Tel: 7676775624 | Mail: info@yellowandred.in

Language: EN KAN

    Follow us :


ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ

Posted date: 21 May, 2022

Powered by:     Yellow and Red

ಜಿಲ್ಲೆಯಲ್ಲಿ ಕ್ಷಯ ರೋಗ ನಿರ್ಮೂಲನೆ ಮಾಡಲು ಸೂಕ್ತ  ಕ್ರಮ ವಹಿಸಿ: ಚಿಕ್ಕಸುಬ್ಬಯ್ಯ

ರಾಮನಗರ, ಮೇ೨೧: ಕ್ಷಯರೋಗದಿಂದ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ವಿನಾಶಕಾರಿ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು  ಕ್ಷಯ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳು ಜರುಗಬೇಕು ಎಂದು ಮುಖ್ಯ ಯೋಜನಾಧಿಕಾರಿ ಚಿಕ್ಕ ಸುಬ್ಬಯ್ಯ ಅವರು ತಿಳಿಸಿದರು.

ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಜಿಲ್ಲಾ ಕ್ಷಯ  ನಿರ್ಮೂಲನಾಧಿಕಾರಿಗಳ  ಕಚೇರಿ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ  ಕ್ಷಯ  ವೇದಿಕೆ ಸಮಿತಿ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಕ್ಷಯರೋಗ ಪತ್ತೆ ಹಾಗೂ ಕ್ಷಯ ರೋಗ ಲಕ್ಷಣ ಕಂಡು ಬಂದವರಿಗೆ ಆರಂಭಿಕ ಸೂಕ್ತ ಚಿಕಿತ್ಸೆ ನೀಡುವುದರ ಮೂಲಕ ಕ್ಷಯರೋಗದ ನಿರ್ಮೂಲನೆ ಮಾಡಬಹುದು ಎಂದರು.

ಜಿಲ್ಲಾ ಅರೋಗ್ಯಧಿಕಾರಿ ಡಾ ನಿರಂಜನ್ ಅವರು ಮಾತನಾಡಿ ಕ್ಷಯರೋಗದ ಆರಂಭಿಕ ತಪಾಸಣೆ, ಪರೀಕ್ಷೆಗೆ ಒಳಗಾದರೆ ಶೀಘ್ರವೇ ಗುಣಮುಖರಾಗಬಹುದು. ಕ್ಷಯ ರೋಗ ಮತ್ತೊಬ್ಬರಿಗೆ ಹರಡುವುದನ್ನು ತಪ್ಪಿಸಬಹುದು. ಈ ಬಗ್ಗೆ ಶಾಲಾ-ಕಾಲೇಜು ಸೇರಿದಂತೆ ಸಾರ್ವಜನಿಕವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ ಕ್ಷಯ  ರೋಗಿಗಳಿಗೆ  ಪ್ರತ್ಯೇಕ  ಬೆಡ್ ವ್ಯವಸ್ಥೆ ಕಲ್ಪಿಸಿಬೇಕು ಎಂದರು.

ಕ್ಷಯರೋಗ ಪ್ರತಿನಿಧಿಯಾದ ಸ್ಪೂರ್ತಿ ಅವರು ಮಾತನಾಡಿ ಮಕ್ಕಳಲ್ಲಿ ಕ್ಷಯರೋಗ ಪತ್ತೆಗೆ ಸ್ಯಾಂಪಲ್ ಸಂಗ್ರಹಿಸುವುದು ಕಷ್ಟಕರವಾಗಿದೆ. ಮಕ್ಕಳ ತಜ್ಞರು ವಿಶೇಷ ಕಾಳಜಿಯಿಂದ ಈ ಕ್ರಮ  ಕೈಗೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಹೆಚ್ ಐ ವಿ ಸೋಂಕು ಹೊಂದಿರುವ ಗರ್ಭಿಣಿಯರಿಗೆ ಹೆರಿಗೆ ಸೌಲಭ್ಯವನ್ನು ಒದಗಿಸುವಂತೆ ಮಾಡಬೇಕು ಎಂದರು. ಜಿಲ್ಲೆಯಲ್ಲಿ ಪ್ರತ್ಯೇಕ ರಕ್ತ ನಿಧಿ ಸ್ಥಾಪಿಸಿಕೊಡಬೇಕು ಎಂದು ಡಿ. ಟಿ. ಓ ಕುಮಾರ್ ಅವರು  ಸಭೆಗೆ  ಮಾಹಿತಿ  ನೀಡಿದರು.


ಸಭೆಯಲ್ಲಿ ಸರ್ವೇಕ್ಷಣಾಧಿಕಾರಿ  ಡಾ ಕಿರಣ್, ಜಿಲ್ಲಾ ಅರೋಗ್ಯ ಶಿಕ್ಷಣಾಧಿಕಾರಿ ಬಿ. ಎಸ್ ಗಂಗಾಧರ್,  ತಾಲ್ಲೂಕು ಅರೋಗ್ಯಧಿಕಾರಿಗಳು,  ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆ  ಅಧಿಕಾರಿಗಳು, ತಾಲ್ಲೂಕು ಆಸ್ಪತ್ರೆ ವೈದ್ಯಧಿಕಾರಿಗಳು, ನೋಡಲ್ ಅಧಿಕಾರಿಗಳು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑