Tel: 7676775624 | Mail: info@yellowandred.in

Language: EN KAN

    Follow us :


ಮುಟ್ಟು ಗುಟ್ಟಿನ ವಿಷಯವಲ್ಲ ಅದೊಂದು ಜೈವಿಕ ಕ್ರಿಯೆ; ಪದ್ಮರೇಖಾ

Posted date: 27 May, 2023

Powered by:     Yellow and Red

ಮುಟ್ಟು ಗುಟ್ಟಿನ ವಿಷಯವಲ್ಲ ಅದೊಂದು ಜೈವಿಕ ಕ್ರಿಯೆ; ಪದ್ಮರೇಖಾ

ರಾಮನಗರ: ಪ್ರತಿ ಹೆಣ್ಣಿನ ಮುಟ್ಟಿಗೂ ಒಂದು ಘನತೆ ಇದೆ. ಪ್ರತಿ ಮನುಷ್ಯನ ಹುಟ್ಟಿಗೂ ಮುಟ್ಟೇ ಕಾರಣವಾಗಿದೆ. ಮೂಡನಂಬಿಕೆ ಮತ್ತು ಕೀಳರಿಮೆಗಳನ್ನು ಬಿಟ್ಟು ಮುಟ್ಟಿನ ಬಗೆಗೆ ಅಗತ್ಯವಿರುವ ಸ್ವಚ್ಛತೆಯ ಕಡೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯಬೇಕಿದೆ.  ನಿಸರ್ಗದತ್ತವಾಗಿ ಬಂದಿರುವ ಜೈವಿಕ ಕ್ರಿಯೆಗೆ ಅಂಟು ಮುಟ್ಟಿನ ಸೋಂಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪದ್ಮರೇಖಾ ತಿಳಿಸಿದರು.

ಅವರು ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್,  ಈ ಎಸ್ ಎ ಎಫ್ ಫೌಂಡೇಶನ್, ಕಮ್ಯೂನಿಟಿ ಫಸ್ಟ್ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಹಿಳಾ ಸಬಲೀಕರಣ ವಿಭಾಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮುಟ್ಟಿನ ಆರೋಗ್ಯ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.


ದೈಹಿಕವಾಗಿ ನಿರಂತರ ನಡೆಯುವ ಮುಟ್ಟಿನ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು, ಇದನ್ನು ಕೆಟ್ಟದ್ದು ಎಂದು ನೋಡದೆ, ಅವರಿಗೆ ಬಿಡುವು ಕೊಡುವುದರ ಜೊತೆಗೆ ಸಹಕಾರ ನೀಡಬೇಕು. ಮುಂದಿನ ಪೀಳಿಗೆಗೆ ಮುಟ್ಟಿನ ಬಗ್ಗೆ ಇರುವ  ಮೂಢನಂಬಿಕೆ ತೊಲಗಿಸಿ, ವೈಜ್ಞಾನಿಕ ಮಾಹಿತಿ ನೀಡಬೇಕು ಎಂದರು.


ಮಾಜಿ ನಗರಸಭಾ ಅಧ್ಯಕ್ಷೆ ಬಿ ಸಿ ಪಾರ್ವತಮ್ಮ ಮಾತನಾಡಿ ಮುಟ್ಟನ್ನು ಕುರಿತು ಮತ್ತು ನೈರ್ಮಲ್ಯವನ್ನು ಕುರಿತು ಇಡೀ ಮಹಿಳಾ ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆ ಇದೆ. ಮುಟ್ಟಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿ ಸಾವಿಗೀಡಾದ ಅನೇಕ ದಾಖಲೆಗಳು ನಮ್ಮಲ್ಲಿವೆ. ಆಧುನಿಕ ಯುಗದಲ್ಲಿ ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆ ಇಲ್ಲ ಎಂದರು. 

ನಿಸರ್ಗದತ್ತವಾಗಿ ಉಂಟಾಗುವ ಮುಟ್ಟು ದೇಗುಲಗಳಾಚೆ ಇರಿಸಲು ಹೇಳಲ್ಲ. ಸೂಕ್ತವಾಗಿ ಅದರ ನಿರ್ವಹಣೆ ಮಾಡುವುದರಿಂದ ಎಲ್ಲ ಕಿರಿಕಿರಿಗಳಿಂದ ದೂರವಿರಬೇಕು ಎಂದರು.


ಜಾನಪದ ವಿದ್ವಾಂಸ ಡಾ. ಎಂ ಬೈರೇಗೌಡ ಮಾತನಾಡಿ ಮುಟ್ಟು ಸೂತಕವಲ್ಲ ಅದೊಂದು ಸಾಮಾನ್ಯ ಸಂಗತಿ. ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆಯಿಲ್ಲ ಎಂದರು.


ಕಾರ್ಯಕ್ರಮದಲ್ಲಿ 

ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಅಧ್ಯಕ್ಷ ಉದಯ್ ಕುಮಾರ್ ಮಹಿಳಾ ಸಬಲೀಕರಣ ವಿಭಾಗದ ಸಂಚಾಲಕಿ ವೇದಾವತಿ ಕಾಲೇಜು ಕನ್ನಡ ವಿಭಾಗದ ರೂಪಾ ಇಎಸ್ಎಎಫ್ ಫೌಂಡೇಶನ್ ಸತೀಶ್   ಕಾಲೇಜು ಪ್ರಾಂಶುಪಾಲ ಮುದ್ದೀರಯ್ಯ ಅಧ್ಯಕ್ಷತೆ ವಹಿಸಿದ್ದರು‌ ಕುಮಾರಿ ಭವ್ಯ ಕಾರ್ಯಕ್ರಮ ನಿರ್ವಹಿಸಿದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑