Tel: 7676775624 | Mail: info@yellowandred.in

Language: EN KAN

    Follow us :


ಎಸ್ಎಸ್ಎಲ್ಸಿ ಯಲ್ಲಿ ತಾಲ್ಲೂಕಿನಲ್ಲಿ ಶೇ 95.46 ಫಲಿತಾಂಶ

Posted date: 19 May, 2022

Powered by:     Yellow and Red

ಎಸ್ಎಸ್ಎಲ್ಸಿ ಯಲ್ಲಿ ತಾಲ್ಲೂಕಿನಲ್ಲಿ ಶೇ 95.46 ಫಲಿತಾಂಶ

ಚನ್ನಪಟ್ಟಣ: ತಾಲೂಕಿನಲ್ಲಿ ಈ ಬಾರಿ  ಒಟ್ಟು 2821 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ  ಬರೆದಿದ್ದು,  ಅದರಲ್ಲಿ 2693 ವಿದ್ಯಾರ್ಥಿಗಳು  ಉತ್ತೀರ್ಣರಾಗಿರುತ್ತಾರೆ. ಶೇ 95.46 ರಷ್ಟು ಫಲಿತಾಂಶದೊಂದಿಗೆ ಚನ್ನಪಟ್ಟಣ ತಾಲ್ಲೂಕು ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತದೆ.

   ತಾಲ್ಲೂಕಿನ ಒಟ್ಟು ಅರವತ್ತೇಳು  ಪ್ರೌಢಶಾಲೆಗಳಲ್ಲಿ ಈ ಬಾರಿ ತಾಲ್ಲೂಕಿನಲ್ಲಿ 11  ಸರ್ಕಾರಿ ಶಾಲೆಗಳು, 5 ವಸತಿ ಶಾಲೆಗಳು ,6 ಅನುದಾನಿತ ಶಾಲೆಗಳು, 13 ಅನುದಾನ ರಹಿತ ಶಾಲೆಗಳು ಸೇರಿದಂತೆ ಒಟ್ಟು 35 ಶಾಲೆಗಳು  ಶೇ ನೂರರಷ್ಟು ಫಲಿತಾಂಶವನ್ನು ದಾಖಲಿಸಿವೆ.








*ಶೇಕಡ ನೂರರಷ್ಟು ಫಲಿತಾಂಶ ಪಡೆದ  ಸರ್ಕಾರಿ ಶಾಲೆಗಳು:-*

ಸರ್ಕಾರಿ ಪ್ರೌಢಶಾಲೆ ಮಾಕಳಿ, ಸರ್ಕಾರಿ ಪ್ರೌಢಶಾಲೆ ಚಕ್ಕೆರೆ, ಸರ್ಕಾರಿ ಪ್ರೌಢಶಾಲೆ ಹೊನ್ನಾಯಕನಹಳ್ಳಿ, ಸರ್ಕಾರಿ ಪ್ರೌಢಶಾಲೆ ಹಾರೋಕೊಪ್ಪ, ಸರಕಾರಿ ಪ್ರೌಢಶಾಲೆ ಮಂಕುಂದ, ಸರ್ಕಾರಿ ಪ್ರೌಢಶಾಲೆ ಕೃಷ್ಣಾಪುರ, ಕೆಪಿಎಸ್ ಅರಳಾಳುಸಂದ್ರ , ಆದರ್ಶ  ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ, ಸರ್ಕಾರಿ ಪ್ರೌಢಶಾಲೆ ದಶವಾರ, ಸರ್ಕಾರಿ ಪ್ರೌಢಶಾಲೆ ಇಗ್ಗಲೂರು, ಸರ್ಕಾರಿ ಪ್ರೌಢಶಾಲೆ ಟಿಪ್ಪುನಗರ ಶಾಲೆಗಳು ಶೇ ನೂರರಷ್ಟು ಫಲಿತಾಂಶ ಪಡೆಯುವ ಮೂಲಕ ಮೇಲುಗೈ ಸಾಧಿಸಿವೆ.


*ತಾಲ್ಲೂಕಿನ ಎಲ್ಲಾ 5 ವಸತಿ ಶಾಲೆಗಳು ನೂರರಷ್ಟು ಫಲಿತಾಂಶ ದಾಖಲೆ:-*

 ತಾಲ್ಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆ ಎಲೆಕೇರಿ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹೊನ್ನಾಯಕನಹಳ್ಳಿ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹೊನ್ನಾಯಕನಹಳ್ಳಿ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಚಕ್ಕೆರೆ, ಡಾ.ಬಿ. ಆರ್ ಅಂಬೇಡ್ಕರ್ ವಸತಿ ಶಾಲೆ ಚನ್ನಪಟ್ಟಣ ಈ  ಐದು ಶಾಲೆಗಳು ಶೇಕಡಾ ನೂರರಷ್ಟು  ಫಲಿತಾಂಶ ದಾಖಲಿಸಿವ ಮೂಲಕ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದಿವೆ.


*ಶೇಕಡ ನೂರರಷ್ಟು ಫಲಿತಾಂಶ ಪಡೆದ  ಅನುದಾನಿತ ಶಾಲೆಗಳು:-*

 ಶ್ರೀ ಸಿದ್ದರಾಮೇಶ್ವರ ಪ್ರೌಢಶಾಲೆ ಬೇವೂರು, ಶ್ರೀ ಯೋಗನರಸಿಂಹ ಸ್ವಾಮಿ ಪ್ರೌಢಶಾಲೆ ಬೇವೂರು ಮಂಡ್ಯ, ಆನಂದ ಪ್ರೌಢಶಾಲೆ ದೊಡ್ಡಮಳೂರು, ಸಾರ್ವಜನಿಕ ಪ್ರೌಢಶಾಲೆ ಮತ್ತಿಕೆರೆ ಶೆಟ್ಟಿಹಳ್ಳಿ, ಭಾಗ್ಯಶ್ರೀ ಪ್ರೌಢಶಾಲೆ ಮಳೂರುಪಟ್ಟಣ ,ಸಾರ್ವಜನಿಕ ಪ್ರೌಢಶಾಲೆ ನಾಗವಾರ ಗ್ರಾಮದ ಅನುದಾನಿತ ಶಾಲೆಗಳು ಸಹ ದಾಖಲೆ ಬರೆದಿವೆ.


*ಶೇಕಡ ನೂರರಷ್ಟು ಫಲಿತಾಂಶ ಪಡೆದ 13 ಖಾಸಗಿ ಶಾಲೆಗಳು:-*

ನಿವೇದಿತಾ ಪ್ರೌಢಶಾಲೆ, ದಿವ್ಯ ಚೇತನ ಪ್ರೌಢಶಾಲೆ, ಹಾರಿಜಾನ್ ಲೇಕ್ ವ್ಯೂ ಪಬ್ಲಿಕ್ ಶಾಲೆ, ಸಾಧನ ವಿದ್ಯಾಲಯ, ಆಕ್ಸ್ ಫರ್ಡ್, ಚೆನ್ನಾಂಬಿಕಾ ಪ್ರೌಢಶಾಲೆ ಯಲಚಿಪಾಳ್ಯ, ಬೀರೇಶ್ವರ ಗ್ರಾಮಾಂತರ ಪ್ರೌಢಶಾಲೆ ಅಬ್ಬೂರುದೊಡ್ಡಿ, ಬಿಜಿಎಸ್ ಪ್ರೌಢಶಾಲೆ ಜೆ ಬ್ಯಾಡರಹಳ್ಳಿ, ಗ್ಲೋಬಲ್ ಪಬ್ಲಿಕ್ ಸ್ಕೂಲ್ ಮಲ್ಲಯ್ಯನದೊಡ್ಡಿ, ನ್ಯಾಷನಲ್ ಪಬ್ಲಿಕ್ ಸ್ಕೂಲ್, ಬಾಲು ಪಬ್ಲಿಕ್ ಶಾಲೆ, ಸೆಂಟ್  ಆನ್ಸ್ ಬಾಲಕಿಯರ ಆಂಗ್ಲ ಪ್ರೌಢಶಾಲೆ, ವಿಶ್ವಮಾನವ ಪ್ರೌಢಶಾಲೆ ಬೆಳಕೆರೆ, ನಗರದ ಬಿಜೆಎಲ್ ಪಬ್ಲಿಕ್ ಶಾಲೆ ಐದನೇ ಅಡ್ಡರಸ್ತೆ ಶಾಲೆಗಳು ಸಹ ಉತ್ತಮ ಫಲಿತಾಂಶ ಪಡೆದು ತಾಲೂಕಿಗೆ ಕೀರ್ತಿತಂದಿದ್ದಾರೆ.

  

*ಚನ್ನಪಟ್ಟಣ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂಕ  ಪಡೆದ ವಿದ್ಯಾರ್ಥಿಗಳು:-*

*ಹೊನ್ನುಶ್ರೀ 624* ಅಂಕ (ಸೆಂಟ್ ಆನ್ಸ್ ಬಾಲಕಿಯರ ಪ್ರೌಢಶಾಲೆ ಅಪ್ಪಗೆರೆ) 

*ನಿಖಿಲ್ 623* ಅಂಕ  ( ಡಾನ್ ಬಾಸ್ಕೊ ಪ್ರೌಢ ಶಾಲೆ  )

*ಹುಧಾ ಸೇಹರ್ 623* ಅಂಕ (ಬಾಲಕಿಯರ ಪದವಿ ಪೂರ್ವ ಕಾಲೇಜು ಚನ್ನಪಟ್ಟಣ) *ಅಜಯ್ ಹಡಗಲಿ 622* ಅಂಕ  (ಸೇಂಟ್ ಜೋಸೆಫ್ ಪ್ರೌಢಶಾಲೆ), *ಪ್ರಗತಿ ಬಿ.ಆರ್ 622* ಅಂಕ (ಡಾ. ಬಿ .ಆರ್. ಅಂಬೇಡ್ಕರ್ ವಸತಿ ಶಾಲೆ  ಚನ್ನಪಟ್ಟಣ),  *ಜ್ಞಾನೇಂದ್ರ 620* ಅಂಕ (ಬಾಲು ಪಬ್ಲಿಕ್ ಶಾಲೆ), *ಸುಮನಾ ಕರ್ವಿನ್ ಆದಿ 618* ಅಂಕ (ಆದರ್ಶ ವಿದ್ಯಾಲಯ ಮತ್ತಿಕೆರೆ ಶೆಟ್ಟಿಹಳ್ಳಿ, *ಪ್ರಕೃತಿ 618* ಅಂಕ (ಡಾ. ಬಿ .ಆರ್. ಅಂಬೇಡ್ಕರ್ ವಸತಿ ಶಾಲೆ  ಚನ್ನಪಟ್ಟಣ), *ರಕ್ಷಿತಾ 618* ಅಂಕ (ಡಾ. ಬಿ .ಆರ್. ಅಂಬೇಡ್ಕರ್ ವಸತಿ ಶಾಲೆ ಚನ್ನಪಟ್ಟಣ) ಹೆಚ್ಚು ಅಂಕ ಪಡೆದಿದ್ದಾರೆ.


  ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಎನ್ ಮರೀಗೌಡ  ಅವರು ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ, ಸ್ಥೈರ್ಯ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಪ್ರತಿ ತಿಂಗಳು ಸಂಪನ್ಮೂಲ ವ್ಯಕ್ತಿಗಳಿಂದ ವಿಷಯ ಕಾರ್ಯಾಗಾರಗಳನ್ನು ಏರ್ಪಡಿಸಿದ್ದರ ಫಲವಾಗಿ ತಾಲ್ಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಲು ಸಾಧ್ಯವಾಯಿತು. ತಾಲೂಕು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿರುವುದಕ್ಕೆ, ತಾಲ್ಲೂಕಿಗೆ ಅತ್ಯುನ್ನತ ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ, ಉತ್ತೀರ್ಣರಾಗಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮ ಫಲಿತಾಂಶ ಬರಲು ಶ್ರಮಿಸಿದ  ತಾಲ್ಲೂಕಿನ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು, ಸಹಶಿಕ್ಷಕರುಗಳಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳಾದ  ಮರೀಗೌಡ ಮತ್ತು ಎಲ್ಲಾ ಶಾಲೆಯ ಮುಖ್ಯಸ್ಥರು ಹಾಗೂ ಶಿಕ್ಷಕರುಗಳು ಅಭಿನಂದನೆ ಸಲ್ಲಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑