Tel: 7676775624 | Mail: info@yellowandred.in

Language: EN KAN

    Follow us :


ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ

Posted date: 23 Aug, 2022

Powered by:     Yellow and Red

ಬಾಲು ಆಸ್ಪತ್ರೆಯಲ್ಲಿನ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದ ಭ್ರೂಣ ಹತ್ಯೆ ಜಾಗೃತ ದಳ

ಚನ್ನಪಟ್ಟಣ: ನಗರದ ಪ್ರತಿಷ್ಠಿತ ಬಾಲು ಆಸ್ಪತ್ರೆಗೆ ಕರ್ನಾಟಕ ಸರ್ಕಾರದ ಭ್ರೂಣ ಹತ್ಯೆ ಮತ್ತು ಭ್ರೂಣ ಲಿಂಗ ಪತ್ತೆ ಜಾಗೃತ ದಳದ ಅಧಿಕಾರಿಗಳು ದಿಢೀರ್ ಭೇಟಿ ನೀಡಿ, ಹಲವು ದಾಖಲೆಗಳನ್ನು ವಶಪಡಿಸಿಕೊಂಡು, ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.


ಸಾರ್ವಜನಿಕರ ದೂರಿನ ಮೇರೆಗೆ ಜಾಗೃತ ದಳದ ಡಾ ವಿವೇಕ್ ದೊರೆ ನೇತೃತ್ವದಲ್ಲಿ ನಾಲ್ವರು ಅಧಿಕಾರಿಗಳು, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ರಾಜು, ತಾಲ್ಲೂಕು ಆರೋಗ್ಯಾಧಿಕಾರಿ ರಾಜು ರವರನ್ನೊಳಗೊಂಡ ಒಂದು ತಂಡವು ಸಂಜೆ ವೇಳೆಗೆ ಬಂದು ದಾಖಲೆಗಳನ್ನು ಪರಿಶೀಲಿಸಿದ ನಂತರ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಕೊಠಡಿಗೆ ಬೀಗ ಜಡಿದು, ಸರ್ಕಾರಿ ಸೀಲು ಹಾಕಿ ಸೀಜ್ ಮಾಡಿ, ವಿವರಗಳಿರುವ ಹಲವು ದಾಖಲೆಗಳನ್ನು ಸೀಜ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.


*ಸಿಜೇರಿಯನ್ ವೈದ್ಯರೇ ಇಲ್ಲದೆ ಹೆರಿಗೆ!*

ಬಾಲು ಆಸ್ಪತ್ರೆಯಲ್ಲಿ ಸಿಜೇರಿಯನ್ ಹೆರಿಗೆ ಮಾಡಲು ತಜ್ಞ ವೈದ್ಯರೇ ಇಲ್ಲದಿದ್ದರೂ ಪ್ರತಿ ತಿಂಗಳು ಇಪ್ಪತ್ತಕ್ಕೂ ಹೆಚ್ಚು ಸಿಜೇರಿಯನ್ ಹೆರಿಗೆಗಳಾಗುತ್ತಿವೆ. ಒಟ್ಟಾರೆ ಸಹಜ ಹೆರಿಗೆಗೆ ಆಸ್ಪದವೇ ಇಲ್ಲದಂತಾಗಿದ್ದು, ಸಿಜೇರಿಯನ್ ಮಾಡಿಸುವ ತಜ್ಞರು (ಗೈನಾಕಾಲಜಿಸ್ಟ್) ಇಲ್ಲದೆಯೂ ಸಾಮಾನ್ಯ ವೈದ್ಯರೇ ಇದ್ದು ಇಷ್ಟೊಂದು ಹೆರಿಗೆಗಳಾಗಲು ಹೇಗೆ ಸಾಧ್ಯ ಎಂದು ಅಧಿಕಾರಿಗಳು ಅಚ್ಚರಿಪಟ್ಟಿದ್ದಾರೆ. ಇದರ ಜೊತೆಗೆ ಅನಸೇಸ್ತಿಯಾ ವೈದ್ಯರು ಇಲ್ಲಾ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.


*ದ್ವಿಪಾತ್ರ ನಿರ್ವಹಣೆಯ ಅರವಳಿಕೆ ತಜ್ಞ*

ಬಾಲು ಆಸ್ಪತ್ರೆಯ ವೈದ್ಯೆ ಡಾ ಶೈಲಜಾ ಸುಬ್ಬಯ್ಯಚೆಟ್ಟಿ ಯವರ ಪುತ್ರ ಡಾ ಮನೋಜಂ ಅರಿವಳಿಕೆ ತಜ್ಞರಾಗಿದ್ದು ಅವರು ಎನ್ ಹೆಚ್ ಎಂ ಮೂಲಕ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಾಲು ಆಸ್ಪತ್ರೆಯಲ್ಲಿ ಸಿಜೇರಿಯನ್ ಆಗಿರುವ ಎಲ್ಲಾ ಹೆರಿಗೆಗಳು ಸಹ ಬೆಳಿಗ್ಗೆ ಹನ್ನೊಂದು ಗಂಟೆ ಸಮಯದ ಆಜೂಬಾಜಿನಲ್ಲೇ ಜರುಗಿವೆ. ಬಾಲು ಆಸ್ಪತ್ರೆಯಲ್ಲಿ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಏಕೈಕ ಅರಿವಳಿಕೆ ತಜ್ಞರಾಗಿರುವ ಡಾ ಮನೋಜಂ ರವರು ದ್ವಿಪಾತ್ರ ಮಾಡಿರುವ ಜೊತೆಗೆ ಸರ್ಕಾರಿ ಸಂಬಳ ಪಡೆದು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ವಂಚಿಸಿದ್ದಾರೆ ಎಂದು ಅಧಿಕಾರಿಗಳು ಆಕ್ರೋಶಗೊಂಡಿದ್ದಾರೆ. ಅಧಿಕಾರಿಗಳು ಭೇಟಿ ನೀಡಿರುವ ವಿಷಯ ತಿಳಿದು ಅಲ್ಲಿಗೆ ಬಂದ ಡಾ ಮನೋಜಂ ರವರನ್ನೂ ಸಹ ತರಾಟೆಗೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.


ಅಧಿಕಾರಿಗಳು ಯಾವುದೇ ಮಾಹಿತಿ ನೀಡದೆ, ನಮ್ಮ ಉತ್ತರವನ್ನು ಕೇಳದೆ ನೇರವಾಗಿ ಬಂದು ಸ್ಕ್ಯಾನಿಂಗ್ ರೂಂ ಸೀಜ್ ಮಾಡಿದ್ದಾರೆ. ನಾವು ಯಾವುದೇ ತಪ್ಪು ಮಾಡಿಲ್ಲಾ, ಪ್ರಾಮಾಣಿಕರಾಗಿದ್ದೇವೆ.‌

-ಸುಬ್ಬಯ್ಯ ಚೆಟ್ಟಿ ಬಾಲು ಆಸ್ಪತ್ರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑