Tel: 7676775624 | Mail: info@yellowandred.in

Language: EN KAN

    Follow us :


ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ

Posted date: 04 Aug, 2022

Powered by:     Yellow and Red

ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ: ಡಾ. ಚಂದ್ರಶೇಖರಯ್ಯ

Breastfeeding strengthens mother-child emotional bond: Dr. Chandrasekharaiah

ರಾಮನಗರ, ಆ.04: ಎದೆ ಹಾಲಿನ ಮಹತ್ವ, ಹಾಲುಣಿಸುವಿಕೆ ಮತ್ತು ಮಕ್ಕಳ ಆರೈಕೆ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದು, ತಾವೆಲ್ಲರೂ ಮಾಹಿತಿಯನ್ನು ತಿಳಿದುಕೊಂಡು ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ಹಾಲುಣಿಸುವುದರ ಮೂಲಕ ಸ್ತನ್ಯಪಾನ ತಾಯಿ-ಮಗುವಿನ ಭಾವನಾತ್ಮಕ ಸಂಬಂಧವನ್ನು ಗಟ್ಟಿಗೊಳಿಸುತ್ತದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಶೇಖರಯ್ಯ ಅವರು ತಿಳಿಸಿದರು.

ಅವರು ಇಂದು  ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎಸ್.ಬಿ.ಸಿ.ಸಿ ಘಟಕ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಮಾಗಡಿ ಹಾಗೂ ಪ್ರಾಥಮಿಕ  ಆರೋಗ್ಯ ಕೇಂದ್ರ ಸಂಕೀಘಟ್ಟ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ "ವಿಶ್ವ ಸ್ತನ್ಯಪಾನ ಸಪ್ತಾಹ"ದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


ಸಂಕೀಘಟ್ಟ ಪ್ರಾಥಮಿಕ  ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಶರ್ಮಿಳಾ ಅವರು ಮಾತನಾಡಿ ಆಗಸ್ಟ್ 1-7ರವರೆಗೆ ವಿಶ್ವಸ್ಥನ್ಯಪಾನ ಸಪ್ತಾಹವನ್ನು ಆಚರಿಸಲಾಗುತ್ತಿದ್ದು, 1991ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಎಲ್ಲಾ ದೇಶಗಳ ಸರಕಾರ ಹಾಗೂ ಇತರ ಕೆಲವು ಸಂಘಟನೆಗಳ ಸಹಯೋಗದಲ್ಲಿ ಇದನ್ನು ಆರಂಭಿಸಿತು. ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಬುನಾದಿಯಾಗಿರುವ ಎದೆಹಾಲು ಕುಡಿಸುವ ಮಹತ್ವ ಹಾಗೂ ಸತ್ವಗಳ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು "ಸ್ತನ್ಯಪಾನ ಸಪ್ತಾಹ" ಆಚರಣೆಯನ್ನು ಜಾರಿಗೆ ತರಲಾಗಿದೆ.


 ಎದೆಹಾಲು ಎಂಬುದು ನವಜಾತ ಶಿಶುವಿಗೆ ಒಂದು ಪರಿಪೂರ್ಣ ಆಹಾರ. ಎದೆ ಹಾಲು ಕೊಡುವ ಪ್ರಕ್ರಿಯೆಗೆ ಮೊಲೆಯುಣಿಸುವುದು ಎಂದೂ ಹೆಸರಿದೆ, ಇದು ಪ್ರಕೃತಿ ನಿಯಮ. ಒಂದು ಮಹಿಳೆ ಹೆರಿಗೆ ನಂತರ ಜನಿಸಿದ ಮಗುವಿಗೆ ಎದೆಹಾಲು ಕೊಡುವುದು ಮಗುವಿಗೆ ಆರೋಗ್ಯಕ್ಕೆ ಒಳ್ಳೆಯದು. ತಾಯಿಯ ಮೊದಲ ಎದೆ ಹಾಲಿನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚು ಇರುತ್ತದೆ ಹಾಗೂ  ತಾಯಿಯ ಮೊದಲಿನ ಹಾಲು ಮಂದವಾಗಿ ಹಳದಿ ಬಣ್ಣದಲ್ಲಿ ಇರುವುದಲ್ಲದೆ ಇದನ್ನು ಕೊಲಸ್ಟ್ರಮ್ ಎಂದು ಕರೆಯುತ್ತಾರೆ. ವೈಜ್ಞಾನಿಕ ದೃಷ್ಠಿಯಿಂದಲೂ ಮಗು ಹುಟ್ಟಿದ ಕೂಡಲೆ ತಾಯಿಯ ಎದೆಯ ಮೇಲೆ ಬರಿ ಮೈಯಲ್ಲಿ ಮಗುವನ್ನು ಮಲಗಿಸಿ ಮೊಲೆಯುಣಿಸಿದರೆ ಬಾಂಧವ್ಯ ಬೆಸೆಯುತ್ತದೆ. ಅದಲ್ಲದೆ ತಾಯಿಯ ಎದೆ ಬಡಿತವನ್ನು ಮಗು ಗುರುತಿಸುವುದರೊಂದಿಗೆ ಬೇರೆಯವರ ಸಹಾಯವಿಲ್ಲದೆ ತಾನೆ ಚೀಪುವುದನ್ನು ಅಭ್ಯಾಸ ಮಾಡಿಕೊಳ್ಳುತ್ತದೆ. ಹಾರ್ಮೋನ್ ಗಳಾದ ಎಸ್ಟ್ರೋಜನ್ಗಳು, ಪ್ರೊಜೆಸ್ಟರಾನ್, ಮತ್ತು ಪ್ರೋಲ್ಯಾಕ್ಟಿನ್ ಸ್ರವಿಸುವಿಕೆಗೆ ಹಾಲೂಡುವಿಕೆ ಪ್ರಯೋಜನಕಾರಿಯಾಗಿದೆ ಎಂದು ತಿಳಿಸಿದರು.


ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಎಸ್ ಗಂಗಾಧರ್ ಅವರು ಮಾತನಾಡಿ ಎದೆಹಾಲಿನ ಮಹತ್ವ ಹಾಗೂ ಸ್ತನ್ಯಪಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಹಾಗೂ ಕ್ರಮಬದ್ಧಗೊಳಿಸುವ ಜಾಗತಿಕ ಅಭಿಯಾನವಾಗಿದೆ. ಪ್ರತೀ ವರ್ಷವೂ ಒಂದೊಂದು ಘೋಷಣೆಯೊಂದಿಗೆ ಆಚರಿಸಲ್ಪಡುವ ಈ ಕಾರ್ಯಕ್ರಮವು ಈ ವರ್ಷದ ಘೋಷಣೆ “ಶಿಕ್ಷಣ ಮತ್ತು ಬೆಂಬಲದೊಂದಿಗೆ ಸ್ತನ್ಯಪಾನ ವೃದ್ಧಿ” ಎಂಬುದಾಗಿದ್ದು, ಸಮುದಾಯದಲ್ಲಿ ಅರಿವು ಮೂಡಿಸುವುದು ಎಲ್ಲರ ಜವಾಬ್ಧಾರಿಯಾಗಿದೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ಬಿಸಿಸಿ ಸಂಯೋಜಕ ಸುರೇಶ್ ಬಾಬು, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಂಗನಾಥ್, ಮುಖ್ಯ ಶಿಕ್ಷಕರಾದ ಆಸಿನ್ ತಾಜ್, ಆರೋಗ್ಯ ನಿರೀಕ್ಷಣಾಧಿಕಾರಿ ಅಣ್ಣೇಗೌಡ, ಶಿವಕುಮಾರ್, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಣಾಧಿಕಾರಿ ಯಲ್ಲಮ್ಮ, ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾಣಾಧಿಕಾರಿ ಗಂಗಮ್ಮ, ಆರೋಗ್ಯ ಸಿಬ್ಬಂದಿ ಆಶಾ -ಅಂಗನವಾಡಿ ಕಾರ್ಯಕರ್ತೆಯರು, ಗರ್ಭಿಣಿ-ಬಾಣಂತಿಯರು ಹಾಗೂ ಇತರರು ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑