Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ: ಬೆಂಗಳೂರಿನ ಪ್ರವಾಸಿಗರನ್ನು ಸೆಳೆಯಲು ಯೋಜನೆ : ಡಾ.ಸಿ.ಎನ್ ಅಶ್ವತ್ಥನಾರಾಯಣ

Posted date: 29 Jul, 2022

Powered by:     Yellow and Red

ರಾಮನಗರ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ: ಬೆಂಗಳೂರಿನ ಪ್ರವಾಸಿಗರನ್ನು ಸೆಳೆಯಲು ಯೋಜನೆ : ಡಾ.ಸಿ.ಎನ್ ಅಶ್ವತ್ಥನಾರಾಯಣ

ಗಾಳಿಬೋರೆ (ರಾಮನಗರ): ಕಾವೇರಿ ವನ್ಯಜೀವಿ ಧಾಮದ ನಿಸರ್ಗದ ಮಡಿಲಿನಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಿದ್ದ ‘ಪ್ರವಾಸೋದ್ಯಮದ ಹೂಡಿಕೆದಾರರ ಸಮಾವೇಶ’ ಯಶಸ್ವಿಯಾಗಿ ನಡೆಯಿತು. ರಾಜ್ಯ ಮಟ್ಟದ ಸಮಾವೇಶದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹೂಡಿಕೆದಾರರು ಆಗಮಿಸಿದ್ದು ಮಾತ್ರವಲ್ಲಾ, ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತಿರುವವರು ಸಹ ‘ಭಾಗವಹಿಸಿ, ಸಲಹೆಗಳನ್ನು ನೀಡಿದ್ದು ವಿಶೇಷವಾಗಿತ್ತು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನಕಪುರದ ಸಂಗಮದ ಬಳಿಯಲ್ಲಿನ ಗಾಳಿಬೋರೆ ಫಿಶಿಂಗ್ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದ ಸಮಾವೇಶವು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರ ಕನಸು ಎಂಬುದು ಮತ್ತೊಂದು ವಿಶೇಷ.


ಒಟ್ಟು ನಾಲ್ಕು ಹಂತಗಳಲ್ಲಿ ರೂಪಿಸಿರುವ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಂಚನಬೆಲೆ ಡ್ಯಾಂ, ಕಣ್ವ, ಇಗ್ಗಲೂರು, ಸಂಗಮ ಪ್ರದೇಶಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಹಸ ಕ್ರೀಡೆ, ಟ್ರಕ್ಕಿಂಗ್, ಸೈಕ್ಲಿಂಗ್ ಮಾರ್ಗಗಳನ್ನು ಸಿದ್ದಪಡಿಸಲಾಗಿದೆ. ಕೃಷಿ ಪ್ರವಾಸೋದ್ಯಮ, ಸಿಲ್ಕ್ ಟೂರಿಸಂ,  ವೈನ್ ಟೂರಿಸಂ ಹೀಗೆ ವಿವಿಧ ಹಂತಗಳಲ್ಲಿ ಜಿಲ್ಲಾಡಳಿತ ಈಗಾಗಲೇ ರೂಪು ರೇಷೆ ಸಿದ್ದಪಡಿಸಿದೆ. 

ಜಿಲ್ಲೆಯಲ್ಲಿನ ಬೆಟ್ಟಗುಡ್ಡಗಳು, ವನ್ಯಜೀವಿಧಾಮ, ಜಲಾಶಯಗಳು, ದೇವಾಲಯಗಳು, ವಂಡರ್‌ಲಾ..ಹೀಗೆ ನಾನಾ ರೀತಿಯ ಪ್ರಕೃತಿ ಸೊಬಗಿನೊಂದಿಗೆ, ವೈವಿಧ್ಯವನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ಈ ಎಲ್ಲಾ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು, ವಾರಂತ್ಯದಲ್ಲಿ ಮೈಸೂರು, ಮಡಿಕೇರಿ, ಚಾಮರಾಜನಗರದ ಕಡೆಗೆ ಹೋಗುವ ಬೆಂಗಳೂರಿಗರನ್ನು ರಾಮನಗರ ಜಿಲ್ಲೆಯ ಕಡೆ ಸೆಳೆಯುವ ವಿನೂತನ ಪ್ರಯತ್ನ ಇದಾಗಿದೆ.


*೧೦೦ಕ್ಕೂ ಹೆಚ್ಚು ಹೂಡಿಕೆದಾರರು ಭಾಗಿ* ೧೦೦ಕ್ಕೂ ಹೆಚ್ಚು ಮಂದಿ ಹೂಡಿಕೆದಾರರು ಭಾಗಿಯಾಗಿದ್ದ ಸಮಾವೇಶದಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ಜಿಲ್ಲಾಕಾರಿಗಳು ವಿವರಣೆ ನೀಡಿದರು. ಈ ಬಗ್ಗೆ ಆಸಕ್ತಿ ವಹಿಸಿದ ಹೂಡಿಕೆದಾರರು, ನಮಗೆ ಸರ್ಕಾರದಿಂದ ಸೌಕರ್ಯಗಳನ್ನು ನೀಡಿ. ಹೋಟೆಲ್ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ನೀಡಿದರೆ, ಉದ್ಯೋಗದೊಂದಿಗೆ ಪ್ರವಾಸಿ ತಾಣಗಳನ್ನು ಅಭಿವೃದ್ಧಿ ಪಡಿಸುತ್ತೆವೆ ಎಂದು ಭರವಸೆ ನೀಡಿದರು. ಈಗಿನ ಜಿಲ್ಲಾ ಮಟ್ಟದ ಅಕಾರಿಗಳು ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಅವರ ಸಹಕಾರ ಇದ್ದರೆ ಅಭಿವೃದ್ಧಿ ಸಾಧ್ಯ ಎಂದು ಕೆಲ ಉದ್ದಿಮೆದಾರರು ಅಭಿಪ್ರಾಯಗಳನ್ನು ಹಂಚಿಕೊಂಡರು.

 

ಜಿಲ್ಲಾ ಮಟ್ಟದಲ್ಲಿ ಸಿಂಗಲ್ ವಿಂಡೋ ಮಾದರಿಯಲ್ಲಿ ಸೌಲಭ್ಯಗಳನ್ನು ನೀಡಬೇಕು. ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಹಾಗೂ ಬೆಂಗಳೂರಿಗೆ ಕೇವಲ ೫೦ ಕಿಮಿ ದೂರದಲ್ಲಿ ರಾಮನಗರ ಇರುವುದರಿಂದ ಹೂಡಿಕೆದಾರರಿಗೆ ಇದು ವಿಫುಲ ಅವಕಾಶಗಳನ್ನು ನೀಡಲಿದೆ. ಆದರೆ, ಯೋಜನಾ ಪ್ರಾಧಿಕಾರದಿಂದ ಪ್ರತಿ ಎಕರೆಗೆ ಅಪ್ರೂವಲ್ ಪಡೆಯಲು ೮ ಲಕ್ಷ ಖರ್ಚಾಗಲಿದೆ . ಈಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಿಲಾಂದ್ರ ರೆಸಾರ್ಟ್‌ನ ಮಾಲೀಕ ರಮೇಶ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪ್ರವಾಸೋದ್ಯಮ ಇಲಾಖೆ ಅಕಾರಿಗಳು ಸಹ ಪ್ರವಾಸೋದ್ಯಮ ನೀತಿ, ಇಲಾಖೆಯಿಂದ ನೀಡುವ ಸಬ್ಸಿಡಿ ಕುರಿತು ವಿವರಣೆ ನೀಡಿದರು.


*ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಮಾತನಾಡಿ, ಪ್ರವಾಸೋದ್ಯಮ ದಲ್ಲಿ ಹೆಚ್ಚಿನ ಉದ್ಯೋಗದೊಂದಿಗೆ ಸಮಾನ ಅವಕಾಶಗಳು ದೊರೆಯಲಿವೆ.  ಜಿಲ್ಲೆಯ ಪ್ರತಿ ಗ್ರಾಮಗಳು ಹೆಸರು ವಾಸಿಯಾಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮ ಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಯಲಿದೆ ಎಂದರು.*


ಜಿಲ್ಲೆಯಲ್ಲಿನ ಪ್ರತಿ ಮನೆಯಲ್ಲಿಯೂ, ಕೌಶಲ್ಯ ಹೆಚ್ಚಿದೆ. ಹೀಗಾಗಿ ಅದ್ಬುತ ಶಕ್ತಿ ಇರುವ ರಾಮನಗರ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕಿದೆ. ಉತ್ಪನ್ನಗಳನ್ನು ಬ್ರ್ಯಾಂಡ್ ಮಾಡಲು ಅವಕಾಶ ಇದೆ. ಪ್ರತ್ಯೇಕತೆ ಎಂಬ ಅಂಶವನ್ನೆ ಕಿತ್ತು ಹಾಕಲಾಗುತ್ತಿದೆ. ‘ಈ ವಿಷಯದಲ್ಲಿ ಇಡೀ ಜಿಲ್ಲೆ ಪ್ರವಾಸಿ ಹಬ್ ಎಂಬಾಗಬೇಕು ಎಂಬ ಉದ್ದೇಶ ನಮ್ಮದು ಎಂದರು.


ಬೆಂಗಳೂರಿಗರು ದೂರದ ತಾಣಗಳಿಗೆ ಹೋಗುವ ಬದಲು, ಜಿಲ್ಲೆಯಲ್ಲಿಯೇ ಉಳಿದುಕೊಳ್ಳುವ  ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ಎಲ್ಲ ಅಕಾರಿಗಳು ಸಹಕಾರ ನೀಡುತ್ತಿದ್ದು, ಸ್ಥಳೀಯರಿಗೆ ಉದ್ಯೋಗ ನೀಡುವ ಕೆಲಸವು ನಡೆಯಲಿದೆ.


ಗಾಳಿಬೋರೆ ಪಿಶಿಂಗ್ ಕ್ಯಾಂಪ್‌ನಿಂದ ದೋಣಿಯಲ್ಲಿ ತೆರೆಳಿದ ಅಶ್ವತ್ಥ್ ನಾರಾಯಣ್, ಸುಮಾರು ೮ರಿಂದ ೯ ಕಿ.ಮೀ ಕಾವೇರಿ ಮಡಿಲಿನಲ್ಲಿ ಪ್ರಯಾಣಿಸಿ, ಸಂಗಮದವರೆಗೂ ಪ್ರಕೃತಿ ಸೌಂದರ್ಯ ಸವಿದರು. 

ಈ ವೇಳೆ, ಜಿಲ್ಲಾಕಾರಿ ಅವಿನಾಶ್ ಮೆನನ್, ಜಿಲ್ಲಾ ಪೊಲೀಸ್ ವರಿಷ್ಠಕಾರಿ ಕೆ.ಸಂತೋಷ್ ಬಾಬು, ಈ ಹಿಂದೆ ಜಿಲ್ಲೆಗೆ ಸಾಕಷ್ಟು ಕೊಡುಗೆ ನೀಡಿದ್ದ ಜಿಪಂ ಮಾಜಿ ಸಿಇಓ ಆಗಿದ್ದ ಇಕ್ರಮ್ ಸಹ ವೇದಿಕೆಯಲ್ಲಿದ್ದರು.


*ಕೇರಳದಲ್ಲಿ ಪ್ರವಾಸಿಗರನ್ನು ಆರ್ಕಷಿಸಲು ಜಟಾಯು ಮಾಡಿದ್ದಾರೆ. ಅದೇ ಮಾದರಿಯಲ್ಲಿ ರಾಮನಗರದಲ್ಲಿಯು ಏನಾದರೂ ವಿಶೇಷ ಮಾಡಬಹುದು. ಇಲ್ಲಿ, ಜಾಗ, ಹೋಟೆಲ್ ಇದ್ದರೆ ಸಾಕು. ಪ್ರವಾಸಿಗರನ್ನು ಸುಲಭವಾಗಿ ಸೆಳೆಯಬಹುದು ಎಂಬುದು ಸಚಿವರ ಕನಸಾಗಿದೆ.*


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑