Tel: 7676775624 | Mail: info@yellowandred.in

Language: EN KAN

    Follow us :


ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್

Posted date: 02 Aug, 2022

Powered by:     Yellow and Red

ಚಂದ್ರು ಡಯಾಗ್ನೋಷಟಿಕ್ ನಿಂದ ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ನೂತನ ತಂತ್ರಜ್ಞಾನದ ಎಂಆರ್‌ಐ ಸ್ಯ್ಕಾನಿಂಗ್

ಚನ್ನಪಟ್ಟಣ.ಆ.೦೨: ಜಿಲ್ಲೆಯಲ್ಲಿ ಕಳೆದ ೨೫ ವರ್ಷಗಳಿಂದ ಗುಣಮಟ್ಟದ ಪ್ರಯೋಗಲಾಯ ಸೇವೆ ನೀಡುತ್ತಿರುವ ಚಂದ್ರ ಡಯಾಗ್ನೋಷ್ಟಿಕ್ ಸೆಂಟರ್‌ ವತಿಯಿಂದ ಜಿಲ್ಲೆಯಲ್ಲಿ ಮೊಟ್ಟಮೊದಲ ಬಾರಿಗೆ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರವನ್ನು ಅಳವಡಿಸಲಾಗುತ್ತಿದ್ದು, ಈ ತಿಂಗಳ ೭ರಂದು ಸೇವೆಗೆ ಲಭ್ಯವಾಗಲಿದ್ದು, ಗ್ರಾಮೀಣ ಭಾಗದ ಜನರು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಚಂದ್ರು ಡಯಾಗ್ನೋಸ್ಟಿಕ್ ಸೆಂಟರ್ ಮಾಲೀಕ ವಿ.ಸಿ ಚಂದ್ರೇಗೌಡ ಅವರು ತಿಳಿಸಿದರು.

ಅವರು ನಗರದ ಪಾರ್ವತಿ ಟಾಕೀಸ್‌ ರಸ್ತೆಯಲ್ಲಿರುವ ಚಂದ್ರು ಡಯಾಗ್ನೋಷ್ಟಿಕ್ ಲ್ಯಾಬ್‌ನಲ್ಲಿ ಕರೆದಿದ್ದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.


ಬೆಂಗಳೂರು, ಮೈಸೂರಿನಂತಹ ಮಹಾನಗರಗಳಲ್ಲಿ ಮಾತ್ರ ಲಭ್ಯವಿದ್ದ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರಗಳು, ಈಗ ನಮ್ಮ ಪ್ರಯೋಗಾಲಯದಲ್ಲಿ ಸೇವೆಗೆ ದೊರಕುತ್ತಿದ್ದು, ಜನರು ಅಲೆಯುವುದನ್ನು ತಪ್ಪಿಸಿ, ಅವರಿಗೆ ಉತ್ತಮ ಗುಣಮಟ್ಟದ ಪರೀಕ್ಷಾ ಸೇವೆಗಳನ್ನು ನೀಡುವ ಉದ್ದೇಶದಿಂದ ಈ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.

ರಾಮನಗರ ಜಿ.ಪಂ ಕಛೇರಿ ಮುಂಭಾಗ ಇರುವ ಎಸ್‌ಬಿಐ ಬ್ಯಾಂಕ್ ಕೆಳಗೆ ಇರುವ ನಮ್ಮ ಪ್ರಯೋಗಾಲಯದಲ್ಲಿ ನೂತನ ಎಂಆರ್‌ಐ ಯಂತ್ರವನ್ನು  ಅಳವಡಿಸಿದ್ದು, ಸುಸಜ್ಜಿತ ಪ್ರಯೋಗಾಲಯವನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದರು.


ಈಗಾಗಲೇ ಚನ್ನಪಟ್ಟಣದಲ್ಲಿರುವ ಪ್ರಯೋಗಾಲಯದಲ್ಲಿ, ಡೆಂಟಲ್ ಸಿಟಿಸ್ಕ್ಯಾನಿಂಗ್, ಬಯೋಕೆಮಿಸ್ಟ್ರಿ ಅನಲೈಸರ್, ಥೈರಾಯ್ಡ್, ಗರ್ಭಕೋಸದ ಕ್ಯಾನ್ಸರ್‌ನಂತಹ ಹಲವು ಕಾಯಿಲೆಗಳನ್ನು ಪತ್ತೆ ಹಚ್ಚುವ ಸುಸಜ್ಜಿತ ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿದ್ದು, ನಿಖರ ಫಲಿತಾಂಶವನ್ನು ನೀಡುವ ಕೆಲಸ ಮಾಡಲಾಗುತ್ತಿದೆ. ಈಗ ಅಳವಡಿಸಿರುವ ಎಂಆರ್‌ಐ ಸ್ಕ್ಯಾನಿಂಗ್ ಯಂತ್ರದಿಂದ ಇಲ್ಲಿನ ಜನರಿಗೆ ಮತ್ತಷ್ಟು ಉಪಯೋಗವಾಗಲಿದೆ ಎಂದು ವಿವರಿಸಿದರು.


ಉದ್ಘಾಟನೆಯನ್ನು ನಂಜಾವಧೂತ ಸ್ಬಾಮೀಜಿ ಮಾಡಿದರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಅಶ್ವಥ್ ನಾರಾಯಣ ವಹಿಸಲಿದ್ದಾರೆ ಎಂದು ತಿಳಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑