ಸಂರಕ್ಷಿಸಲು ಯುವಜನತೆಗೆ ಕರೆ: ಬಿ.ಎಸ್ ಹೇಮಲತಾ

ಚನ್ನಪಟ್ಟಣ: ಜಾಗತಿಕ ಪ್ರಪಂಚದಲ್ಲಿ ವಿಜ್ಞಾನ, ತಂತ್ರಜ್ಞಾನ ಬೆಳವಣಿಗೆಯ ಜೊತೆಗೆ ನಮ್ಮನ್ನೆಲ್ಲಾ ಹೊತ್ತು ನಿಂತಿರುವ ವಸುಂಧರೆಯನ್ನು ಸಂರಕ್ಷಣೆ ಮಾಡುವುದು ನೈಸರ್ಗಿಕ ಪರಿಸರವನ್ನು ಉಳಿಸುವುದು ಇಂದಿನ ಯುವಜನತೆಯ ಬಹು ಮುಖ್ಯವಾದ ಜವಬ್ದಾರಿ ಎಂದು ಶ್ರೀ ಮಹದೇಶ್ವರ ಎಜುಕೇಶನ್ ಟ್ರಸ್ಟ್ ನ ಖಜಾಂಚಿ ಬಿ.ಎಸ್ ಹೇಮಲತಾ ಯುವಜನತೆಗೆ ಕರೆ ನೀಡಿದರು.
ಅವರು ನಗರದ ಜ್ಞಾನ ಸರೋವರ ಪದವಿ ಪೂರ್ವ ಮತ್ತು ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಗರದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಜಾಥಾವನ್ನು ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಸನ್ನಿವೇಶದಲ್ಲಿ ಸಾಂಸ್ಕೃತಿಕ ಪರಿಸರದ ಜೊತೆಗೆ ನೈಸರ್ಗಿಕ ಪರಿಸರವನ್ನು ಉಳಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಪರಿಸರ ಮಾಲಿನ್ಯದಿಂದ ವಾಯುಮಂಡಲದ ಸಂಯೋಜನೆ ಬದಲಾವಣೆಯಾಗಿದೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳ ವಿಸ್ತರಣೆಯ ಹೆಸರಿನಲ್ಲಿ ಮರಗಳ ಮಾರಣಹೋಮ ನಡೆಯುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ತಾಪಮಾನ ಹೆಚ್ಚಿ ಋತುಮಾನವೇ ಬದಲಾಗುತ್ತಿದೆ. ಮರಗಿಡಗಳನ್ನು ಹೆಚ್ಚು ಬೆಳೆಸುವುದರ ಮೂಲಕ ಪರಿಸರವನ್ನು ಉಳಿಸುವ ಸಂಕಲ್ಪವನ್ನು ಮಾಡಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮುದಾಯ ಮತ್ತು ಸಾರ್ವಜನಿಕರು ಕಾರ್ಯೋನ್ಮುಕರಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಗರದ ಮುಖ್ಯ ರಸ್ತೆಗಳಲ್ಲಿ ವಿದ್ಯಾರ್ಥಿಗಳು ಪರಿಸರ ಕುರಿತು ಜಾಗೃತಿ ಮೂಡಿಸುವ ನಾಮಫಲಕಗಳನ್ನು ಹಿಡಿದು ಘೋಷಣೆ ಕೂಗುತ್ತಾ ಗಿಡಗಳನ್ನು ನೆಡುವುದರ ಮೂಲಕ ಮತ್ತು ಗಿಡಗಳನ್ನು ಸಾರ್ವಜನಿಕರಿಗೆ ವಿತರಿಸುತ್ತಾ ಜಾಗೃತಿ ಜಾಥಾವನ್ನು ಯಶಸ್ವಿಯಾಗಿ ನಡೆಸಿದರು. ಈ ಅರಿವಿನ ಜಾಥಾದಲ್ಲಿ ಟ್ರಸ್ಟ್ ನ ಕಾರ್ಯದರ್ಶಿ ಆರ್ ಆದರ್ಶ ಕುಮಾರ್, ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿಗಳು ಮತ್ತು ಭೂಗೋಳಶಾಸ್ತ್ರ ಉಪನ್ಯಾಸಕರಾದ ಹೆಚ್.ಸಿ ಹೊಳೆಸಾಲಯ್ಯ ದಾನವ್, ವ್ಯವಹಾರ ಅಧ್ಯಯನ ಉಪನ್ಯಾಸಕರಾದ ಪ್ರವೀಣ್ ಎಂಆರ್, ಇತಿಹಾಸ ಉಪನ್ಯಾಸಕಿ ಕೆ.ಶೃತಿ, ಲೆಕ್ಕಶಾಸ್ತ್ರ ಉಪನ್ಯಾಸಕಿ ನಿವೇದಿತಾ, ಬೋದಕೇತರ ಸಿಬ್ಬಂದಿ ರೂಪ, ಆರ್ ಅಭಿಲಾಷ್ ಕುಮಾರ್ ಮತ್ತು ಸುಂದರಮ್ಮ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು