Tel: 7676775624 | Mail: info@yellowandred.in

Language: EN KAN

    Follow us :


ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದಲ್ಲಿ ಖಾಸಗಿ ವ್ಯಕ್ತಿಯಿಂದ ಬೇಲಿ

Posted date: 04 Apr, 2023

Powered by:     Yellow and Red

ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದಲ್ಲಿ ಖಾಸಗಿ ವ್ಯಕ್ತಿಯಿಂದ ಬೇಲಿ

ಚನ್ನಪಟ್ಟಣ.ಮಾ.೨೮: ಸರ್ಕಾರಿ ಜಾಗಗಳ ಒತ್ತುವರಿ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಹೆಚ್ಚಾಗುತ್ತಿದ್ದು ಇದಕ್ಕೆ ನಿದರ್ಶನವೆಂಬಂತೆ ನಗರದ ಹೊರವಲಯದಲ್ಲಿರುವ ಸರ್ಕಾರಿ ರೇಷ್ಮೆ ತರಬೇತಿ ಕೇಂದ್ರದ ಆವರಣದ ಮುಂಭಾಗ ಹೈವೇ ರಸ್ತೆಯ ಪಕ್ಕದಲ್ಲಿರುವ ತರಬೇತಿ ಕೇಂದ್ರದ ತಡೆಗೋಡೆ ಸೇರಿಸಿಕೊಂಡು ೧ ಎಕರೆ ೨೦ ಗುಂಟೆ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡು ಒಂದೇ ದಿನದಲ್ಲಿ ತಂತಿ ಬೇಲಿ ನಿರ್ಮಿಸಿ, ಒಂದು ಶೆಡ್ ಸಹ ನಿರ್ಮಿಸಿರುವ ಘಟನೆ ನಡೆದಿದೆ.


ನೂರಾರು ವರ್ಷಗಳ ಇತಿಹಾಸವಿರುವ ಈ ಸರ್ಕಾರಿ ಜಾಗವನ್ನು ಏಕಾ ಏಕಿ ಖಾಸಗಿ ವ್ಯಕ್ತಿಗಳಾದ ಡಾ ಎಫ್ಎಂ ಮೊಯಿದ್ದೀನ್ ಅಹಮದ್ ಹಾಗೂ ಹೊಂಗನೂರು ಪ್ರಕಾಶ್ ಮತ್ತಿತರರು ನುಸುಳಿ ಈ ರೀತಿಯಲ್ಲಿ ವಶಪಡಿಸಿಕೊಂಡಿರುವುದು ತುಕ್ಕು ಹಿಡಿದಿರುವ ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎನ್ನಬಹುದು. ಈ ತರಬೇತಿ ಆವರಣದಲ್ಲಿ ಮೂರು ಮುಖ್ಯ ಅಂಗ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿದ್ದು, ಅಧಿಕಾರಿಗಳು ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂಬ ಬೇಜಾವಬ್ದಾರಿ ವಹಿಸಿದ್ದರಿಂದಲೇ ಈ ರೀತಿಯ ಅಕ್ರಮನುಸುಳಿವಿಕೆಗೆ ಕಾರಣವಾಗಿದೆ ಎನ್ನಬಹುದು.


ಡಾ.ಎಫ್.ಎಂ ಮೊಹಿದ್ದೀನ್ ಅಹಮದ್ ಎಂಬುವವರು ಕಳೆದ ೧೨ರಂದು ಅಕ್ರಮವಾಗಿ ತರಬೇತಿ ಕೇಂದ್ರದ ಜಾಗಕ್ಕೆ ನುಸುಳಿ ಈ ಕೃತ್ಯ ಎಸಗಿದ್ದಾರೆ ಎಂದು ಅಧಿಕಾರಿಗಳು ೧೪ರಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಈ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು ಇದಕ್ಕೆ ಇನ್ನು ಮುಕ್ತಿ ಯಾವಾಗ ದೊರೆಯುತ್ತದೆಯೋ ಕಾಯುವುದಷ್ಟೇ ತಾಲ್ಲೂಕಿನ ಜನರ ಕೆಲಸವಾಗಿದೆ.


ಸಾರ್ವಜನಿಕವಾಗಿ ಕಣ್ಣಿಗೆ ಕಾಣುವ ಸರ್ಕಾರಿ ಜಾಗಗಳಿಗೆ ಈ ರೀತಿಯ ದುರವಸ್ಥೆ ಉಂಟಾದರೆ ಇನ್ನು ಕಾಣದ ಜಾಗಗಳು ಇನ್ನೆಷ್ಟು ಒತ್ತುವರಿಯಾಗಿಬೇಡ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ನ್ಯಾಯಾಲಯದ ಮುಂದೆ ಪ್ರಕರಣ ಹೋದರೆ ಎಷ್ಟು ವರ್ಷಗಳಾಗುತ್ತವೋ ಎಂಬುದು ಯಾರಿಗೂ ತಿಳಿಯುವುದಿಲ್ಲ. ಸಂಬಂಧಿಸಿದ ಉನ್ನತ ಅಧಿಕಾರಿಗಳು ಭೇಟಿ ನೀಡಿ, ಶೀಘ್ರವಾಗಿ ದಾಖಲೆಗಳನ್ನು ಪರಿಶೀಲಿಸಿ, ತಂತಿ ಬೇಲಿ ಮತ್ತು ಶೆಡ್ ತೆರವುಗೊಳಿಸಬೇಕು. ಅಕ್ರಮವಾಗಿ ನಿರ್ಮಿಸಿದ ವ್ಯಕ್ತಿಗಳಿಗೆ ಹಾಗೂ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಕಾನೂನು ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರು ಒತ್ತಾಸೆಯಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑