Tel: 7676775624 | Mail: info@yellowandred.in

Language: EN KAN

    Follow us :


ಜೆಡಿಎಸ್ ನಡೆ ಅಭಿವೃದ್ಧಿ ಕಡೆ ಜೆಡಿಎಸ್ ಪಕ್ಷದ ದಲಿತ ಮುಖಂಡರು

Posted date: 18 May, 2022

Powered by:     Yellow and Red

ಜೆಡಿಎಸ್ ನಡೆ ಅಭಿವೃದ್ಧಿ ಕಡೆ ಜೆಡಿಎಸ್ ಪಕ್ಷದ ದಲಿತ ಮುಖಂಡರು

ಚನ್ನಪಟ್ಟಣ: ಮೇ: 18/22 ಬುಧವಾರ.

ತಾಲ್ಲೂಕಿನ ದಲಿತರ ನಡಿಗೆ ಅಭಿವೃದ್ಧಿ ಕಡೆಗೆ ವಿನಹ ಯೋಗೇಶ್ವರ್ ಕಡೆಗಲ್ಲಾ. ಜೆಡಿಎಸ್ ಪಕ್ಷದಲ್ಲಿರುವ ಎಲ್ಲಾ ದಲಿತ ಮುಖಂಡರಿಗೂ, ಮತದಾರರಿಗೂ ಪಕ್ಷವು ಅಧಿಕಾರದ ಜೊತೆಗೆ ಗೌರವವನ್ನು ನೀಡಿದೆ. ನಾವೆಲ್ಲರೂ ಯಾವುದೇ ಕಾರಣಕ್ಕೂ ಪಕ್ಷವನ್ನು ತೊರೆಯುವುದಿಲ್ಲಾ. ತಾಲ್ಲೂಕಿನ ದಲಿತರ ನಡಿಗೆ ಯೋಗೇಶ್ವರ್ ಕಡೆಗೆ ಎಂದು ಹೇಳಿಕೆ ನೀಡಿರುವ ಮಹನೀಯರು ಈ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ತಾಲ್ಲೂಕು ಜೆಡಿಎಸ್ ಪಕ್ಷದ ಹಲವಾರು ಮುಖಂಡರುಗಳು ಆಗ್ರಹಿಸಿದರು.


ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಎಸ್.ಸಿ.ಶೇಖರ್ ಮತ್ತಿತರ ದಲಿತ ಮುಖಂಡರು, ದಲಿತರ ನಡೆ ಯೋಗೇಶ್ವರ್ ಕಡೆ ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಅವರು ಹಿಂದಕ್ಕೆ ಪಡೆಯಬೇಕು ಎಂದು ಜೆಡಿಎಸ್ ಪಕ್ಷದ ಹಲವಾರು ದಲಿತ ‌ಮುಖಂಡರು ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ 

ದಲಿತ ಮುಖಂಡರು, ಯಾರೋ ಒಂದಿಬ್ಬರು 

ಹೇಳಿಕೆ ನೀಡಿದ ಮಾತ್ರಕ್ಕೆ ಇಡೀ ದಲಿತ 

ಸಮುದಾಯ ಬಿಜೆಪಿ ಕಡೆ ವಾಲುವುದಿಲ್ಲ. ಅವರು 

ಈ ರೀತಿ ಸುಳ್ಳು ಹೇಳಿಕೆಗಳನ್ನು 

ನೀಡುವುದನ್ನು ನಿಲ್ಲಿಸಬೇಕು ಎಂದು 

ಆಗ್ರಹಿಸಿದರು.


ದಲಿತರ ನಡೆ ಯೋಗೇಶ್ವರ್ ಕಡೆ ಎಂಬ 

ಸುಳ್ಳು ಹೇಳಿಕೆ ನೀಡುವ ಮೂಲಕ ದಲಿತ 

ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ 

ಮಾಡುತ್ತಿದ್ದಾರೆ. ಜೆಡಿಎಸ್‍ನ ಎಲ್ಲಾ ದಲಿತ 

ಮುಖಂಡರು ಒಗ್ಗಟ್ಟಾಗಿದ್ದು, ಯಾರೂ ಸಹ 

ಪಕ್ಷ ಬಿಟ್ಟು ಹೋಗುವಂತಹ ಯೋಚನೆ 

ಮಾಡಿಲ್ಲ, ಮಾಡುವುದೂ ಇಲ್ಲಾ. ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ದಲಿತ ಸಮುದಾಯದ ದಿಕ್ಕುತಪ್ಪಿಸುವ ಪ್ರಯತ್ನವನ್ನು 

ಮಾಡಲಾಗುತ್ತಿದೆ. ಕಳೆದ ಚುನಾವಣೆಗಿಂತ 

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 

ಎಚ್.ಡಿ.ಕುಮಾರಸ್ವಾಮಿವರಿಗೆ ಹೆಚ್ಚು ದಲಿತ 

ಮತಗಳು ಬೀಳಲಿದ್ದು, ನಾವೆಲ್ಲರೂ ಅವರನ್ನು 

ಬೆಂಬಲಿಸಲಿದ್ದೇವೆ ಎಂದು ತಿಳಿಸಿದರು.


ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದೇಶ 

ಮತ್ತು ರಾಜ್ಯದಲ್ಲಿ ಅವರು ಯಾವ ರೀತಿ ಆಡಳಿತ 

ನಡೆಸುತ್ತಿದ್ದಾರೆ ಎಂಬುದನ್ನು ಜನ 

ನೋಡಿದ್ದಾರೆ. ದಲಿತರ ಮೀಸಲಾತಿಯನ್ನು 

ಕಡಿತಗೊಳಿಸುವ ಪ್ರಯತ್ನಗಳನ್ನು 

ಮಾಡಲಾಗುತ್ತಿದೆ. ಖಾಸಗೀಕರಣ ಉತ್ತೇಜಿಸುವ 

ಭರದಲ್ಲಿ ಬಡವರು ದಲಿತರ ಬದುಕಿನ ಜತೆ 

ಚೆಲ್ಲಾಟವಾಡಲಾಗುತ್ತಿದೆ ಎಂದು ಆಕ್ರೋಶ 

ವ್ಯಕ್ತಪಡಿಸಿದರು.

ಬಿಜೆಪಿಗೆ ದಲಿತ ಸಮುದಾಯದ ಪರ 

ಯಾವುದೇ ಒಲವಿಲ್ಲ. ಕೇವಲ ಮತಕ್ಕಾಗಿ 

ಮಾತ್ರ ಅವರು ದಲಿತರ ಅಭಿವೃದ್ಧಿಯ 

ಕುರಿತು ಮಾತನಾಡುತ್ತಾರೆ. ಪ್ರಧಾನಿಯವರು ಅವರು ಹಾಕುವ ಸೂಟ್ ಬಣ್ಣಗಳನ್ನೇ ನೋಟಿಗೆ ಇಡುತ್ತಾರೆ. ಇಂಥ ಪಕ್ಷಕ್ಕೆ 

ದಲಿತ ಸಮುದಾಯ ಯಾವುದೇ ಕಾರಣಕ್ಕೂ 

ಬೆಂಬಲ ನೀಡುವುದಿಲ್ಲ. ಜಾತ್ಯಾತೀಕ ನಿಲುವು 

ಹೊಂದಿರುವ ಜೆಡಿಎಸ್ ಪಕ್ಷಕ್ಕೆ ನಮ್ಮ ಬೆಂಬಲ 

ಎಂದು ತಿಳಿಸಿದರು.


ಕುಮಾರಸ್ವಾಮಿಯವರು ಕ್ಷೇತ್ರದ 

ಶಾಸಕರಾದ ನಂತರ ಸಾಕಷ್ಟು ಅಭಿವೃದ್ಧಿ 

ಕಾಮಗಾರಿಗಳನ್ನು ಮಾಡಿದ್ದಾರೆ. ಕ್ಷೇತ್ರದ 

ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು 

ತಂದಿದ್ದಾರೆ. ರಸ್ತೆ, ಚರಂಡಿ ಸೇರಿದಂತೆ 

ಮೂಲಮೂತ ಸೌಕರ್ಯಗಳನ್ನು ಕಲ್ಪಿಸಲು 

ಸಾಕಷ್ಟು ಅನುದಾನ ತಂದಿದ್ದಾರೆ. ಆದ್ದರಿಂದ 

ಜೆಡಿಎಸ್‍ನಲ್ಲಿರುವ ದಲಿತ ಮುಖಂಡರು 

ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ 

ಹೋಗುವುದಿಲ್ಲ. ಬಿಜೆಪಿಯವರು ಇಂಥ 

ಸುಳ್ಳುಗಳನ್ನು ಹಬ್ಬಿಸುವುದನ್ನು 

ನಿಲ್ಲಿಸಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಜೆಡಿಎಸ್ ದಲಿತ ಮುಖಂಡರಾದ ಡಾ ಮಲ್ಲೇಶ್ ದ್ಯಾವಪಟ್ಟಣ, ಕೂಡ್ಲೂರು ಸಿದ್ದರಾಮು, ಕೆಂಗಲ್ 

ಮೂರ್ತಿ, ಕೋಟೆ ಶ್ರೀನಿವಾಸ್, ಅಪ್ಪಗೆರೆ 

ಕುಮಾರಮ್ಮ, ಗಂಗಾಧರ್, ಗಿರೀಶ್, 

ಗೋವಿಂದರಾಜು, ಸಿದ್ದೇಶ್, ಮಾರ್ಚನಹಳ್ಳಿ 

ಪ್ರದೀಪ್ ಮುಂತಾದವರು ಇದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑