Tel: 7676775624 | Mail: info@yellowandred.in

Language: EN KAN

    Follow us :


ವಿಶ್ವಶಾಂತಿಗಾಗಿ ಹಮ್ಮಿಕೊಂಡಿರುವ ಪಂಚಶೀಲ ಪಾದಯಾತ್ರೆಗೆ ಚಾಲನೆ ನೀಡಿದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಸಿ.ಪಿ.ಯೋಗೇಶ್ವರ್

Posted date: 01 Aug, 2022

Powered by:     Yellow and Red

ವಿಶ್ವಶಾಂತಿಗಾಗಿ ಹಮ್ಮಿಕೊಂಡಿರುವ ಪಂಚಶೀಲ ಪಾದಯಾತ್ರೆಗೆ ಚಾಲನೆ ನೀಡಿದ ಶ್ರೀಜ್ಞಾನಪ್ರಕಾಶ ಸ್ವಾಮೀಜಿ, ಸಿ.ಪಿ.ಯೋಗೇಶ್ವರ್

Channapatna: Shri Gnanaprakash Swamiji, CP Yogeshwar launched the Panchasheel Padayatra for world peace.

ಚನ್ನಪಟ್ಟಣ: ಭಗವಾನ್ ಬುದ್ಧ ವಿಶ್ವಕ್ಕೆ ಜ್ಞಾನದ ಬೆಳಕು ನೀಡಿದವರು. ಇಂದು ಅವರನ್ನು ಅನುಸರಿಸುವ ಮೂಲಕ ನಾವೆಲ್ಲರೂ ಜ್ಞಾನದ ಬೆಳಕನ್ನು ಪಡೆದುಲೊಳ್ಳೋಣಾ, ಎಲ್ಲರ ಬಾಳಿನಲ್ಲೂ ಶಾಂತಿ, ನೆಮ್ಮದಿ, ಆರೋಗ್ಯವನ್ನು ಭಗವಾನ್ ಬುದ್ದ ರವರು ಕರುಣಿಸಲಿ ಎಂದು ಮೈಸೂರಿನ ಪೆದ್ದ ಉರಿಲಿಂಗ ಮಠದ ಪೀಠಾಧಿಪತಿಗಳಾದ -ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು. ಅವರು ಸೋಮವಾರ ನಗರದ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಯ ಬಳಿ ಮಹಾಕರುಣಾ ಬುದ್ದವಿಹಾರದ ವತಿಯಿಂದ ಹಮ್ಮಿಕೊಂಡಿರುವ ಪಂಚಶೀಲ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರಸ್ತುತ ಸಮಾಜದಲ್ಲಿ ಬುದ್ದನ ಶೀಲ ಹಾಗೂ ಸನ್ನಡತೆಗಳು ನೆಮ್ಮದಿಯ ಜೀವನಕ್ಕೆ ಅತ್ಯವಶ್ಯಕ ಅಂಶಗಳಾಗಿವೆ. ಭಗವಾನ್ ಬುದ್ಧ ಎಲ್ಲರ ಬಾಳಿನಲ್ಲಿ ಶಾಂತಿ, ನಮ್ಮದಿ, ಆರೋಗ್ಯವನ್ನು ಕರುಣಿಸಲಿ ಎಂದು ಬಹುಜನ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿಗಳು ನುಡಿದರು.


ಭಾರತೀಯ ಬೌದ್ಧ ಮಹಾಸಭಾ, ಬೌದ್ಧ ಸಮಾಜ, ಬೌದ್ಧ ವಿಕ್ಕು ಸಂಘ, ಮಹಾಕರುಣಾ ಬುದ್ಧ ವಿಹಾರ ಹಾಗೂ ಇತರ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ  ಆ.1ರಿಂದ 30ರವರೆಗೆ ತಾಲ್ಲೂಕಿನಲ್ಲಿ ಹಮ್ಮಿಕೊಂಡಿರುವ ವಿಶ್ವ ಶಾಂತಿಗಾಗಿ ಪಂಚಶೀಲ ಪಾದಯಾತ್ರೆ ಕಾರ್ಯಕ್ರಮದ ಪ್ರಯುಕ್ತ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಪುಷ್ಟಾರ್ಚನೆ ಮಾಡಿ, ನೂತನವಾಗಿ ಬೌದ್ಧ ಸನ್ಯಾಸಿಗಳಾಗಿ ದೀಕ್ಷೆಯನ್ನು ಪಡೆದ ಹಲವರಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಿದರು. ಪಾದಯಾತ್ರೆ ಯಶಸ್ವಿಯಾಗಿ ಜನರ ಮನ ತಿಳಿಯಾಗಲಿ ಎಂದು ಶುಭ ಹಾರೈಸಿದರು.


ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಪಿ.ಯೋಗೇಶ್ವರ್ ಅವರು ಬೌದ್ಧ ಸನ್ಯಾಸಿಗಳಾಗಿ ದೀಕ್ಷೆಯನ್ನು ಪಡೆದ ಹಲವರಿಗೆ ಸಮವಸ್ತ್ರಗಳನ್ನು ವಿತರಣೆ ಮಾಡಿ,  ಬೌದ್ಧ ಧ್ವಜವನ್ನು ಬೀಸುವ ಮೂಲಕ ಪಂಚಶೀಲ ಪಾದಯಾತ್ರೆಗೆ ಚಾಲನೆ ನೀಡಿದರು. ತಾಲ್ಲೂಕಿನಲ್ಲಿ ಇದೊಂದು ವಿಶೇಷ ಕಾರ್ಯಕ್ರಮವಾಗಿದೆ. ಸಮಾಜಕ್ಕೆ ಇಂದು ಭಗವಾನ್ ಬುದ್ಧನ ಸಂದೇಶಗಳು ಅತ್ಯವಶ್ಯಕವಾಗಿದೆ. ಪಾದಯಾತ್ರೆ ಮೂಲಕ ಜನರಿಗೆ ಬುದ್ಧನ ಸಂದೇಶಗಳು ತಲುಪಲಿ ಎಂಬ ಆಶಯವನ್ನು ವ್ಯಕ್ತಪಡಿಸಿ, ಪಾದಯತ್ರೆಗೆ ಶುಭ ಕೋರಿದರು.


ಚನ್ನಪಟ್ಟಣ ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ವಿ.ಗಿರೀಶ್, ಹಾಪ್‍ಕಾಮ್ಸ್ ಮಾಜಿ ನಿರ್ದೇಶಕರಾದ ಬೋರ್‍ವೆಲ್ ರಂಗನಾಥ್, ಎಸ್.ಸಿ.ಶೇಖರ್,ಇಂಜಿನಿಯರ್ ಶಂಕರಪ್ಪ, ನೀಲಕಂಠನಹಳ್ಳಿ ಅನಿಲ್‍ಕುಮಾರ್, ಎಂ.ಎನ್,ಆನಂದಕುಮಾರ್ ಅವರು ನೂತನವಾಗಿ ಬೌದ್ಧ ಸನ್ಯಾಸಿಗಳಾಗಿ ದೀಕ್ಷೆ ಪಡೆದವರಿಗೆ ಸಮವಸ್ತ್ರವನ್ನು ವಿತರಣೆ ಮಾಡಿ ಶುಭ ಹಾರೈಸಿದರು.


ಕಾರ್ಯಕ್ರಮದ ಸಂಘಟಕರು, ಸಂವಿಧಾನ ಬಳಗದ ಅಧ್ಯಕ್ಷರು ಆದ ಜಯಕಾಂತ್ ಚಾಲುಕ್ಯ, ಹನುಮಂತಯ್ಯ ಅವರು ಪಾದಯಾತ್ರೆಯ ಉದ್ದೇಶವನ್ನು ವಿವರಿಸಿ, ಈ ಪಾದಯಾತ್ರೆಯು ಇಂದು ಪ್ರಾರಂಭವಾಗಿ ಆ.30ರ ವರೆಗೆ ತಾಲ್ಲೂಕಿನಾದ್ಯಾಂತ ಸಂಚರಿಸಲಿದೆ. ಇದರ  ಜೊತೆಗೆ ಶ್ರೀಲಂಕಾ ದೇಶದಿಂದ ತಂದಿರುವ ಭಗವಾನ್ ಬುದ್ಧನ ಅಸ್ತಿ (ಮೂಳೆ)ಯನ್ನು ಮೆರವಣಿಗೆ ಮಾಡುವುದರ ಜೊತೆಗೆ ಭಗವಾನ್ ಬುದ್ಧರ ಧಮ್ಮವನ್ನು ಜನಸಾಮಾನ್ಯರಿಗೆ ತಲುಪಿಸಲು ಮತ್ತು ವಿಶ್ವರತ್ನ ಬೋಧಿಸತ್ವ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಕನಸಾಗಿದ್ದ ಪ್ರಬುದ್ಧ ಭಾರತ ನಿರ್ಮಾಣ ಮಾಡುವುದು ಮುಖ್ಯಗುರಿಯಾಗಿದೆ.  ತಾಲ್ಲೂಕಿನ ಜನತೆ ಅದರಲ್ಲೂ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.


ಸಂದರ್ಭದಲ್ಲಿ ಬೌದ್ಧಬಿಕ್ಕುಗಳಾದ ಬೌದಿತೀಶ ಭಂತೇಜಿ, ಧಮ್ಮವೀರ ಭಂತೇಜಿ, ಬೋಧಿದತ್ತ ಭಂತೇಜಿ, ಧಮ್ಮಪ್ರಭು, ಚನ್ನಪಟ್ಟಣ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲವೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಸ್.ಆರ್.ಪ್ರಮೋದ್, ಸುನೀಲ್, ಶಾಸಕ ಹೆಚ್.ಡಿ.ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ, ಮುತ್ತುಶ್ರೀ ಪ್ರಿಂಟರ್ ನ ಗಂಗಾಧರ, ಬಿವಿಎಸ್ ಕುಮಾರ್, ಜೈಪ್ರಕಾಶ್, ಸಿದ್ದರಾಮು, ಮಹೇಂದ್ರಕುಮಾರ್, ವೆಂಕಟೇಶ್, ಸಿದ್ದರಾಮು, ಜಯಸಿಂಹ, ಶಿವಲಿಂಗಯ್ಯ, ಪುಟ್ಟಸ್ವಾಮಿ, ಸುಜೀವನ್‍ಕುಮಾರ್, ಸದಾನಂದ ಸೇರಿದಂತೆ ಹಲವರು ಹಾಜರಿದ್ದು ಪಾದಯಾತ್ರೆಗೆ ಶುಭಕೋರಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑