Tel: 7676775624 | Mail: info@yellowandred.in

Language: EN KAN

    Follow us :


ಸಮ್ಮೇಳನಕ್ಕೆ ಕಿಟೆಲ್‌ ಮೊಮ್ಮಗಳ ಆಗಮನ : ನ.೧೧ರಿಂದ ೧೩ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ : ಡಾ. ಮಹೇಶ ಜೋಶಿ

Posted date: 06 Aug, 2022

Powered by:     Yellow and Red

ಸಮ್ಮೇಳನಕ್ಕೆ ಕಿಟೆಲ್‌ ಮೊಮ್ಮಗಳ ಆಗಮನ : ನ.೧೧ರಿಂದ ೧೩ರವರೆಗೆ ಕನ್ನಡ ಸಾಹಿತ್ಯ ಸಮ್ಮೇಳನ : ಡಾ. ಮಹೇಶ ಜೋಶಿ

Haveri: Arrival of Kitel's Granddaughters at the Conference: Kannada Literary Conference from November 11 to 13: Dr. Mahesh Joshi

ಆಗಸ್ಟ್ ೦೬, ೨೦೨೨, ಹಾವೇರಿ: ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ನವೆಂಬರ್‌ ೧೧, ೧೨ ಮತ್ತು ೧೩ರಂದು ನಡೆಸಲು ನಿರ್ಧರಿಸಲಾಗಿದ್ದು, ಮುಖ್ಯಮಂತ್ರಿಯವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ ಜೋಶಿ ಹೇಳಿದರು.


ನಗರದಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂಪರ್ಕ ಕಚೇರಿಯ ಉದ್ಘಾಟನಾ ಕಾರ್ಯಕ್ರಮದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

 

ನವೆಂಬರ್‌ ೧೧ರಂದು ಕನಕದಾಸ ಜಯಂತಿ ಇದ್ದು, ಅಂದು ಸಾಹಿತ್ಯ ಸಮ್ಮೇಳನದ ಉದ್ಘಾಟನೆ ನೆರವೇರಲಿದೆ. ನ.೧೨ರಂದು ಎರಡನೇ ಶನಿವಾರ ಮತ್ತು ನ.೧೩ರಂದು ಭಾನುವಾರವಿದ್ದು, ಮೂರು ದಿನ ಸರ್ಕಾರಿ ರಜೆಗಳಿರುತ್ತವೆ. ಹೀಗಾಗಿ ಸರ್ಕಾರಿ ನೌಕರರು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಅನುಕೂಲವಾಗುತ್ತದೆ ಎಂದರು.


೧೦೭ ವರ್ಷಗಳ ನಂತರ ಕಸಾಪ ಅಧ್ಯಕ್ಷರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಕನ್ನಡ ಕೆಲಸ ಮಾಡಲು ‘ಭೀಮಬಲ’ ಸಿಕ್ಕಂತಾಗಿದೆ. ಜರ್ಮನಿಯಲ್ಲಿ ವಾಸವಾಗಿರುವ ಕನ್ನಡದ ಮೊದಲ ನಿಘಂಟು ತಜ್ಞ ಫರ್ಡಿನೆಂಡ್‌ ಕಿಟೆಲ್‌ ಅವರ ಮೊಮ್ಮಗಳು ಮತ್ತು ಕೆನಡಾ ಸಂಸದ ಚಂದ್ರ ಆರ್ಯ ಕರ್ನಾಟಕದವರಾಗಿದ್ದು, ಈ ಇಬ್ಬರೂ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑