರು ಕಡಿಮೆ ಹಾಗೂ ಸಮವಸ್ತ್ರದಲ್ಲಿ ಇಲ್ಲದ ಕಾರಣ ಹರಸಾಹಸದಿಂದ ದೊಡ್ಡ ಮಟ್ಟದ ಗಲಾಟೆಯನ್ನು ತಪ್ಪಿಸುವಲ್ಲಿ ಸಫಲರಾಗಿದ್ದಾರೆ. ಸ್ಥಳಕ್ಕೆ ಪುರ ಪೋಲೀಸ್ ಠಾಣೆಯ ಪಿಎಸ್ಐ ಹರೀಶ್, ಪೂರ್ವ ಪೋಲೀಸ್ ಠಾಣೆಯ ಪಿಎಸ್ಐ ರಾಮಚಂದ್ರ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಒಂದು ಗೂಡ್ಸ್ ವಾಹನ, ವಾಹನ ಹಾಗೂ ಅದರ ಮಾಲೀಕ ಸೇರಿದಂತೆ ಕೆಲ ದುಷ್ಕರ್ಮಿಗಳ ಮೇಲೆ ಎರಡು ಠಾಣೆಯಲ್ಲೂ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.


ಒದೆ ತಿಂದ ಹಿರಿಯ ಪಶುವೈದ್ಯ ಗಿರೀಶ್ ರವರು ಸ್ಥಳದಲ್ಲಿ ನಾನು ಮೆಡಿಕಲ್ ರಿಪೋರ್ಟ್ ಮಾಡಿಸಿ ದೂರು ನೀಡುತ್ತೇನೆ ಎಂದು ಹೇಳಿಕೊಂಡರಾದರೂ ಠಾಣೆಗೆ ತೆರಳಿದ ನಂತರ ನಾನು ದೂರು ನೀಡುವುದಿಲ್ಲ ಎಂದು ಉಲ್ಟಾ ಹೊಡೆದರು. ಪೋಲೀಸರು ಸಹ ಸ್ವಯಂ ಪ್ರೇರಿತ ಕೇಸು ದಾಖಲು ಮಾಡಿಕೊಳ್ಳದೆ ಮೌನವಹಿಸಿದ್ದರು. ಪುರ ಪೋಲೀಸ್ ಠಾಣೆಯ ಮುಂಭಾಗ ಹಲವಾರು ಮುಸ್ಲಿಂ ಮುಖಂಡರುಗಳು, ನಗರಸಭಾ ಸದಸ್ಯರು ವೈದ್ಯರ ರಾಜಿಸಂಧಾನದಲ್ಲಿ ತೊಡಗಿದ್ದು, ಪಶುವೈದ್ಯ ಸಹ ರಾಜಿಗೆ ಮಣಿದು ದೂರು ನೀಡದಿರುವುದು ಕಂಡುಬಂದಿತು.


ಎನ್ ಜಿ ಓ ಮುಖ್ಯಸ್ಥ ಸಂಜಯ್ ರವರು ಹಲ್ಲೆಗೊಳಗಾಗಿದ್ದ ಸದಸ್ಯರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಠಾಣೆಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ. ಜೊತೆಗೆ ಒಂದು ವಾಹನ, ಎರಡು ನಾಟಿ ಹಸು, ಮೂರು ಕೋಣಗಳು, ಒಂದು ಟನ್ ಗಿಂತಲೂ ಹೆಚ್ಚು ಮಾಂಸ, ಮೂರು ಸಾವಿರ ಹಸುವಿನ ಚರ್ಮಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮದೇ ಇದ್ದರೂ ಸಹ ನಮ್ಮಂತಹ ಸಮಾಜ ಸೇವಕರಿಗೆ ಸರ್ಕಾರ ಯಾವುದೇ ಭದ್ರತೆ ನೀಡುವುದಿಲ್ಲ. ಇಂದಿನ ಘಟನೆಯನ್ನು ನೆನೆಸಿಕೊಂಡರೆ ನಾವು ಪಾಕಿಸ್ತಾನದಲ್ಲಿದ್ದೀವಾ ಅಥವಾ ಭಾರತದಲ್ಲಿ ಇದ್ದೀವಾ ಎಂಬ ಅನುಮಾನ ಕಾಡುತ್ತಿದೆ. ಕಾನೂನುಗಳ ಪಾಲನೆಯಲ್ಲಿ ಸರ್ಕಾರಗಳು ಎಡಗುತ್ತಿವೆ ಎಂದು ತಂಡದ ಮುಖ್ಯಸ್ಥ ಸಂಜಯ್ ಸೇರಿದಂತೆ ಕೆಲ ಸದಸ್ಯರು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಬಾರದೇ ತಮ್ಮ ಕಚೇರಿಯಲ್ಲಿ ಕುಳಿತು ಘಟನೆಯ ಬಗ್ಗೆ ಗಂಟೆಗಟ್ಟಲೆ ಗಲಾಟೆಯಲ್ಲಿ ಏಟು ತಿಂದ ಗಾಯಾಳುಗಳ ಮತ್ತು ಎನ್ ಜಿ ಓ ಸಂಸ್ಥೆಯ ಬೆಂಗಳೂರಿನಿಂದ ಬಂದಿದ್ದವರ ಬಳಿ ಮಾತನಾಡಿದರೆ ವಿನಹ ನಾವು ನಮ್ಮ ಸಂಸ್ಥೆಯ ವತಿಯಿಂದ ಪೊಲೀಸ್ ಇಲಾಖೆಯವರಿಗೆ ಮೊದಲೇ ಮಾಹಿತಿ ತಿಳಿಸಿದರೂ ಸಹ ಆರಕ್ಷಕ ಉಪ ನಿರೀಕ್ಷಕರು ಹೊರತುಪಡಿಸಿದರೆ ಯಾವುದೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಾರದಿದ್ದು ಕೂಡ ನಮಗೆ ತುಂಬಾ ನೋವುಂಟು ಮಾಡಿದೆ. ಡಿವೈಎಸ್ಪಿ ಯವರು ಸಹ ಕಛೇರಿಯಲ್ಲಿ ಅವರದೇ ಸ್ಥಳೀಯ ಸಂಘಟನೆ ಮುಖಂಡರ ಜೊತೆ ಚರ್ಚಿಸುವುದರಲ್ಲೇ ತುಂಬಾ ಬಿಜಿಯಾಗಿದ್ದರು ಎಂದು ಸಂಸ್ಥೆಯ ಸದಸ್ಯರು ಪೊಲೀಸ್ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑