Tel: 7676775624 | Mail: info@yellowandred.in

Language: EN KAN

    Follow us :


ಜೂನ್ 19ರಂದು ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

Posted date: 17 Jun, 2022

Powered by:     Yellow and Red

ಜೂನ್ 19ರಂದು ಚನ್ನಪಟ್ಟಣದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ

ಚನ್ನಪಟ್ಟಣ: ಕದಂಬ ಸೈನ್ಯ ಹಾಗೂ ರಾಮನಗರ ಜಿಲ್ಲಾ ಕುಸ್ತಿ ಸಂಘದ ಸಂಯುಕ್ತಾಶ್ರಯದಲ್ಲಿ ಜೂ. 19ರ ಭಾನುವಾರ ನಗರದ ಬಾಲಕರ ಪದವಿಪೂರ್ವ ಕಾಲೇಜು ಆವರಣದಲ್ಲಿ ರಾಜ್ಯ ಮಟ್ಟದ 

ಕಾಟಾ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಪಂದ್ಯಾವಳಿಯ ಆಯೋಜಕರಾದ ಕದಂಬ ಸೈನ್ಯ ರಾಜ್ಯ 

ಸಂಚಾಲಕ ಶಿವಕುಮಾರ್ ಹಾಗೂ ಜಿಲ್ಲಾಧ್ಯಕ್ಷ ರಾಂಪುರ ಉಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕದಂಬ ಸೈನ್ಯ ಹಾಗೂ ರಾಮನಗರ ಜಿಲ್ಲಾ ಕುಸ್ತಿ ಸಂಘದ ವತಿಯಿಂದ ಚನ್ನಪಟ್ಟಣದ ಹಿರಿಯ ಪೈಲ್ವಾನರ ಸವಿನೆನಪಿಗಾಗಿ ಈ ರಾಜ್ಯ ಮಟ್ಟದ ಪುರುಷ ಹಾಗೂ ಮಹಿಳಾ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯ 

ಪ್ರಯುಕ್ತ ಬೆಳಿಗ್ಗೆ 9 ಗಂಟೆಗೆ ನಗರದ 

ದೊಡ್ಡಪ್ಪಯ್ಯನ ಗರಡಿಮನೆಯಲ್ಲಿ ಪೂಜೆ ಸಲ್ಲಿಸಿ, ಹಿರಿಯ ಪೈಲ್ವಾನರಾದ ಕಾಡಯ್ಯರವರಿಂದ ಪಂದ್ಯಾವಳಿ ನಡೆಯುವ ಸ್ಥಳಕ್ಕೆ ಜ್ಯೋತಿ ತರಲಾಗುವುದು.


ತದನಂತರ 10.30 ರಿಂದ ಪಂದ್ಯಾವಳಿಗಳು 

ಆರಂಭಗೊಳ್ಳಲಿದ್ದು, ಈ ಪಂದ್ಯಾವಳಿಯಲ್ಲಿ ರಾಜ್ಯದ ನಾನಾ ಭಾಗದ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ರಾಜ್ಯಮಟ್ಟದ 

30 ಜೋಡಿಗಳ ರೋಚಕ ಕಾಟಾ ಮಟ್ಟಿ ಕುಸ್ತಿ 

ಪಂದ್ಯಗಳು ನಡೆಯಲಿವೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ 

ಉದ್ಘಾಟಿಸಲಿದ್ದು, ಕಾಂಗ್ರೆಸ್ ನಾಯಕ ಪ್ರಸನ್ನ ಪಿ ಗೌಡ ಪಂದ್ಯಾವಳಿಗಳಿಗೆ ಚಾಲನೆ ನೀಡಲಿದ್ದಾರೆ. ರಾಮನಗರ ಜಿಲ್ಲಾ ಕುಸ್ತಿ ಸಂಘದ ಅಧ್ಯಕ್ಷ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಕದಂಬ ಸೈನ್ಯ ರಾಜ್ಯಾಧ್ಯಕ್ಷ ಬೇಕ್ರಿ ರಮೇಶ್, ನಗರಸಭಾ ಅಧ್ಯಕ್ಷ ಪ್ರಶಾಂತ್, ಜೆಡಿಎಸ್ ಮುಖಂಡರಾದ ಹಾಪ್‍ಕಾಮ್ಸ್ ದೇವರಾಜ್, 

ಎಚ್.ಸಿ.ಜಯಮುತ್ತು, ಕುಕ್ಕೂರುದೊಡ್ಡಿ ಜಯರಾಮು ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಸಂಜೆ ನಾಲ್ಕು ಗಂಟೆಗೆ ಪಂದ್ಯಾವಳಿಯ ಸಮಾರೋಪ ಸಮಾರಂಭ ನಡೆಯಲಿದ್ದು, ಈ 

ಉದ್ಘಾಟನೆಯನ್ನು ಮಾಜಿ ಸಚಿವ, ಮೇಲ್ಮನೆ ಸದಸ್ಯ ಸಿ.ಪಿ.ಯೋಗೇಶ್ವರ್ ನಡೆಸಿಕೊಡಲಿದ್ದಾರೆ. ಕಾಂಗ್ರೆಸ್ ಮುಖಂಡರಾದ ಶರತಚಂದ್ರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ ಸೇರಿದಂತೆ ಹಲವು ಗಣ್ಯರು ಪಂದ್ಯಾವಳಿಯ ವಿಜೇತರಿಗೆ ಬಹುಮಾನ ವಿತರಿಸಲಿದ್ದಾರೆ. ಕಾರ್ಯಕ್ರಮದ ಅಂಗವಾಗಿ ವಿವಿಧ 

ಕ್ಷೇತ್ರದ ಗಣ್ಯರಿಗೆ ಕದಂಬ ಸೇವಾರತ್ನ ಪ್ರಶಸ್ತಿ ನೀಡಿ 

ಗೌರವಿಸಲಾಗುವುದು. 25 ವರ್ಷಗಳ ನಂತರ 

ನಡೆಯುತ್ತಿರುವ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗೆ ತಾಲೂಕಿನ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ 

ಯಶಸ್ವಿಗೊಳಿಸುವಂತೆ ಕದಂಬ ಸೈನ್ಯ ರಾಜ್ಯ ಸಂಚಾಲಕ ಶಿವಕುಮಾರ್ ಹಾಗೂ ಜಿಲ್ಲಾಧ್ಯಕ್ಷ ರಾಂಪುರ ಉಮೇಶ್ ಮನವಿ ಮಾಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑