Tel: 7676775624 | Mail: info@yellowandred.in

Language: EN KAN

    Follow us :


ಬುಕ್ಕಸಾಗರ ಗ್ರಾಮದ ಬಳಿ ದರೋಡೆ ಮಾಡಿದ ಕಳ್ಳರನ್ನು ಬಂಧಿಸಿದ ಅಕ್ಕೂರು ಪೋಲಿಸರು

Posted date: 27 Mar, 2023

Powered by:     Yellow and Red

ಚನ್ನಪಟ್ಟಣ, ಮಾ.20:  ಕೆಲ ದಿನಗಳ 

ಹಿಂದೆ ಅಕ್ಕೂರು ಪೊಲೀಸ್ ಠಾಣಾ ವ್ಯಾಪ್ತಿಯ ಬುಕ್ಕಸಾಗರದ 

ಬಳಿ ನಡೆದ ದರೋಡೆ ಪ್ರಕರಣವನ್ನು ಬೇಧಿಸಿದ ಗ್ರಾಮಾಂತರ 

ವೃತ್ತ ನಿರೀಕ್ಷಕರ ತಂಡ ಐದು ಮಂದಿ ಹೈನಾತಿ ಆರೋಪಿಗಳನ್ನು 

ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಪೊಲೀಸರ ಬಂಧನಕ್ಕೆ ಒಳಗಾಗಿರುವ ಹೈನಾತಿ 

ದರೋಡೆಕೋರರನ್ನು ಅಕ್ಕೂರಿನ ಆಟೋಚಾಲಕ ಆನಂದ್ 

(37)), ಎಸ್.ಎಂ.ಹಳ್ಳಿಯ ಆಟೋಚಾಲಕ ನಾಗ ಆಲಿಯಾಸ್ 

ಸತ್ತಾರ್ (35), ಚನ್ನಪಟ್ಟಣದ ನಿವಾಸಿಗಳಾದ ನರಸಿಂಹ 

(34),ವಿಷ್ಣು (34), ರೇಣುಕುಮಾರ್ (40) ಬಂಧಿತರಾಗಿದ್ದಾರೆ.


ಈ ಐದುಮಂದಿ ದರೋಡೆಕೋರರು ಬುಕ್ಕಸಾಗರದ 

ಬಳಿ ನಗರದ ಎ ಜಿ ಸ್ವಾಮಿ (ಎಜಿಎಸ್‍)ಗೆ ಸೇರಿದ ಕೋಳಿ ಸರಬರಾಜು 

ಮಾಡಿದ ಹಣವನ್ನು ಸಂಗ್ರಹಣೆ ಮಾಡಿಕೊಂಡು ಮಾರುತಿ 

ಓಮ್ನಿಯಲ್ಲಿ ಬರುವಾಗ ವಾಹನವನ್ನು ಅಡ್ಡಹಾಕಿ, ಕಾರಿನಲ್ಲಿದ್ದ 

ಚಾಲಕ ಹಾಗೂ ರೈಟರ್ ಗೆ ಕಣ್ಣಿಗೆ ಖಾರದಪುಡಿ ಎರಚಿ ಹಾಗೂ 

ಮಾರಕಾಯುಧಗಳಿಂದ ಹಲ್ಲೆ ನಡೆಸಿ, ರೈಟರ್ ಕೈಯಲ್ಲಿದ್ದ 

ಲಕ್ಷಾಂತರರೂ ಹಣವನ್ನು ಕಿತ್ತು ಕತ್ತಲೆಯಲ್ಲಿ ಪರಾರಿಯಾಗಿದ್ದರು.


ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 

ದೂರು ದಾಖಲಾಗಿತ್ತು, ದೂರು ದಾಖಲಿಸಿಕೊಂಡ ಗ್ರಾಮಾಂತರ 

ವೃತ್ತ ನಿರೀಕ್ಷಕ ಟಿ ಟಿ ಕೃಷ್ಣಪ್ಪ ತಮ್ಮದೇ ತಂಡವನ್ನು ಕಟ್ಟಿಕೊಂಡು 

ದರೋಡೆಕೋರರ ಬೇಟೆಗೆ ಬಲೆ ಬೀಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್‍ರೆಡ್ಡಿ, ತಾಲ್ಲೂಕು 

ಪೊಲೀಸ್ ಉಪವಿಭಾಗಾಧಿಕಾರಿ ಮೋಹನ್‍ಕುಮಾರ್ 

ಮಾರ್ಗದರ್ಶನದಲ್ಲಿ ದರೋಡೆಕೋರರ ಬಗ್ಗೆ ಹಲವಾರು 

ಮಾಹಿತಿಯನ್ನು ಕಲೆ ಹಾಕಿದ ಗ್ರಾಮಾಂತರ ವೃತ್ತ 

ನಿರೀಕ್ಷಕ ಕೃಷ್ಣಪ್ಪ, ಅಕ್ಕೂರು ಪಿಎಸ್ಐ ಬಸವರಾಜು ಮತ್ತು ತಂಡದವರು ದರೋಡೆ ಮಾಡಿ ಏನು ಗೊತ್ತಿಲ್ಲದಂತೆ 

ಓಡಾಡುತ್ತಿದ್ದ ಆರೋಪಿಗಳನ್ನು ತಮ್ಮ ವಶಕ್ಕೆ ತಗೆದುಕೊಳ್ಳುವಲ್ಲಿ 

ಯಶಸ್ವಿಯಾಗಿದ್ದಾರೆ.


ಅನಿವಾರ್ಯವಾಗಿ ದರೋಡೆಗೆ ಇಳಿದಿದ್ದ ಈ ಐದು 

ಮಂದಿ ದರೋಡೆಕೋರರಲ್ಲಿ ಕೆಲವರು ವಿಪರೀತ ಸಾಲಕ್ಕೆ 

ಒಳಗಾಗಿದ್ದರೆ, ಕೆಲವರು ತಮ್ಮ ಅನೈತಿಕ ಸಂಬಂಂಧಗಳ 

ಮೋಜುಮಸ್ತಿಯ ಹಣಕ್ಕಾಗಿ ದರೋಡೆಗೆ ಕೈಹಾಕಿ ಹಲವಾರು 

ಕಡೆ ಯಶಸ್ವಿಯಾಗಿದ್ದರು ಎಂದು ಹೇಳಲಾಗಿದೆ.


ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 

ದೂರು ದಾಖಲಾಗಿದ್ದು, ಐದು ಮಂದಿ ಆರೋಪಿಗಳನ್ನು 

ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑