Tel: 7676775624 | Mail: info@yellowandred.in

Language: EN KAN

    Follow us :


ಈ ದೇಶದಲ್ಲಿ ರೈತರಿಗೆ ಪಿಂಚಣಿ ಕೊಡ್ತೀನಿ ಎಂದ ಏಕೈಕ ನಾಯಕ ಕುಮಾರಸ್ವಾಮಿ ದೇವೇಗೌಡ

Posted date: 04 May, 2023

Powered by:     Yellow and Red

ಈ ದೇಶದಲ್ಲಿ ರೈತರಿಗೆ ಪಿಂಚಣಿ ಕೊಡ್ತೀನಿ ಎಂದ ಏಕೈಕ ನಾಯಕ ಕುಮಾರಸ್ವಾಮಿ ದೇವೇಗೌಡ

ಚನ್ನಪಟ್ಟಣ: ಇಡೀ ದೇಶದಲ್ಲಿ ರೈತರ ಇಪ್ಪತ್ತಾರು ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ, ಮುಂದೆ ರೈತರಿಗೆ ಪಿಂಚಣಿ ನೀಡುತ್ತೇನೆ ಎಂದು ಘೋಷಣೆ ಮಾಡಿದ ಏಕೈಕ ನಾಯಕ ಕುಮಾರಸ್ವಾಮಿ ಯಂತಹ ಮುಖ್ಯಮಂತ್ರಿ ನಾಯಕನನ್ನು ಉಳಿಸಿ ಬೆಳೆಸಬೇಕಾಗಿರುವುದು ಈ ನಾಡಿನ ಜನತೆ ಎಂದು ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರು ತಿಳಿಸಿದರು. ಅವರು ನಗರದ ಷೇರು ವೃತ್ತದಲ್ಲಿ ಹಾಗೂ ಮಂಗಳವಾರಪೇಟೆ ಯ ಬಸವನಗುಡಿ ಬಳಿ ಜೆಡಿಎಸ್ ಅಭ್ಯರ್ಥಿ ಹೆಚ್ ಡಿ ಕುಮಾರಸ್ವಾಮಿ ಪರ ಪ್ರ


ಬೊಂಬೆನಗರಿ ಚನ್ನಪಟ್ಟಣಕ್ಕೆ ಎರಡನೇ ಭಾರಿಗೆ ಕ್ಷೇತ್ರದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಪರ ಬಿರುಸಿನ ಪ್ರಚಾರ ನಡೆಸುತ್ತಿದ್ದು, ಪುತ್ರನ ಪರ ಅಪ್ಪ ಮತಯಾಚನೆ ಮಾಡುತ್ತಿದ್ದಾರೆ.


ನಗರದ ಶೇರು ಸರ್ಕಲ್ ಸಭೆಯಲ್ಲಿ ಮೊದಲಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಕಳೆದೆರಡು ದಿನಗಳಲ್ಲಿ ಹದಿನಾರು ಕ್ಷೇತ್ರಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ದೇಶದಲ್ಲಿ ರೈತನಿಗೆ ಪಿಂಚಣಿ‌ ಕೊಡುತ್ತೇನೆ ಎಂದು ಹೇಳುವ ವ್ಯಕ್ತಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ,  ಹಿಂದೂಸ್ತಾನದಲ್ಲಿ ಯಾರಾದ್ರು  ನುಡಿದಂತೆ ನಡೆಯುವ ಮುಖ್ಯಮಂತ್ರಿ ಹಾಗೂ ರಾಜಕಾರಣಿ ಯಾರಾದ್ರು ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದ್ದಾಗ ಕಾಂಗ್ರೆಸ್‌ನವರ ವ್ಯಂಗ್ಯದ ನಡುವೆ ಸಾಲ‌ ಮನ್ನಾ ಮಾಡಿದ್ದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಎರಡನೇ ಸಾಲಿನಲ್ಲಿ ಕುಳಿತ ಸಿದ್ದರಾಮಯ್ಯ ವ್ಯಂಗ್ಯ ಮಾಡಿ ಹೊರಗೆ ಹೋಗುತ್ತಾರೆ. ಹಿಂದೂಸ್ಥಾನದಲ್ಲಿ ಕಾಂಗ್ರೆಸ್‌ನ ಎಲ್ಲಾ ಕಾರ್ಯಕ್ರಮಗಳಿಗೆ ಹಣ ಕೊಟ್ಟು ಸಾಲ ಮನ್ನಾ ಮಾಡಿದರೆ ಅದು ಕುಮಾರಸ್ವಾಮಿಯಿಂದ ಮಾತ್ರ ಸಾಧ್ಯವಾಗಿದೆ.


ಸಿದ್ದರಾಮಯ್ಯ ಐವತ್ತು ಸಾವಿರ  ಸಾಲ‌ ಮನ್ನಾ ಮಾಡಿದ್ದರೂ 3,500 ಕೋಟಿ ಬಾಕಿ ಉಳಿದಿತ್ತು. ಅದರ ಜೊತೆಗೆ 26 ಸಾವಿರ ಕೋಟಿ ಸಾಲ ಮನ್ನಾ ಮಾಡಿದ್ದು, ಇಡೀ ಹಿಂದೂಸ್ತಾನದಲ್ಲಿ ಕುಮಾರಸ್ವಾಮಿಯಂತ ಮತ್ತೊಬ್ಬ ಮುಖ್ಯಮಂತ್ರಿ ಇಲ್ಲ ಎಂದು ಹಾಡಿ ಹೋಗಳಿದರು. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ನಾಯಕರು ನನ್ನ ಮುಂದೆ ನಿಂತು ಹೇಳಲಿ,‌ ಎಂದು ಸವಾಲು ಹಾಕಿದರು.


ಇದಲ್ಲದೆ ಮಂಡ್ಯದಿಂದ ಸ್ಪರ್ಧೆಗೆ ಒತ್ತಡ ಬಂದರೂ ಚನ್ನಪಟ್ಟಣ ನನ್ನ ಕರ್ಮ ಭೂಮಿ ಅಂತ ನಿರಾಕರಿಸಿದರು. ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದು ಯಾರು..? ಮುಸ್ಲಿಮರಿಗೆ ವಸತಿ ಶಾಲೆಗಳನ್ನ ಕೊಟ್ಟಿದ್ದೆ. ಆದರೆ, ಸಮಾಜ ಕಲ್ಯಾಣ ಇಲಾಖೆಗಳಿಗೆ ಸೇರಿಸಿ ಹಾಳು ಮಾಡಿದ್ದರು. ಹದಿಮೂರು ಬಾರಿ ಬಜೆಟ್ ಮಂಡಿಸಿದ್ದೇನೆ ಎನ್ನುವವರು ಉತ್ಸಾಹ ತೋರಲಿಲ್ಲ ಎಂದರು.


ಚನ್ನಪಟ್ಟಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿದ್ದರೂ ಒಂದೇ ತಾಯಿ ಮಕ್ಕಳಂತೆ ಕೆಲಸ ಮಾಡಿ. ಸಮೀಕ್ಷಾ ವರದಿಗಳ ಬಗ್ಗೆ ತಲೆ‌ಕೆಡಿಸಿಕೊಳ್ಳಬೇಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಶತಸಿದ್ದವಾಗಿದೆ. ಮುಖ್ಯಮಂತ್ರಿ ಕೊಡುವ ಹೆಗ್ಗಳಿಕೆ ಚನ್ನಪಟ್ಟಣಕ್ಕೆ ಸಲ್ಲಬೇಕು. ಯುವಕರು ದೇಶದ ಮುಂದಿನ ಪ್ರಜೆಗಳು ಈ ಪಕ್ಷವನ್ನ ಉಳಿಸಿ, ನಾವು ತಾಯಿ ಭುವನೇಶ್ವರಿ ಮಕ್ಕಳು ನಾಡಿಗಾಗಿ ತಮ್ಮ ಶಕ್ತಿ ತೋರಿಸಿ. ಕುಮಾರಸ್ವಾಮಿ ಇಡೀ ರಾಜ್ಯ ಸುತ್ತಬೇಕು ಅವರು ಬರಲು ಸಾಧ್ಯವಿಲ್ಲ. ರಾತ್ರಿ 12 ರವರೆಗೂ ಪ್ರಚಾರ ಮಾಡುತ್ತಿದ್ದಾರೆ. ಯಾರು ಏನೇ ಹೇಳಿದರೂ ಅಪ ಪ್ರಚಾರ ಮಾಡಿದರೂ ನಿಮ್ಮ ಮನೆ ಮಗನನ್ನ ಮುಖ್ಯಮಂತ್ರಿ ಮಾಡ್ತೀವಿ ಎಂದು ಪಣ ತೊಡಿ ಎಂದು ಪುತ್ರನ ಗೆಲುವಿಗೆ ಹೆಚ್ ಡಿ ದೇವೇಗೌಡ ಕರೆ ನೀಡಿದರು.


*ಎರಡನೇ ಬಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ*

ಚುನಾವಣೆ ಆರಂಭವಾದ ನಂತರ ಎರಡನೇ ಭಾರಿಗೆ ಚನ್ನಪಟ್ಟಣ ಕ್ಷೇತ್ರಕ್ಕೆ ಪ್ರಚಾರಕ್ಕೆ ಬಂದಿದ್ದೇನೆ. ಮೊನ್ನೆ ಕೂಡಾ ಬಹಿರಂಗ ಸಭೆ ಮಾಡಿದ್ದೆ. ಇವತ್ತೂ ಎರಡು ಕಡೆ ಸಭೆ ನಡೆಸಿ ಕುಮಾರಸ್ವಾಮಿ ಪರ ಪ್ರಚಾರ ಮಾಡುತಿದ್ದೇನೆ. ಇಬ್ರಾಹಿಂ ಕೂಡಾ ರಾಜ್ಯದ ಹಲವು ಭಾಗದಲ್ಲಿ ಪ್ರವಾಸ ಮಾಡುತ್ತಿದ್ದಾರೆ.


ಇಡೀ ದೇಶದಲ್ಲಿ ಯಾವುದೇ ಮುಖ್ಯಮಂತ್ರಿ ಕೂಡಾ ದೊಡ್ಡಮಟ್ಟದಲ್ಲಿ ರೈತರ ಸಾಲ ಮನ್ನಾ ಮಾಡಿಲ್ಲ. ಕುಮಾರಸ್ವಾಮಿ ಏಕಾಂಗಿಯಾಗಿ ನಿಂತು ರೈತರ ಸಾಲಮನ್ನಾ ಮಾಡಿದ್ದಾರೆ ಎಂದರು. ಇದಲ್ಲದೆ ಮಹಿಳೆಯರಿಗೆ ರಿಸರ್ವೇಷನ್ ಕೊಡಿಸಿದ್ದು ಯಾರು. ದಯಮಾಡಿ ಜೆಡಿಎಸ್ ಬಗೆಗಿನ ಟೀಕೆಗಳನ್ನ ನಿಲ್ಲಿಸಿ. ತಮಿಳರ ರೀತಿ ಇಲ್ಲೂ ಕೂಡಾ ಕಲಿಯಬೇಕು. ತಮಿಳುನಾಡಿನಲ್ಲಿ ಯಾವುದೇ ಕಾಂಗ್ರೆಸ್, ಬಿಜೆಪಿ ಸ್ಥಾನ ಇಲ್ಲವೆ ಇಲ್ಲ. ಅಲ್ಲಿ ಪ್ರಾದೇಶಿಕ ಪಕ್ಷಕ್ಕೆ ಹೆಚ್ಚಿನ ಬೆಂಬಲ ಇದೆ ಎಂದರು.


ನಾವು ಕನ್ನಡಿಗರು ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು. ಚನ್ನಪಟ್ಟಣ ಇಡೀ ತಾಲೂಕನ್ನು ನೀರಾವರಿ ಮಾಡಿದ್ದು ಯಾರು. !ಚನ್ನಪಟ್ಟಣದ ರೈತರು ಬದುಕಿದ್ದಾರೆ ಅಂದರೆ ಕಾರಣ ನಿಮ್ಮ ದೇವೇಗೌಡ ಕಾರಣ. ಬಿಜೆಪಿ, ಕಾಂಗ್ರೆಸ್ ನವರು ಕೈಕಟ್ಕೊಂಡು ಕೂತಿದ್ರು. ಏಕಾಂಗಿಯಾಗಿ ನೀರಿಗೆ ಹೋರಾಟ ಮಾಡಿದ್ದು ನಾನು. ರೈತರು ಬೆವರು ಸುರಿಸಿದ ದುಡ್ಡಲ್ಲಿ ನಾವು ನೀರಾವರಿ ತಂದಿದ್ದೇವೆ ಎಂದರು.


ಅದೇ ತಮಿಳುನಾಡಿನವರಿಗೆ ದುಡ್ಡು ಕೊಡುತ್ತೀರಿ, ಪ್ರಾಜೆಕ್ಟ್ ಕ್ಲಿಯರ್ ಮಾಡ್ತೀರಿ. ನಮ್ಮ ಕನ್ನಡಿಗರಿಗೆ ಸ್ವಾಭಿಮಾನ ಇಲ್ವೆ.!ಒಂದು ಮೇಕೆದಾಟು ಆಣೆಕಟ್ಟು ಕಟ್ಟಲು ಬಿಡ್ತಿಲ್ಲ. ಅದಕ್ಕಾಗಿ ಪ್ರಾದೇಶಿಕ ಪಕ್ಷ ಉಳಿಸಿ, ಬೆಳೆಸಬೇಕು. ಮೇಕೆದಾಟು ಯೋಜನೆ ಆಗಬೇಕಾದ್ರೆ ಅದು ಪ್ರಾದೇಶಿಕ ಪಾರ್ಟಿಯಿಂದ ಮಾತ್ರ ಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ತಿಳಿಸಿದರು.


*ಭಜರಂಗದಳ ಬ್ಯಾನ್ ವಿಚಾರಕ್ಕೆ ಇಬ್ರಾಹಿಂ ವಾಗ್ದಾಳಿ*

ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಭಜರಂಗದಳ ಬ್ಯಾನ್ ವಿಚಾರವಾಗಿ ಚನ್ನಪಟ್ಟಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮಾತನಾಡಿರು,


ಹಿಂದೆ ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಜರಂಗದಳ ನೆನಪಾಗಲಿಲ್ವಾ‌.!ಸರ್ವಜನಾಂಗದ ಶಾಂತಿಯ ತೋಟ ಮಾಡಬೇಕು ಅಂದ್ರೆ ಅದು ಜೆಡಿಎಸ್ ನಿಂದ ಮಾತ್ರ ಸಾಧ್ಯ ಎಂದರು.


ಕಾಂಗ್ರೆಸ್ ಪ್ರಣಾಳಿಕೆ ಯಲ್ಲಿ ಜೆಡಿಎಸ್ ಪ್ರಣಾಳಿಕೆ ಅಂಶ ಕಾಪಿ ವಿಚಾರವಾಗಿ ಮಾತನಾಡಿದ ಅವರು, ಅದು ನೂರಕ್ಕೆ ನೂರರಷ್ಟು ಸತ್ಯ. ಅವರು ನಮ್ಮನ್ನೇ ಅನುಕರಣೆ ಮಾಡಬೇಕು. ಅದನ್ನ ಬಿಟ್ರೆ ಹೇಳೋಕೆ ಬೇರೆ ಏನಿದೆ. ಎಕರೆಗೆ 10ಸಾವಿರ, ಒಂದು ಮನೆಗೆ 2 ಸಾವಿರ ಕೊಡ್ತೀನಿ ಅಂತ ಹೇಳಿ ಅತ್ತೆ ಸೊಸೆಗೆ ಗಲಾಟೆ ತಂದಿಡ್ತಿದ್ದಾರೆ. ಅತ್ತೆಗೆ ಕೊಡ್ತಾರೋ, ಸೊಸೆಗೆ ಕೊಡ್ತಾರೋ. ಈಗ ನಾವು 65 ವರ್ಷ ವಯಸ್ಸಾದ ಮೇಲೆ 5 ಸಾವಿರ ಕೊಡ್ತೀವಿ ಅಂತ ಹೇಳಿದ್ದೇವೆ. ಜೆಡಿಎಸ್ ಗೆ ವೋಟ್ ಹಾಕಿದ್ರೆ ಅದು ಕಾಂಗ್ರೆಸ್ ಗೆ ವೋಟ್ ಹಾಕಿದಂತೆ ಎಂಬ ಮೋದಿ ಹೇಳಿಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಕಾಂಗ್ರೆಸ್ ಇಬ್ಬರೂ ದಾಯಾದಿಗಳ ಮಕ್ಕಳು. ಜನಕ್ಕೆ ಎಲ್ಲವೂ ಗೊತ್ತಾಗುತ್ತೆ.

ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ಸೂ ಅಲ್ಲ. ನಾವು ಕನ್ನಡ ನಾಡಿನ ಕನ್ನಡಿಗರು.

ಕನ್ನಡಿಗರು ಉಳಿಯಬೇಕು ಎಂದು ಸಿ.ಎಂ.ಇಬ್ರಾಹಿಂ ‌ಇದೇ ವೇಳೆ ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑